Home
ಸುದ್ದಿಜಾಲ

Fire Boltt Blizzard : ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌!

ಫೈರ್‌ ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದಲ್ಲಿ ಭಾರಿ ಕ್ರೇಜ್‌ ಇದೆ. ಇದಕ್ಕೆ ತಕ್ಕಂತೆ ಫೈರ್‌ಬೋಲ್ಟ್‌ ಕಂಪೆನಿ ಕೂಡ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಹೊಸ ಫೈರ್‌ಬೋಲ್ಟ್‌ ಬ್ಲಿಝಾರ್ಡ್‌ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ 1.28-ಇಂಚಿನ ಡಿಸ್‌ಪ್ಲೇ ಒಳಗೊಂಡಿದ್ದು, ವೃತ್ತಾಕಾರದ ಡಯಲ್‌ ಅನ್ನು ಹೊಂದಿದೆ.

ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌!

ಹೌದು, ಫೈರ್‌ಬೋಲ್ಟ್‌ ಕಂಪೆನಿ ಭಾರತದಲ್ಲಿ ಹೊಸ ಫೈರ್ ಬೋಲ್ಟ್ ಬ್ಲಿಝಾರ್ಡ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್ ಮತ್ತು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದ. ಜೊತೆಗೆ ಇದು 120 ಸ್ಪೋರ್ಟ್ಸ್‌ಮೋಡ್‌ಗಳನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್ ಬೋಲ್ಟ್ ಬ್ಲಿಝಾರ್ಡ್ ಸ್ಮಾರ್ಟ್‌ವಾಚ್‌ 1.28-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ವೃತ್ತಾಕಾರದ ಡಯಲ್‌ ಅನ್ನು ಹೊಂದಿದ್ದು, ಹೈಟೆಕ್ ಸೆರಾಮಿಕ್‌ನಿಂದ ಮಾಡಿದ ಡ್ಯುಯಲ್ ಶೇಡ್ಸ್‌ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ವಿರೋಧಿ ತುಕ್ಕು ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ತಿರುಗುವ ಕಿರೀಟ, ಹೋಮ್ ಬಟನ್ ಮತ್ತು ಬ್ಯಾಕ್ ಬಟನ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್ ಜೊತೆಗ 120 ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ.

ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌!

ಫೈರ್ ಬೋಲ್ಟ್ ಬ್ಲಿಝಾರ್ಡ್ ಸ್ಮಾರ್ಟ್‌ವಾಚ್‌ ಒಂದು ಇನ್‌ಬಿಲ್ಟ್‌ ಸ್ಪೀಕರ್ ಅನ್ನು ಹೊಂದಿದೆ. ಅಲ್ಲದೆ ಈ ಡಿವೈಸ್‌ನಲ್ಲಿ ನೇರವಾಗಿ ಬ್ಲೂಟೂತ್ ಕರೆಗೆ ಸಹಾಯ ಮಾಡಲು ಡಯಲ್ ಪ್ಯಾಡ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ವಾಚ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದ್ದು, ಸ್ಮಾರ್ಟ್ ಅಧಿಸೂಚನೆಗಳು, ಕ್ಯಾಮರಾ ಕಂಟ್ರೋಲ್‌, ವೆದರ್‌ ಅಪ್ಡೇಟ್‌ನಂತಹ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ 220mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 7 ದಿನಗಳ ಬಾಳಿಕೆಯನ್ನು ನೀಡಲಿದೆ.

ಫೈರ್ ಬೋಲ್ಟ್ ಬ್ಲಿಝಾರ್ಡ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,499ರೂ. ಬೆಲೆಯನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ ಸಿಲ್ವರ್, ಸಿಲ್ವರ್ ಮತ್ತು ಬ್ಲ್ಯಾಕ್, ಸಿಲ್ವರ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ ಫೆಬ್ರವರಿ 23 ರಿಂದ ಫ್ಲಿಪ್‌ಕಾರ್ಟ್ ಮತ್ತು ಫೈರ್‌ಬೋಲ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ.

ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌!

ಇದಲ್ಲದೆ ಫೈರ್-ಬೋಲ್ಟ್‌ ಕಂಪನಿ ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ಫೈರ್‌ಬೋಲ್ಟ್‌ ಕ್ವಾಂಟಮ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.28 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಇದು ಬಳಕೆದಾರರಿಗೆ ವಾಚ್‌ನಿಂದ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ AI ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲಿಪಿಂಗ್‌ ಟ್ರ್ಯಾಕ್‌ ಅನ್ನು ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಹಲವು ಸ್ಪೋರ್ಟ್ಸ್‌ ಮೋಡ್‌ಗಳು ಮತ್ತು 50ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಸಹ ನೀಡಲಿದೆ. ಫೈರ್-ಬೋಲ್ಟ್ ಕ್ವಾಂಟಮ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್ ವಿ 5.1 ಅನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ 5.0 ಮತ್ತು ಐಒಎಸ್ 9.0 ನಲ್ಲಿ ರನ್‌ ಆಗುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಆಗಲಿದೆ.

Best Mobiles in India

English summary
The latest offering is called the Fire Boltt Blizzard. It is similar to the Fire Boltt Quantum.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+