ಫೈರ್‌ಬೋಲ್ಟ್‌ನಿಂದ ಮತ್ತೊಂದು ಸ್ಮಾರ್ಟ್‌ವಾಚ್ ಅನಾವರಣ! ಲುಕ್ ನೋಡಿದ್ರೆ ಫಿದಾ ಆಗ್ತೀರಾ!
ಫೈರ್‌ಬೋಲ್ಟ್ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಸ್ಟೈಲಿಶ್ ಲುಕ್ ಮಾತ್ರವಲ್ಲದೆ ನವೀನ ಮಾದರಿಯ ಟೆಕ್ನಾಲಜಿಯ ಸ್ಮಾರ್ಟ್‌ವಾಚ್‌ಗಳಿಗೆ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಫೈರ್-ಬೋಲ್ಟ್ ಆರ್ಮರ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಸಿಂಗಲ್ ರೌಂಡ್-ಡಯಲ್ ಸ್ಮಾರ್ಟ್ ವಾಚ್ ಆಗಿದೆ.
ಹೌದು, ಫೈರ್-ಬೋಲ್ಟ್ ಆರ್ಮರ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಒರಟಾದ, ಸ್ಕ್ರಾಚ್-ರೆಸಿಸ್ಟೆಂಟ್ ವಿನ್ಯಾಸದೊಂದಿಗೆ ಬರಲಿದೆ. ಇದು ಪೂರ್ಣ ಲೋಹದ ಕೇಸ್ ಮತ್ತು ಮೇಲ್ಭಾಗದಲ್ಲಿ ಬಾಳಿಕೆ ಬರುವ ಗ್ಲಾಸ್ ಅನ್ನು ಒಳಗೊಂಡಿರುತ್ತದೆ. ಜೊತೆಗೆ ಕಿರೀಟ ಮತ್ತು ಪವರ್ ಬಟನ್ ಹೊಂದಿದೆ. ಹಾಗಾದ್ರೆ ಸ್ಮಾರ್ಟ್‌ವಾಚ್ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಆರ್ಮರ್ ಸ್ಮಾರ್ಟ್‌ವಾಚ್ ಹೇಗಿದೆ?
ಫೈರ್-ಬೋಲ್ಟ್ ಆರ್ಮರ್ ಸ್ಮಾರ್ಟ್‌ವಾಚ್ 1.6 ಇಂಚಿನ ಬಿಗ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 400 x 400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 600 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್‌ನೊಂದಿಗೆ ಬರುತ್ತದೆ. ಇದಲ್ಲದೆ ವಾಯ್ಸ್ ಅಸಿಸ್ಟೆಂಟ್ ಮತ್ತು ಇತರ ಸ್ಮಾರ್ಟ್ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.
ಈ ಸ್ಮಾರ್ಟ್‌ವಾಚ್ ಮಲ್ಟಿ ಸ್ಪೋರ್ಟ್ಸ್ ಮೋಡ್‌ಗಳನ್ನು ಸಹ ಹೊಂದಿದೆ. ಇದು ಫೈರ್-ಬೋಲ್ಟ್ ಹೆಲ್ತ್ ಸೂಟ್ ಅಡಿಯಲ್ಲಿ, ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್ ಮತ್ತು ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ನಂತಹ ಹೆಲ್ತ್ ಫೀಚರ್ಸ್‌ಗಳನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ.

ಇನ್ನು ಸ್ಮಾರ್ಟ್‌ವಾಚ್ 600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಕ್ಲಾಸಿಕ್ ಮೋಡ್‌ನಲ್ಲಿ 8 ದಿನಗಳವರೆಗೆ ಮತ್ತು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಸ್ಮಾರ್ಟ್ ಅಧಿಸೂಚನೆಗಳು, ಹವಾಮಾನ ನವೀಕರಣಗಳು, ಸ್ಟಾಪ್‌ವಾಚ್, ಅಲಾರ್ಮ್, ಸಂಗೀತ ಮತ್ತು ಕ್ಯಾಮರಾ ನಿಯಂತ್ರಣದಂತಹ ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಆರ್ಮರ್ ಸ್ಮಾರ್ಟ್‌ವಾಚ್ ಭಾರತದಲ್ಲಿ 1,499ರೂ ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಕಪ್ಪು, ಕ್ಯಾಮೊ ಬ್ಲಾಕ್, ಗ್ರೀನ್, ಗೋಲ್ಡ್ ಬ್ಲ್ಯಾಕ್ ಮತ್ತು ಸಿಲ್ವರ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದು ಅಮೆಜಾನ್.ಇನ್ ಮೂಲಕ ಖರೀದಿಸುವುದಕ್ಕೆ ಲಭ್ಯವಾಗಲಿದೆ.

ಇದಲ್ಲದೆ ಫೈರ್-ಬೋಲ್ಟ್ ಕಂಪೆನಿ ಇದೇ ವರ್ಷ ಪರಿಚಯಿಸಿದ್ದ ಫೈರ್‌ಬೋಲ್ಟ್ ಫೀನಿಕ್ಸ್ ವಾಚ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ವಾಚ್ 1.43 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 466x466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 700 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿರುವ ರೌಂಡ್ ಡಯಲ್ ಅನ್ನು ಹೊಂದಿದೆ.
ಇದು ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದ್ದು, ಫೋನ್ ಕರೆಗಳನ್ನು ವಾಚ್ ಮೂಲಕವೇ ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್ ವಾಚ್‌ನಲ್ಲಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಫೈರ್-ಬೋಲ್ಟ್ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಂತಹ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇನ್ನು ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್ ವಾಚ್ ನಿಮಗೆ ಹಲವು ಆಯ್ಕೆಯ ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ, ಸ್ಮಾರ್ಟ್‌ವಾಚ್ ಸಿರಿ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ.


Click it and Unblock the Notifications








