ಫಿಂಗರ್ಸ್‌ ಕಂಪೆನಿಯ ಪ್ರೊ ವಾಯರ್‌ಲೆಸ್‌ ಪವರ್‌ಬ್ಯಾಂಕ್‌ ಬಿಡುಗಡೆ!

|

ಟೆಕ್‌ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ವಿಸ್ತಾರವಾದಷ್ಟು ಪವರ್‌ಬ್ಯಾಂಕ್‌ಗಳ ಬೇಡಿಕೆ ಜಾಸ್ತಿಯಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಪವರ್‌ದಾಹವನ್ನ ನೀಗಿಸುವ ಪವರ್‌ಬ್ಯಾಂಕ್‌ಗಳಿಗೆ ಬಾರಿ ಬೇಡಿಕೆ ಇದ್ದು. ಈಗಾಗಲೇ ಹಲವಾರು ಕಂಪೆನಿಗಳ ಪವರ್‌ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವಿವಿಧ mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಪವರ್‌ ಬ್ಯಾಂಕ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಇದೀಗ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಲ್ಲಿ ಸೈ ಎನಿಸಿಕೊಂಡಿರುವ ಫಿಂಗರ್ಸ್‌ ಕಂಪೆನಿ ಭಾರತದಲ್ಲಿ ಹೊಸ ಪವರ್‌ಬ್ಯಾಂಕ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಫಿಂಗರ್ಸ್‌ ಕಂಪೆನಿ ತನ್ನ ಹೊಸ ಪ್ರೊ ವಾಯರ್‌ಲೆಸ್‌ (PD-QC) 10,000mAh ಪವರ್‌ ಬ್ಯಾಂಕ್‌ ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಈ ಪವರ್‌ ಬ್ಯಾಂಕ್‌ ಸ್ಮಾರ್ಟ್‌ಫೋನ್‌ ಸೇರಿದಂತೆ ಲ್ಯಾಪ್‌ಟಾಪ್‌, ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಚಾರ್ಜಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ವೇಗದ ಚಾರ್ಜಿಂಗ್‌ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಏಕಕಾಲದಲ್ಲಿ ವಾಯರ್‌ ಹಾಗೂ ವಾಯರ್‌ ಲೆಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದ್ದು, ಇದು 'ಎ'ದರ್ಜಿಯೆ ಲಿ-ಪಾಲಿಮರ್‌ ಬ್ಯಾಟರಿಯನ್ನ ಒಳಗೊಂಡಿದೆ.

ವಿನ್ಯಾಸ

ವಿನ್ಯಾಸ

ಈ ಪವರ್ ಬ್ಯಾಂಕ್‌ ಅನ್ನು PD-QC ಟೆಕ್ನಾಲಜಿಯಿಂದ ವಿನ್ಯಾಸಗೊಳಿಸಲಾಗಿದೆ. PD ಎಂದರೆ ಪವರ್‌ ಡೆಲಿವರಿ ಹಾಗೂ ಕ್ಯೂಸಿ ಎಂದರೆ ಕ್ವಿಕ್ ಚಾರ್ಜ್ (QC) ಎಂಬುದಾಗಿದೆ. ಈ ಎರಡು ತಂತ್ರಜ್ಞಾನವನ್ನ ಈ ಪವರ್‌ಬ್ಯಾಂಕ್‌ನಲ್ಲಿ ಎಂಬೆಡ್ ಮಾಡಲಾಗಿದೆ. ಈ ಟೆಕ್ನಾಲಜಿಯಿಂದಾಗಿ ಪವರ್‌ಬ್ಯಾಂಕ್‌ ನ ಸ್ವಯಂ-ಚಾರ್ಜಿಂಗ್ ಸಮಯವನ್ನು ಸುಮಾರು 40% ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ ಇದರಿಂದಾಗಿ 18W ವಿದ್ಯುತ್ ಉತ್ಪಾದನೆಯನ್ನು ತಲುಪಿಸಲು ಸಾಧ್ಯವಾಗಲಿದೆ ಎಂದು ಕಂಪೆನಿ ಹೇಳಿದೆ.

ವಿಶೇಷತೆಗಳೇನು

ವಿಶೇಷತೆಗಳೇನು

ಅಲ್ಲದೆ ಈ ಪ್ರೊ ವೈರ್‌ಲೆಸ್ ಪವರ್‌ ಬ್ಯಾಂಕ್‌ ಸ್ಲಿಮ್ ವಿನ್ಯಾಸವನ್ನ ಹೊಂದಿದ್ದು, ವೈರ್‌ಲೆಸ್ ಚಾರ್ಜರ್ ಮತ್ತು ಪೋರ್ಟಬಲ್ ಚಾರ್ಜರ್‌ ಕಾಂಬಿನೇಶನ್‌ ಹೊಂದಿರುವ 2 ಇನ್ 1 ಪವರ್‌ ಬ್ಯಾಂಕ್‌ ಆಗಿದೆ. ಇದಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಏಕಕಾಲದಲ್ಲಿ ವಾಯರ್‌ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಇದನ್ನ ಪವರ್ ಡೆಲಿವರಿ (PD) ವೇಗದ ಚಾರ್ಜಿಂಗ್ ಟೆಕ್ನಾಲಜಿಯಿಂದ ವಿನ್ಯಾಸಗೊಳಿಸಿರುವುದರಿಂದ ಇದು ಕನೆಕ್ಟಿವ್‌ಡಿವೈಸ್‌ಗಳನ್ನು ಸ್ವಯಂಚಾಲಿತವಾಗಿ ಹಾಗೂ ತ್ವರಿತವಾಗಿ ಚಾರ್ಜಿಂಗ್ ಮಾಡುತ್ತದೆ.

ಪವರ್‌ ಪ್ರೊಟೆಕ್ಷನ್‌

ಪವರ್‌ ಪ್ರೊಟೆಕ್ಷನ್‌

ಇದು ಅಲ್ಟ್ರಾ-ಲೈಟ್ ಮತ್ತು ಸ್ಲಿಮ್ ವಿನ್ಯಾಸದಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ತನ್ನ ಡಿಜಿಟಲ್ ಡಿ್‌ಪ್ಲೇಯಲ್ಲಿ ತೋರಿಸುತ್ತದೆ. ಜೊತೆಗೆ ನೀವು ಪ್ರಯಾಣ ಮಾಡುವಾಗ ಇಡೀ ದಿನ ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳಿಗೆ ಚಾರ್ಜಿಂಗ್ ಒದಗಿಸಲು ಇದು PD ಮತ್ತು QC ಫೀಚರ್ಸ್‌ಗಳನ್ನ ಬೆಂಬಲಿಸಲಿದ್ದು, ಇದು ಇಂಟೆಲಿಜೆಂಟ್ ಸೇಫ್ಟಿಯೊಂದಿಗೆ ಸ್ಕ್ರಾಚ್-ರೆಸಿಸ್ಟೆಂಟ್ ಶೆಲ್ ಅನ್ನು ಹೊಂದಿದೆ. ಇದರಿಂದಾಗಿ ಒವರ್‌ ಚಾರ್ಜಿಂಗ್‌, ಶಾರ್ಟ್‌ ಸರ್ಕ್ಯೂಟ್‌, ನಿಂದ 9 ಲೆಯರ್‌ ಪ್ರೊಟೆಕ್ಷನ್‌ ಅನ್ನು ನೀಡುತ್ತದೆ.

ಪವರ್‌ಬ್ಯಾಂಕ್‌ನ ಸಾಮರ್ಥ್ಯ

ಪವರ್‌ಬ್ಯಾಂಕ್‌ನ ಸಾಮರ್ಥ್ಯ

ಸದ್ಯ ಫಿಂಗರ್ಸ್ ಕಂಪೆನಿ ಪ್ರೊ ವೈರ್‌ಲೆಸ್ ಮತ್ತು ಪ್ಯೂಯೆಲ್‌ ಪ್ಲಸ್‌ ಪವರ್‌ಬ್ಯಾಂಕ್‌ ಎಂಬ ಎರಡು ಮಾದರಿಯಲ್ಲಿ ಪವರ್‌ಬ್ಯಾಂಕ್‌ಗಳನ್ನ ಪರಿಚಯಿಸಿದ್ದು. ಎರಡು ಪವರ್‌ಬ್ಯಾಂಕ್‌ಗಳು ಕೂಡ 10,000mAh ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿವೆ. ಅಲ್ಲದೆ ಈ ಎರಡು ಪವರ್‌ಬ್ಯಾಂಕ್‌ಗಳು ಕೂಡ ವಾಯರ್‌ ಮತ್ತು ವಾಐರ್‌ಲೆಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು. PDQC ತಂತ್ರಜ್ಞಾನವನ್ನ ಬೆಂಬಲಿಸಲಿವೆ. ಅಲ್ಲದೆ 18W ವೇಗದ ಚಾರ್ಜಿಂಗ್‌ ಅನ್ನು ನೀಡುತ್ತವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಫಿಂಗರ್ಸ್‌ ಕಂಪೆನಿಯ ಈ ಹೊಸ ಪವರ್‌ ಬ್ಯಾಂಕ್‌ಗಳು ಉತ್ತಮ ಟೆಕ್ನಾಲಜಿಯನ್ನ ಒಳಗೊಂಡಿದ್ದು ಉತ್ತಮ ಪವರ್‌ಬ್ಯಾಕ್‌ ಆಪ್‌ ಅನ್ನು ನೀಡಲಿದೆ. ಈಗಾಗಿ ಈ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸೂಚನೆ ನೀಡಿದ್ದು ಫಿಂಗರ್ಸ್ ಕಂಪೆನಿಯ ಪ್ರೊ ವೈರ್‌ಲೆಸ್ ಮಾದರಿಯ ಪವರ್‌ಬ್ಯಾಂಕ್‌ 2999 ರೂ.ಬೆಲೆಯನ್ನ ಹೊಂದಿದ್ದರೆ, ಪ್ಯೂಯೆಲ್‌ ಪ್ಲಸ್‌ ಪವರ್‌ಬ್ಯಾಂಕ್‌ 2499 ರೂ ಬೆಲೆಯನ್ನ ಹೊಂದಿದ್ದು, ಭಾರತದಾದ್ಯಂತ ಎಲ್ಲಾ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.

Best Mobiles in India

English summary
The latest power bank from Fingers supports wired and wireless charging simultaneously.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X