FIFA ಕ್ಲಬ್ ವಿಶ್ವಕಪ್‌ನಲ್ಲಿ ಹೊಸ ಆಫ್‌ಸೈಡ್ ಟೆಕ್ನಾಲಜಿ ಪರಿಚಯಿಸಲು ಪ್ಲಾನ್!
ಇದು ಟೆಕ್ನಾಲಜಿ ಜಮಾನ. ಇಂದಿನ ದಿನಗಳಲ್ಲಿ ಎಲ್ಲಾ ವಲಯದಲ್ಲೂ ಟೆಕ್ನಾಲಜಿ ಆಧಾರಿತ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಇದಕ್ಕೆ ಕ್ರೀಡಾ ವಲಯವೂ ಕೂಡ ಹೊರತಾಗಿಲ್ಲ. ಈಗಾಗಲೇ ಕ್ರೀಡಾವಲಯದಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದೀಗ 2022ರ FIFA ಕ್ಲಬ್ ವಿಶ್ವಕಪ್‌ನಲ್ಲಿ ಹೊಸ ಆಟೋಮ್ಯಾಟಿಕ್ ರೆಫರೀಯಿಂಗ್ ಟೆಕ್ನಾಲಜಿಯನ್ನು ಪರಿಚಯಿಸುವುದಕ್ಕೆ ಪ್ಲಾನ್ ಮಾಡಲಾಗಿದೆ. ಈ ಹೊಸ ಟೆಕ್ನಾಲಜಿಯಿಂದ ಆಟದ ಸಮಯದಲ್ಲಿ ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, 2022ರ FIFA ಕ್ಲಬ್ ವಿಶ್ವಕಪ್‌ನಲ್ಲಿ ಹೊಸ ಆಟೋಮ್ಯಾಟಿಕ್ ರೆಫರೀಯಿಂಗ್ ತಂತ್ರಜ್ಞಾನ ಪರಿಚಯಿಸುವುದಕ್ಕೆ ಸಿದ್ಧತೆ ನಡೆದಿದೆ. ಈ ಟೆಕ್ನಾಲಜಿಯಿಂದ ರಿಪ್ಲೇ ಸಿಸ್ಟಂ ಗೋಲ್ ಈವೆಂಟ್ಸ್ ಸಮಯದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಯಾವುದೇ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದರ ಮುಲಕ ನಿಖರವಾದ ತಿರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಹಾಗಾದ್ರೆ ಹೊಸ ಆಟೋಮ್ಯಾಟಿಕ್ ರೆಫರೀಯಿಂಗ್ ಟೆಕ್ನಾಲಜಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ಆಟೋಮ್ಯಾಟಿಕ್ ರೆಫರೀಯಿಂಗ್ ಟೆಕ್ನಾಲಜಿ ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ನಿಖರವಾದ ತಿರ್ಮಾನಗಳನ್ನು ನೀಡುವುದಕ್ಕೆ ಅವಕಾಶ ನೀಡಲಿದೆ. ರಿಪ್ಲೇ ಸಿಸ್ಟಂನಲ್ಲಿ ಗೋಲ್ ಈವೆಂಟ್ಸ್‌ಗಳನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಇದಲ್ಲದೆ ಹೊಸ ಆಟೋಮ್ಯಾಟಿಕ್ ರೆಫರೀಯಿಂಗ್ ಟೆಕ್ನಾಲಜಿಯಲ್ಲಿ ವಿಮರ್ಶೆಗಾಗಿ ಮೂರು-ಆಯಾಮದ ಅನಿಮೇಟೆಡ್ ರಚನೆಯನ್ನು ರಚಿಸಲು ಸ್ಟೇಡಿಯಂ ರೂಫಿಂಗ್‌ನಲ್ಲಿ ಇನ್‌ಸ್ಟಾಲ್ ಮಾಡಲಾದ ಡೇಡಿಕೇಟ್ ಕ್ಯಾಮೆರಾಗಳನ್ನು ಬಳಸಿಕೊಂಡು ಲಿಂಬ್-ಟ್ರ್ಯಾಕಿಂಗ್ ಟೆಕ್ನಾಲಜಿ ಸಿಸ್ಟಮ್ ಒಳಗೊಂಡಿದೆ.

ಇನ್ನು ಈ ಹೊಸ ಟೆಕ್ನಾಲಜಿಯನ್ನು ಇನ್‌ಸ್ಟಾಲ್ ಮಾಡಿದ ನಂತರ, ಪೂರ್ತಿ ಪಂದ್ಯಗಳನ್ನು "ಕೆಲವೇ ಸೆಕೆಂಡುಗಳ ವಿಳಂಬದೊಂದಿಗೆ" ವರ್ಚುವಲ್ ಅನಿಮೇಶನ್‌ನಂತೆ ವೀಕ್ಷಿಸಬಹುದು. ಅಲ್ಲದೆ "ಸೆಮಿ-ಆಟೋಮೇಟೆಡ್ ಆಫ್‌ಸೈಡ್‌ನೊಂದಿಗೆ, ನಾವು ಡೇಟಾ ಪಾಯಿಂಟ್‌ಗಳನ್ನು ಕೂಡ ಪಡೆಯಬಹುದು. ಈ ಡೇಟಾ ಪಾಯಿಂಟ್‌ಗಳನ್ನು ಅನಿಮೇಷನ್‌ಗೆ ಅನುವಾದಿಸಬಹುದು" ಎಂದು FIFA ಫುಟ್‌ಬಾಲ್ ತಂತ್ರಜ್ಞಾನದ ಮುಖ್ಯಸ್ಥ ಸೆಬಾಸ್ಟಿಯನ್ ರೂಂಜ್ ಹೇಳಿದ್ದಾರೆ.

ಈ ಡೇಟಾ ಪಾಯಿಂಟ್‌ಗಳನ್ನು ಸಂಗ್ರಹ ಆನಿಮೇಷನ್‌ಗೆ ಅನುವಾಧಿಸಿದ ನಂತರ ಆಟಗಾರರ ಭುಜ ಎಲ್ಲಿದೆ, ಮೊಣಕಾಲು ಎಲ್ಲಿದೆ ಅನ್ನೊದನ್ನ ಪತ್ತೆ ಹಚ್ಚಬಹುದಾಗಿದೆ. ಅಷ್ಟೇ ಅಲ್ಲ ಆ ಡೇಟಾವನ್ನು ತೆಗೆದುಕೊಳ್ಳುವ ಮೂಲಕ, 3D ಜಗತ್ತನ್ನು ಪ್ರವೇಶಿಸಬಹುದಾಗಿದೆ. ಇದರಿಂದ ಆಟಗಾರನು ಆನ್‌ಸೈಡ್‌ನಲ್ಲಿ ಇದ್ದಾನೆಯೇ, ಆ ಪ್ಲೇಯರ್ ಎಷ್ಟು ಆಫ್‌ಸೈಡ್ ಅಥವಾ ಆನ್‌ಸೈಡ್ ಆಗಿತ್ತು ಅನ್ನೊದನ್ನ ಸಂಪೂರ್ಣವಾಗಿ ವಿವರಿಸಬಹುದಾಗಿದೆ. ಟಿವಿ ಮತ್ತು ದೈತ್ಯ ಸ್ಕ್ರೀನ್ ಆಪರೇಟರ್‌ಗಳು ಆಫ್‌ಸೈಡ್ ಮತ್ತು ಆನ್‌ಸೈಡ್ ನಿರ್ಧಾರಗಳ ಬಗ್ಗೆ ವೀಕ್ಷಕರಿಗೆ ಸ್ಪಷ್ಟವಾದ ರೀತಿಯಲ್ಲಿ ತಿಳಿಸಬಹುದಾಗಿದೆ.

ಆಫ್‌ಸೈಡ್‌ಗಾಗಿ VAR ಅನ್ನು ಬಳಸಬಹುದಾ?
ಗೋಲ್ ಈವೆಂಟ್‌ಗಳಲ್ಲಿ ಆಫ್‌ಸೈಡ್ ಉಲ್ಲಂಘನೆಗಳನ್ನು ನಿರ್ಧರಿಸಲು VARನ ಪ್ರಸ್ತುತ ಬಳಕೆಯು ಈಗಲೂ ಟೈಟ್ ಗೇಮ್ಸ್ ಸನ್ನಿವೇಶದಲ್ಲಿ ನಿಖರವಾದ ಪಲಿತಾಂಶ ನೀಡಲು ಸಹಾಯ ಮಾಡುವುದಿಲ್ಲ. ಫೈನಲ್ ಕಾಲ್ ಮಾಡುವ ಮೊದಲು VAR ಅಧಿಕಾರಿಯು ಆಫ್‌ಸೈಡ್ ಲೈನ್‌ಗಳನ್ನು ಗುರುತಿಸಲು ಮತ್ತು ಅರ್ಥೈಸಲು ಅಗತ್ಯವಿರುವ ಕಾರಣ ಮಾನವ ತೀರ್ಪು ಮತ್ತು ದೋಷಕಾಣಲಿದೆ. ಈವೆಂಟ್‌ಗೆ ಸಂಪೂರ್ಣವಾಗಿ ಲಂಬವಾದ ಕ್ಯಾಮೆರಾ ಕೋನವನ್ನು ಪಡೆಯುವಲ್ಲಿನ ತೊಂದರೆಯನ್ನು ಗಮನಿಸಿದರೆ, VAR ಅಧಿಕಾರಿಯು ಈ ಕ್ಷಣವನ್ನು ಸಂಪೂರ್ಣವಾಗಿ ಮರುಸೃಷ್ಟಿಸುವುದು ಕಷ್ಟಕರವಾಗಿದೆ. ಆದರಿಂದ ಹೊಸ ಗೇಮ್ ಪ್ಲೇ ಅನ್ನು ವರ್ಚುವಲೈಸ್ ಮಾಡಲಾಗಿದೆ, ಇದರಲ್ಲಿ ಪ್ರತಿ ದೇಹದ ಭಾಗವು ಅನಿಮೇಟೆಡ್ ಕ್ಷೇತ್ರದಲ್ಲಿ ಲಾಗ್ ಆಗಿರುವುದರಿಂದ ಹೊಸ ಸ್ವಯಂಚಾಲಿತ ಅಂಗ ತಂತ್ರಜ್ಞಾನವು ಉತ್ತಮ ನಿಖರತೆಯನ್ನು ಅನುಮತಿಸುತ್ತದೆ. ಆದರಿಂದ ಹೊಸ ತಂತ್ರಜ್ಞಾನ ಫಿಪಾ ವಿಶ್ವಕಪ್‌ನಲ್ಲಿ ಹೊಸ ಅನುಭವ ನೀಡೋದು ಪಕ್ಕಾ ಆಗಿದೆ.


Click it and Unblock the Notifications








