ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್‌ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
ಫೈರ್‌ಬೋಲ್ಟ್ ಕಂಪೆನಿ ಭಾರತದ ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಸದ್ಯ ಇದೀಗ ಫೈರ್‌ಬೋಲ್ಟ್ ಕಂಪೆನಿ ಹೊಸದಾಗಿ ಮೂರು ಸ್ಮಾರ್ಟ್‌ವಾಚ್‌ಗಳನ್ನು ಆಫ್‌ಲೈನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳನ್ನು ಫೈರ್-ಬೋಲ್ಟ್ ಸ್ಯಾಟರ್ನ್, ಫೈರ್‌ಬೋಲ್ಟ್ ಟಾಕ್ 3 ಮತ್ತು ಫೈರ್‌ಬೋಲ್ಟ್ ನಿಂಜಾ-ಫಿಟ್ ಎಂದು ಹೆಸರಿಸಲಾಗಿದೆ. ಈ ವಾಚ್‌ಗಳು ಭಿನ್ನ ಮಾದರಿಯ ಡಿಸೈನ್ ಹಾಗೂ ವಿಶೇಷತೆಗಳಿಂದ ಗಮನಸೆಳೆದಿವೆ.

ಹೌದು, ಫೈರ್‌ಬೋಲ್ಟ್ ಕಂಪೆನಿ ಭಾರತದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದೆ. ತನ್ನ ಮೂರು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಆಫ್‌ಲೈನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಮೂರು ಸ್ಮಾರ್ಟ್‌ವಾಚ್‌ಗಳು ಎಲ್ಲಾ ವಯೋಮಾನದವರನ್ನು ಸೆಳೆಯುವ ವಿನ್ಯಾಸವನ್ನು ಹೊಂದಿವೆ. ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿವೆ. ಹಾಗಾದ್ರೆ ಈ ಮೂರು ಸ್ಮಾರ್ಟ್‌ವಾಚ್‌ಗಳ ಬೆಲೆ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಫೈರ್-ಬೋಲ್ಟ್ ಸ್ಯಾಟರ್ನ್ ಫೀಚರ್ಸ್
ಫೈರ್‌ಬೋಲ್ಟ್‌ನ ಹೊಸ ಸ್ಮಾರ್ಟ್‌ವಾಚ್‌ಗಳಲ್ಲಿ ಸ್ಯಾಟರ್ನ್ ಸ್ಮಾರ್ಟ್‌ವಾಚ್ ಸಾಕಷ್ಟು ಆಕರ್ಷಕವಾಗಿ ಗುರುತಿಸಿಕೊಂಡಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲ್ ಫೀಚರ್ಸ್ ಅನ್ನು ಬೆಂಬಲಿಸಲಿದ್ದು, 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 368x448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ ಮೈಕ್ ಅನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್‌ಗೆ ಉಪಯೋಗವಾಗಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದು IP 67 ರೇಟಿಂಗ್ ಹೊಂದಿದ್ದು, ನೀರು ಮತ್ತು ಬೆವರಿನಿಂದ ಸ್ಮಾರ್ಟ್‌ವಾಚ್ ಅನ್ನು ರಕ್ಷಿಸಲಿದೆ.

ಫೈರ್-ಬೋಲ್ಟ್ ಟಾಕ್ 3 ಫೀಚರ್ಸ್
ಫೈರ್-ಬೋಲ್ಟ್ ಟಾಕ್ 3 ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ವಾಚ್ ಆಗಿದೆ. ಈ ಸ್ಮಾರ್ಟ್‌ವಾಚ್ 1.28 ಇಂಚಿನ ಹೆಚ್‌ಡಿ ಫುಲ್ ಟಚ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್ ಮಲ್ಟಿ ವಾಚ್ ಫೇಸ್‌ಗಳನ್ನು ಹೊಂದಿದೆ. ಆದರಿಂದ ಸ್ಮಾರ್ಟ್‌ವಾಚ್ ಫೇಸ್ ಅನ್ನು ನಿಮ್ಮ ಆದ್ಯತೆಗೆ ತಕ್ಕಂತೆ ಅನ್ನು ಸೆಟ್ ಮಾಡಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ 123 ಸ್ಪೋರ್ಟ್ಸ್ ಮೋಡ್ ಹೊಂದಿದ್ದು, IP67 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಹೊಂದಿದೆ. ಬೆವರು ಮತ್ತು ನೀರಿನಿಂದ ರಕ್ಷಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ ಬ್ಲ್ಯಾಕ್, ಬ್ಲೂ, ಗ್ರೀನ್, ಸಿಲ್ವರ್ ಮತ್ತು ರೋಸ್ ಕಲರ್ ಆಯ್ಕೆಗಳಲ್ಲಿ ದೊರೆಯಲಿದೆ.
ಫೈರ್-ಬೋಲ್ಟ್ ನಿಂಜಾ-ಫಿಟ್ ಫೀಚರ್ಸ್
ಈ ಸ್ಮಾರ್ಟ್‌ವಾಚ್ ಅನ್ನು ಫಿಟ್‌ನೆಸ್ ಪ್ರೇಮಿಗಳಿಗಾಗಿ ಡಿಸೈನ್ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ 1.69 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್ 123 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದು IP68 ರೇಟಿಂಗ್ ಹೊಂದಿದ್ದು, ಬೆವರು ಮತ್ತು ನೀರಿನಿಂದ ರಕ್ಷಣೆಯನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ ಮಲ್ಟಿ ವಾಚ್ ಫೇಸ್‌ಗಳನ್ನು ಹೊಂದಿದ್ದು, ನಿಮ್ಮ ಅಧ್ಯತೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಬೆಳ್ಳಿ, ಗುಲಾಬಿ, ನೀಲಿ, ಕೆಂಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದ ಆಫ್‌ಲೈನ್‌ನಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ವಾಚ್‌ಗಳು ಬಜೆಟ್ ಬೆಲೆಯಲ್ಲಿ ದೊರೆಯಲಿವೆ. ಇದರಲ್ಲಿ ಫೈರ್-ಬೋಲ್ಟ್ ಸ್ಯಾಟರ್ನ್ ಸ್ಮಾರ್ಟ್‌ವಾಚ್ 3999ರೂ.ಬೆಲೆ ಹೊಂದಿದೆ. ಇನ್ನು ಫೈರ್-ಬೋಲ್ಟ್ ಟಾಕ್ 3 ಸ್ಮಾರ್ಟ್‌ವಾಚ್ 2199ರೂ. ಬೆಲೆಯಲ್ಲಿ ಬರಲಿದೆ. ಫೈರ್-ಬೋಲ್ಟ್ ನಿಂಜಾ-ಫಿಟ್ ಸ್ಮಾರ್ಟ್‌ವಾಚ್ ಬೆಲೆ 1,299ರೂ.ಆಗಿದೆ. ಈ ಸ್ಮಾರ್ಟ್‌ವಾಚ್‌ಗಳು ಭಾರತದಲ್ಲಿ 750+ ನಗರಗಳಲ್ಲಿ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿವೆ.


Click it and Unblock the Notifications








