Home
ಸುದ್ದಿಜಾಲ

ಫೇಸ್‌ಬುಕ್‌ ಬಗ್‌ ಕಂಡುಹಿಡಿದರೆ ಬರೋಬ್ಬರಿ 35 ಲಕ್ಷ ರೂ. ಬಹುಮಾನ..!

By Gizbot Bureau

ತನ್ನ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಬಳಕೆದಾರರಿಗೆ ಹೆಚ್ಚು ಸುರಕ್ಷಿತವಾಗಿಸುವ ಉದ್ದೇಶದಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ದೋಷಗಳು ಅಥವಾ ನ್ಯೂನತೆಗಳನ್ನು ಕಂಡುಹಿಡಿದ ಹ್ಯಾಕರ್‌ಗಳಿಗೆ ಹೆಚ್ಚಿನ ಕೊಡುಗೆಯನ್ನು ನೀಡಲು ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ನಿರ್ಧರಿಸಿದೆ. ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಫೇಸ್‌ಬುಕ್‌ ಬರೆದುಕೊಂಡಿದೆ. ಬಗ್ ಬೌಂಟಿ ಪ್ರೋಗ್ರಾಂನಲ್ಲಿ ಭಾಗವಹಿಸುವವರು ಕೇವಲ ಎಫ್‌ಬಿಯ ದುರ್ಬಲತೆ ಗಮನಿಸುವುದಷ್ಟೇ ಅಲ್ಲದೇ ಭದ್ರತಾ ನ್ಯೂನತೆಗಳಿಗಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ವಿಶ್ಲೇಷಿಸಲು ಕೂಡ ಅವಕಾಶವನ್ನು ಕೂಡ ಫೇಸ್‌ಬುಕ್‌ ಒದಗಿಸಿದೆ.

ಬಗ್‌ ಕಂಡುಹಿಡಿದರೆ ಬಹುಮಾನ

ಬಗ್‌ ಕಂಡುಹಿಡಿದರೆ ಬಹುಮಾನ

ಬೌಂಟಿ ಹಂಟರ್ಸ್‌ ನೈಜ ಸಮಯದಲ್ಲಿ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸುವುದರಿಂದ ತಮ್ಮ ಪ್ರಯತ್ನಗಳಲ್ಲಿ ಹೆಚ್ಚು ನಿಖರತೆಯನ್ನು ಕಾಣಲು ಸಾಧ್ಯವಾಗುತ್ತದೆ. ಫೇಸ್‌ಬುಕ್‌ನ ಭದ್ರತಾ ಎಂಜಿನಿಯರಿಂಗ್ ವ್ಯವಸ್ಥಾಪಕ ಡಾನ್ ಗುರ್‌ಫಿಂಕೆಲ್ ಹೇಳಿರುವಂತೆ, ಈ ಬದಲಾವಣೆಯು ಬಗ್ ಬೌಂಟಿ ಸಮುದಾಯವು ನಮ್ಮೊಂದಿಗೆ ಹಂಚಿಕೊಳ್ಳಬಹುದಾದ ಭದ್ರತಾ ಸಂಶೋಧನಾ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಈ ಬಾಹ್ಯ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಸಂಭವನೀಯ ದೋಷಗಳನ್ನು ಕಂಡುಹಿಡಿದರೆ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದಿದ್ದಾರೆ.

ಕನಿಷ್ಠ 500 ಡಾಲರ್‌

ಕನಿಷ್ಠ 500 ಡಾಲರ್‌

ಹೊಸ ನೀತಿಗಳ ಪ್ರಕಾರ, ಭದ್ರತಾ ನ್ಯೂನತೆಗಳನ್ನು ಕಂಡುಹಿಡಿದು ವರದಿ ಮಾಡುವ ಬೌಂಟಿ ಹಂಟರ್ಸ್‌ ಕನಿಷ್ಠ 500 ಡಾಲರ್‌ (ಕಡಿಮೆ ಭದ್ರತಾ ಬೆದರಿಕೆಗಳಿಗಾಗಿ) ಬಹುಮಾನ ಪಡೆಯಲು ಅರ್ಹರಾಗಿರುತ್ತಾರೆ. ಗಮನಿಸಬೇಕಾದ ಸಂಗತಿ ಏನೆಂದರೆ, ಬೌಂಟಿ ಹಂಟರ್ಸ್‌ಗೆ ನೀಡುವ ಬಹುಮಾನದ ಮೊತ್ತಕ್ಕೆ ಗರಿಷ್ಠ ಮಿತಿಯಿಲ್ಲದಿರುವುದು. ದೋಷದ ಬಗೆಗಿನ ವರದಿಯ ಪ್ರಭಾವ ಮತ್ತು ನಮ್ಮ ನಿಯಮಗಳಲ್ಲಿ ಸೂಚಿಸಲಾದ ಇತರ ಅಂಶಗಳ ಆಧಾರದ ಮೇಲೆ ಕನಿಷ್ಠ 500 ಡಾಲರ್‌ ಬಹುಮಾನ ನೀಡುತ್ತೇವೆ ಎಂದು ಬ್ಲಾಗ್‌ ಪೋಸ್ಟ್‌ನಲ್ಲಿ ಫೇಸ್‌ಬುಕ್‌ ಬರೆದಿದೆ.

1000 ದಿಂದ 15,000 ಡಾಲರ್‌

1000 ದಿಂದ 15,000 ಡಾಲರ್‌

ಇನ್ನು, ಸ್ಥಳೀಯ ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ದೋಷ ಅಥವಾ ನ್ಯೂನತೆಗಳ ಶೋಧನೆಗೆ 1000 ಡಾಲರ್‌ನಿಂದ 15,000 ಡಾಲರ್‌ವರೆಗೆ ಬೋನಸ್‌ ನೀಡುವುದಾಗಿ ಫೇಸ್‌ಬುಕ್ ಹೇಳಿದ್ದು, ಈ ಮೊತ್ತವನ್ನು ಅಂತಿಮ ಬೌಂಟಿ ಪಾವತಿಗೆ ನೀಡಲಾಗುತ್ತದೆ ಎಂಬುದನ್ನು ಬ್ಲಾಗ್‌ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಪ್ರಮುಖ ಕಂಪನಿಗಳಿಂದ ಬಹುಮಾನ

ಪ್ರಮುಖ ಕಂಪನಿಗಳಿಂದ ಬಹುಮಾನ

ಒಂದು ನಿರ್ದಿಷ್ಟ ದೋಷವನ್ನು ಕಂಡುಹಿಡಿದಿದ್ದಕ್ಕಾಗಿ ಬೌಂಟಿಗೆ ಫೇಸ್‌ಬುಕ್ ನೀಡಿರುವ ಗರಿಷ್ಠ ಮೊತ್ತ 50,000 ಡಾಲರ್‌ ಎಂದು ಹಿಂದಿನ ವರದಿಗಳು ಬಹಿರಂಗಪಡಿಸಿವೆ. ಗೂಗಲ್ ಕೂಡ ತನ್ನ ಗರಿಷ್ಠ ಬೌಂಟಿ ಪಾವತಿಯನ್ನು 15,000 ರಿಂದ 30,000 ಡಾಲರ್‌ಗೆ ದ್ವಿಗುಣಗೊಳಿಸಿದೆ. ಮತ್ತೊಂದೆಡೆ ಆಪಲ್ ಕೂಡ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಹೊಂದಿದ್ದು, ಗರಿಷ್ಠ 1 ಮಿಲಿಯನ್ ಡಾಲರ್‌ವರೆಗೂ ಬಹುಮಾನ ನೀಡುತ್ತೆ.

Best Mobiles in India

English summary
Find security bugs in Facebook apps or services and earn Rs. 35 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+