ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಲಾಂಚ್: ಬೆಲೆ ಕೇವಲ 999ರೂ ಮಾತ್ರ
ಇಯರ್‌ಬಡ್ಸ್ ವಿಭಾಗದಲ್ಲಿ Fire-Boltt ಕಂಪೆನಿಯ ಡಿವೈಸ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ವಿಭಿನ್ನ ಇಯರ್‌ಬಡ್ಸ್‌ಗಳ ಮೂಲಕ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಅದರ ಮುಂದುವರೆದ ಭಾಗವೆಂಬಂತೆ ಹೊಸದಾಗಿ ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ.
ಹೌದು, ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಭಾರತಕ್ಕೆ ಎಂಟ್ರಿ ನೀಡಿದೆ. ಇನ್ನು ಈ ಇಯರ್‌ಬಡ್ಸ್ ಇನ್-ಇಯರ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಅಳವಡಿಸಲಾಗಿದೆ. ಹಾಗಾದ್ರೆ ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಫೀಚರ್ಸ್ ಹೇಗಿದೆ?
ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಕ್ವಾಡ್ ಮೈಕ್ AI-ENC ಫೀಚರ್ಸ್ ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್ ಇನ್-ಇಯರ್ ಶೈಲಿಯ ವಿನ್ಯಾಸವನ್ನು ಹೊಂದಿದ್ದು, 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಸ್ಪಷ್ಟವಾದ ಸಂವಹನಕ್ಕಾಗಿ ಕರೆಗಳ ಸಮಯದಲ್ಲಿ ಆಂಬಿಯೆಂಟ್ ಸೌಂಡ್ ಅನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಇನ್ನು ಈ ಇಯರ್‌ಬಡ್ಸ್ ಮೊಬೈಲ್ ಗೇಮಿಂಗ್ ಬಳಕೆದಾರರಿಗೆ ಸೂಕ್ತವಾದ ಸೌಲಭ್ಯವಾಗಿದೆ. ಇದಕ್ಕಾಗಿಯೇ 40ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದು ಸೂಪರ್ ಸಿಂಕ್ ತಂತ್ರಜ್ಞಾನದೊಂದಿಗೆ ಬ್ಲೂಟೂತ್ v5.3 ಸೇರ್ಪಡೆಯು ಆಡಿಯೊ ಸಿಂಕ್ರೊನೈಸೇಶನ್ ಮತ್ತು ಸಂಪರ್ಕವನ್ನು ಹೆಚ್ಚಿಸಲಿದೆ. ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ IPX4 ಸ್ಪ್ಲಾಶ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಬರಲಿದೆ. ಇದು ಸ್ಮಾಲ್ ಸ್ಪ್ಲಾಶ್‌ಗಳು ಮತ್ತು ಬೆವರುಗಳಿಂದ ರಕ್ಷಣೆಯನ್ನು ನೀಡಲಿದೆ.

ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಇಯರ್‌ಬಡ್ಸ್ ಒಟ್ಟು 40 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇವುಗಳು ವೇಗದ ಚಾರ್ಜ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದು ಟೈಪ್ C ಪೋರ್ಟ್ ಮೂಲಕ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಟೈಮ್ ಅನ್ನು ಅನುಮತಿಸಲಿದೆ. ಇದು ತ್ವರಿತ ಚಾರ್ಜಿಂಗ್ ಪರಿಹಾರಗಳ ಅಗತ್ಯವಿರುವ ಬಳಕೆದಾರರಿಗೆ ಇದು ಗಮನಾರ್ಹ ಪ್ರಯೋಜನವಾಗಿದೆ. ಈ ಇಯರ್‌ಬಡ್ಸ್ AI ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸಲಿದ್ದು, 1-ವರ್ಷದ ವಾರಂಟಿಯೊಂದಿಗೆ ಬರಲಿದೆ.

ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಫೈರ್-ಪಾಡ್ಸ್ ಜೀಯಸ್ ಭಾರತದಲ್ಲಿ 999ರೂ ಬೆಲೆಯನ್ನು ಹೊಂದಿದೆ. ಇದು ಬ್ಲಾಕ್ ಕ್ರೋಮ್, ನೇವಿ ಶಿಮ್ಮರ್ ಮತ್ತು ವೈಟ್ ಸಿಲ್ವರ್ ಕ್ರೋಮ್‌ನಲ್ಲಿ ಖರೀದಿಸಬಹುದಾಗಿದೆ. ಇದನ್ನು ನೀವು ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸುವುದಕ್ಕೆ ಅವಕಾಶವಿದೆ.
ಇನ್ನು ಫೈರ್-ಬೋಲ್ಟ್ ಕಂಪೆನಿ ಕಳೆದ ವರ್ಷದ ನವೆಂಬರ್‌ನಲ್ಲಿ ಹೊಸದಾಗಿ ಫೈರ್‌ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಲ್‌ವೇಸ್ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 466 x 466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 750 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ ಕ್ರಿಯಾತ್ಮಕ ತಿರುಗುವ ಕಿರೀಟ ಮತ್ತು ಹೆಚ್ಚುವರಿ ಬಟನ್‌ಗಳನ್ನು ಬಳಸಿಕೊಂಡು ಗಡಿಯಾರವನ್ನು ನಿಯಂತ್ರಿಸಬಹುದು.
ಫೈರ್-ಬೋಲ್ಟ್ ಕಂಪೆನಿ ಹೇಳುವಂತೆ ಈ ಸ್ಮಾರ್ಟ್ ವಾಚ್ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಮ್ಯೂಸಿಕ್ ಅನ್ನು ಸ್ಟೋರೇಜ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ವಾಚ್‌ನಲ್ಲಿ 4GB ಸ್ಟೋರೇಜ್ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.


Click it and Unblock the Notifications








