ಹೊಸ ಇಯರ್‌ಬಡ್ಸ್ ಪರಿಚಯಿಸಿದ ಫೈರ್‌ಬೋಲ್ಟ್: ದೀರ್ಘಾವಧಿ ಬ್ಯಾಟರಿ ಬಾಳಿಕೆ!
ವಿಭಿನ್ನ ಶೈಲಿಯ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಫೈರ್‌ಬೋಲ್ಟ್ ಇದೀಗ ಹೊಸ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಪೋನ್ ಪರಿಚಯಿಸಿದೆ. ಇದನ್ನು ಫೈರ್ ಬ್ಯಾಂಡ್ ನೋವಾ ಎಂದು ಹೆಸರಿಸಲಾಗಿದ್ದು ಸ್ಪೋರ್ಟ್ಸ್ ಪ್ರಿಯರ ಮನಗೆಲ್ಲುವ ಸೂಚನೆ ನೀಡಿದೆ. ಇದು ಸ್ವತಃ ರೆಕ್ಕೆಯ ವಿನ್ಯಾಸವನ್ನು ಹೊಂದಿದ್ದು ರನ್ನಿಂಗ್ ಸಂದರ್ಭಗಳಲ್ಲಿ ಕೂಡ ಹೆಚ್ಚು ಸುರಕ್ಷಿತ ಫಿಟ್‌ಗೆ ಸಹಾಯ ಮಾಡುತ್ತದೆ.
ಹೌದು, ಫೈರ್‌ಬೋಲ್ಟ್ ಕಂಪೆನಿ ಫೈರ್ ಬ್ಯಾಂಡ್ ನೋವಾ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಇದು ಏಕಕಾಲದಲ್ಲಿ ಎರಡು ಡಿವಸ್‌ಗಳಿಗೆ ಕನೆಕ್ಟ್ ಮಾಡುವ ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ ವಿಶ್ವಾಸಾರ್ಹ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬಳಸಿಲಿದೆ. ಹಾಗಾದ್ರೆ ಹೊಸ ಫೈರ್‌ಬ್ಯಾಂಡ್ ನೋವಾ ಇಯರ್‌ಬಡ್ಸ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್ ಬ್ಯಾಂಡ್ ನೋವಾ ಇಯರ್‌ಬಡ್ಸ್ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಧ್ವನಿಯನ್ನು ನೀಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಈ ಫೈರ್ ಬ್ಯಾಂಡ್ ನೋವಾ 14.2mm ಆಡಿಯೋ ಡ್ರೈವರ್‌ಗಳು ಮತ್ತು ಸ್ಪಷ್ಟ ಕರೆಗಳಿಗಾಗಿ ಪರಿಸರ ಶಬ್ದ ರದ್ದತಿ ತಂತ್ರಜ್ಞಾನವನ್ನು ಒಳಗೊಂಡಿದೆ. ಇನ್ನು ಈ ನೆಕ್‌ಬ್ಯಾಂಡ್ ಅನ್ನು ಸುಲಭವಾಗಿ ಬಳಸಲು ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಎರಡು ಡಿವೈಸ್‌ಗಳನ್ನು ಏಕಕಾಲದಲ್ಲಿ ಕನೆಕ್ಟ್ ಮಾಡುವುದಕ್ಕಾಗಿ ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸಲಿದೆ.
ಫೈರ್ ಬ್ಯಾಂಡ್ ನೋವಾ ಇಯರ್‌ಬಡ್ಸ್ ವಿಶ್ವಾಸಾರ್ಹ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬಳಸುತ್ತದೆ. ಇದು 40 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ನೀಡಲಿದ್ದು, ಟೈಪ್-ಸಿ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 100 ನಿಮಿಷಗಳ ಪ್ಲೇಟೈಮ್ ಅನ್ನು ಒದಗಿಸಲಿದೆ.

ಇನ್ನು ಈ ಇಯರ್‌ಬಡ್ಸ್ IPX5 ರೇಟಿಂಗ್‌ನೊಂದಿಗೆ ಸ್ಪ್ಲಾಶ್ ಮತ್ತು ಬೆವರು-ನಿರೋಧಕವಾಗಿದೆ. ಇದು ಧ್ವನಿ ಸಹಾಯ, ಬಹು-ಪಾಯಿಂಟ್ ಸಂಪರ್ಕವನ್ನು ಬೆಂಬಲಿಸುತ್ತದೆ. ಜೊತೆಗೆ ವಾಲ್ಯೂಮ್, ಸಂಗೀತ ಮತ್ತು ಕರೆಗಳಿಗೆ ಇನ್‌ಬಿಲ್ಟ್ ಕಂಟ್ರೋಲ್ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಫೈರ್-ಬೋಲ್ಟ್ ಫೈರ್ ಬ್ಯಾಂಡ್ ನೋವಾ ಭಾರತದಲ್ಲಿ ಪರಿಚಯಾತ್ಮಕ ಬೆಲೆಯಲ್ಲಿ 999ರೂ ಗಳಿಗೆ ದೊರೆಯಲಿದೆ. ಇದನ್ನು ನೀವು ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಇನ್ನು ಫೈರ್-ಬೋಲ್ಟ್ ಕಂಪೆನಿ ಇದೇ ವರ್ಷ ಭಾರತದಲ್ಲಿ ಹೊಸದಾಗಿ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಪರಿಚಯಿಸಿದೆ. ಇದು ಕ್ವಾಡ್ ಮೈಕ್ AI-ENC ಫೀಚರ್ಸ್ ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್ ಇನ್-ಇಯರ್ ಶೈಲಿಯ ವಿನ್ಯಾಸವನ್ನು ಹೊಂದಿದ್ದು, 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಸ್ಪಷ್ಟವಾದ ಸಂವಹನಕ್ಕಾಗಿ ಕರೆಗಳ ಸಮಯದಲ್ಲಿ ಆಂಬಿಯೆಂಟ್ ಸೌಂಡ್ ಅನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಇನ್ನು ಈ ಇಯರ್‌ಬಡ್ಸ್ ಮೊಬೈಲ್ ಗೇಮಿಂಗ್ ಬಳಕೆದಾರರಿಗೆ ಸೂಕ್ತವಾದ ಸೌಲಭ್ಯವಾಗಿದೆ. ಇದಕ್ಕಾಗಿಯೇ 40ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದು ಸೂಪರ್ ಸಿಂಕ್ ತಂತ್ರಜ್ಞಾನದೊಂದಿಗೆ ಬ್ಲೂಟೂತ್ v5.3 ಸೇರ್ಪಡೆಯು ಆಡಿಯೊ ಸಿಂಕ್ರೊನೈಸೇಶನ್ ಮತ್ತು ಸಂಪರ್ಕವನ್ನು ಹೆಚ್ಚಿಸಲಿದೆ. ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ IPX4 ಸ್ಪ್ಲಾಶ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಬರಲಿದೆ. ಇದು ಸ್ಮಾಲ್ ಸ್ಪ್ಲಾಶ್‌ಗಳು ಮತ್ತು ಬೆವರುಗಳಿಂದ ರಕ್ಷಣೆಯನ್ನು ನೀಡಲಿದೆ.
ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಒಟ್ಟು 40 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇವುಗಳು ವೇಗದ ಚಾರ್ಜ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದು ಟೈಪ್ C ಪೋರ್ಟ್ ಮೂಲಕ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಟೈಮ್ ಅನ್ನು ಅನುಮತಿಸಲಿದೆ. ಇದು ತ್ವರಿತ ಚಾರ್ಜಿಂಗ್ ಪರಿಹಾರಗಳ ಅಗತ್ಯವಿರುವ ಬಳಕೆದಾರರಿಗೆ ಇದು ಗಮನಾರ್ಹ ಪ್ರಯೋಜನವಾಗಿದೆ. ಈ ಇಯರ್‌ಬಡ್ಸ್ AI ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸಲಿದ್ದು, 1-ವರ್ಷದ ವಾರಂಟಿಯೊಂದಿಗೆ ಬರಲಿದೆ.


Click it and Unblock the Notifications








