ಪ್ರೀಮಿಯಂ ಲುಕ್‌ನಲ್ಲಿ ಹೊಸ ವಾಚ್ ಪರಿಚಯಿಸಿದ ಫೈರ್‌ಬೋಲ್ಟ್! ಯುವಜನತೆಯೆ ಟಾರ್ಗೆಟ್!
ಸ್ಮಾರ್ಟ್‌ವಾಚ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಫೈರ್‌ಬೋಲ್ಟ್ ಮತ್ತೊಂದು ಹೊಸ ವಾಚ್ ಪರಿಚಯಿಸಿದೆ. ಪ್ರೀಮಿಯಂ ಪ್ರಿಯರಿಗಾಗಿಯೇ ವಿನ್ಯಾಸಗೊಳಿಸಲಾದ ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್ ಇದೀಗ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಕ್ಲಾಸಿಕ್ ಲುಕ್‌ಕಾಗಿ ಸ್ಟೇನ್‌ಲೆಸ್ ಸ್ಟೀಲ್ ವಿನ್ಯಾಸದೊಂದಿಗೆ ಬರಲಿದೆ.
ಹೌದು, ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಇನ್ನು ಸ್ಮಾರ್ಟ್‌ವಾಚ್ HD ಡಿಸ್‌ಪ್ಲೇ, ಬ್ಲೂಟೂತ್ ಕಾಲಿಂಗ್ ಬೆಂಬಲ, ತಿರುಗುವ ಕಿರೀಟ, IP67 ರೇಟಿಂಗ್, ವಾಯ್ಸ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ. ಹಾಗಾದ್ರೆ ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಅವಲಾಂಚೆ ಫೀಚರ್ಸ್ ಹೇಗಿದೆ?
ಫೈರ್-ಬೋಲ್ಟ್ ಅವಲಾಂಚೆ ವೃತ್ತಾಕಾರದ ಡಯಲ್ ಅನ್ನು ಹೊಂದಿದೆ. ಇದು 1.28 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 240-ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್ ಬೆಂಬಲವನ್ನು ಪಡೆದಿದ್ದು, ತ್ವರಿತ ಡಯಲ್ ಪ್ರವೇಶವನ್ನು ಹೊಂದಿದೆ. ಇದರಿಂದ ಬಳಕೆದಾರರು ವಾಚ್‌ನಿಂದಲೇ ನೇರವಾಗಿ ಸ್ಮಾರ್ಟ್‌ಫೋನ್ ಕರೆಗಳನ್ನು ನಿಯಂತ್ರಿಸಬಹುದಾಗಿದೆ.
ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್ ಸ್ಮಾರ್ಟ್ ನೋಟಿಫಿಕೇಶನ್ ಬೆಂಬಲವನ್ನು ಸಹ ಹೊಂದಿದೆ. ಇದು ಬಳಕೆದಾರರಿಗೆ ವಿವಿಧ ಅಪ್ಲಿಕೇಶನ್‌ಗಳಿಂದ ಅಧಿಸೂಚನೆಗಳನ್ನು ಸಿಂಗಲ್ ಲುಕ್‌ನಲ್ಲಿ ಪರಿಶೀಲಿಸುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಫೈರ್-ಬೋಲ್ಟ್ ಅವಲಾಂಚ್ ಅನ್ನು ಸ್ಟೇನ್‌ಲೆಸ್ ಸ್ಟೀಲ್ ಮತ್ತು ಸಿಲಿಕೋನ್ ರೂಪಾಂತರದ ಆಯ್ಕೆಗಳಲ್ಲಿ ಕೂಡ ಆಯ್ಕೆ ಮಾಡಬಹುದಾಗಿದೆ. ಸ್ಟೇನ್‌ಲೆಸ್ ಸ್ಟೀಲ್ ಮಾದರಿಯು ಐದು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಈ ಎರಡೂ ಮಾದರಿಗಳು ವಾಟರ್ ಮತ್ತು ಧೂಳಿನಿಂದ ರಕ್ಷಣೆಗಾಗಿ IP67 ರೇಟಿಂಗ್ ಅನ್ನು ಹೊಂದಿದೆ.
ಇನ್ನು ಫಿಟ್‌ನೆಸ್ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ, ಫೈರ್-ಬೋಲ್ಟ್ ಅವಲಾಂಚೆ ಸ್ಮಾರ್ಟ್‌ವಾಚ್‌ನಲ್ಲಿ ವಿವಿದ ಆಕ್ಟಿವಿಟಿಗಳನ್ನು ನೀಡಲಾಗಿದೆ. ಇದರಲ್ಲಿ ಹೃದಯ ಬಡಿತ ಮಾನಿಟರ್, ಸ್ಲೀಪ್ ಮಾನಿಟರ್, SpO2 ಮಾನಿಟರ್ ನೀಡಲಾಗಿದೆ. ಇದಲ್ಲದೆ ಮನರಂಜನೆಗಾಗಿ ಇನ್‌ಬಿಲ್ಟ್ ಗೇಮ್ಸ್‌ಗಳನ್ನು ಒಳಗೊಂಡಿದೆ. ಸ್ಮಾರ್ಟ್ ಫೀಚರ್ಸ್‌ಗಳು ಕ್ಯಾಮೆರಾ ಕಂಟ್ರೋಲ್, ವೆದರ್ ಅಪ್ಡೇಟ್, ವಾಯ್ಸ್ ಅಸಿಸ್ಟೆಂಟ್, ಅಲಾರಾಂ, ಮ್ಯೂಸಿಕ್ ಕಂಟ್ರೋಲ್, ಸ್ಟಾಪ್‌ವಾಚ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ 220mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಏಳು ದಿನಗಳವರೆಗೆ ಬ್ಯಾಕಪ್ ನೀಡಲಿದೆ.
ಭಾರತದಲ್ಲಿ ಫೈರ್-ಬೋಲ್ಟ್ ಅವಲಾಂಚ್ ಬೆಲೆ, ಲಭ್ಯತೆ
ಭಾರತದಲ್ಲಿ ಫೈರ್-ಬೋಲ್ಟ್ ಅವಲಾಂಚ್ ಸ್ಮಾರ್ಟ್‌ವಾಚ್ 2,399ರೂ. ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲ್ಯಾಕ್, ಗೋಲ್ಡ್ ಬ್ಲ್ಯಾಕ್, ಬ್ಲ್ಯಾಕ್ ಗೋಲ್ಡ್ ಸಿಲ್ವರ್, ಬ್ಲೂ ರೆಡ್ ಮತ್ತು ಬ್ಲೂ ಬಣ್ಣಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಬಿಲ್ಡ್‌ನಲ್ಲಿ ಲಭ್ಯವಿದೆ. ಇನ್ನು ಸ್ಮಾರ್ಟ್‌ವಾಚ್ ಬ್ರ್ಯಾಂಡ್ ಪ್ರಿಪೇಯ್ಡ್ ಆರ್ಡರ್‌ಗಳ ಮೇಲೆ 5% ರಿಯಾಯಿತಿಯನ್ನು ನೀಡುತ್ತಿದೆ. ಇದನ್ನು ಅಧಿಕೃತ ಫೈರ್-ಬೋಲ್ಟ್ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್‌ನಿಂದ ಖರೀದಿಸಬಹುದಾಗಿದೆ.
ಇದಲ್ಲದೆ ಫೈರ್-ಬೋಲ್ಟ್ ಕಂಪೆನಿ ಇತ್ತೀಚಿಗೆ ಫೈರ್‌ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ವಾಚ್ 1.43 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 466x466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್ ವಾಚ್‌ನಲ್ಲಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ.
ಇನ್ನು ಹೆಚ್ಚುವರಿಯಾಗಿ, ಫೈರ್-ಬೋಲ್ಟ್ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಂತಹ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್ ವಾಚ್ ನಿಮಗೆ ಹಲವು ಆಯ್ಕೆಯ ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ, ಸ್ಮಾರ್ಟ್‌ವಾಚ್ ಸಿರಿ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ.


Click it and Unblock the Notifications








