Fire-Boltt: ಫೈರ್‌ಬೋಲ್ಟ್‌ನಿಂದ ಮೂರು ಹೊಸ ಸ್ಮಾರ್ಟ್‌ವಾಚ್ ಅನಾವರಣ! ಡಿಸೈನ್ ಹೇಗಿದೆ?
ಫೈರ್‌ಬೋಲ್ಟ್ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ತನ್ನ ಸ್ಟೈಲಿಶ್ ಹಾಗೂ ಗುಣಮಟ್ಟದ ವಾಚ್‌ಗಳಿಂದ ಯುವಜನರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಇದೀಗ ಹೊಸದಾಗಿ ಫೈರ್-ಬೋಲ್ಟ್ ಹೊಸ ಕೇಸ್ ಎಕ್ಸ್ ವಾಚ್ ಸರಣಿಯಲ್ಲಿ ಹೊಸ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಫೈರ್-ಬೋಲ್ಟ್ ಹುರಾಕನ್ (FBR002), ಎಲಿಮೆಂಟೊ (FBR003), ಮತ್ತು ಡಯಾಬ್ಲೊ (FBR004) ಎಂದು ಹೆಸರಿಸಲಾಗಿದೆ.
ಹೌದು, ಫೈರ್-ಬೋಲ್ಟ್ ಹುರಾಕನ್ (FBR002), ಎಲಿಮೆಂಟೊ (FBR003), ಮತ್ತು ಡಯಾಬ್ಲೊ (FBR004) ಸ್ಮಾರ್ಟ್‌ವಾಚ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ಗಳು ಒಂದಕ್ಕಿಂತ ಒಂದು ವಿಶೇಷವಾದ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಈ ಮೂರು ಸ್ಮಾರ್ಟ್ ವಾಚ್‌ಗಳು 1.95-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ, ಪಾವತಿ ಉದ್ದೇಶಗಳಿಗಾಗಿ NFC ಬೆಂಬಲವನ್ನು ಸಹ ಹೊಂದಿವೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಹುರಾಕನ್ ವಾಚ್ ಫೀಚರ್ಸ್ ಹೇಗಿದೆ?
ಫೈರ್-ಬೋಲ್ಟ್ ಹುರಾಕನ್ ಸ್ಮಾರ್ಟ್‌ವಾಚ್ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 320 x 380 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಅಲ್ಯೂಮಿನಿಯಂ ಮಿಶ್ರಲೋಹದ ರಕ್ಷಣಾತ್ಮಕ ಕೇಸ್ ಅನ್ನು ಸಿಲಿಕೋನ್ ಪಟ್ಟಿಯೊಂದಿಗೆ ಹೊಂದಿದೆ. ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದ್ದು, ಸ್ಮಾರ್ಟ್‌ವಾಚ್ ಕರೆಗಳನ್ನು ನಿಯಂತ್ರಣ ಮಾಡಬಹುದಾಗಿದೆ.
ಫೈರ್-ಬೋಲ್ಟ್ ಡಯಾಬ್ಲೋ ವಾಚ್ ಫೀಚರ್ಸ್ ಹೇಗಿದೆ?
ಫೈರ್-ಬೋಲ್ಟ್ ಡಯಾಬ್ಲೋ ವಾಚ್ ಕೂಡ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 320 x 380 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ವಾಚ್ ಲೋಹದ ಪಟ್ಟಿಯೊಂದಿಗೆ 316L ಸ್ಟೇನ್ಲೆಸ್ ಸ್ಟೀಲ್ ಕೇಸ್ ಅನ್ನು ಹೊಂದಿದೆ. ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದ್ದು, ಇನ್‌ಬಿಲ್ಟ್ ಮೈಕ್ರೊಫೋನ್ ಒಳಗೊಂಡಿದೆ.

ಫೈರ್-ಬೋಲ್ಟ್ ಎಲಿಮೆಂಟೊ ವಾಚ್ ಫೀಚರ್ಸ್ ಹೇಗಿದೆ?
ಫೈರ್-ಬೋಲ್ಟ್ ಎಲಿಮೆಂಟೊ ವಾಚ್ ಲೋಹದ ಪಟ್ಟಿಯೊಂದಿಗೆ 316L ಸ್ಟೇನ್ಲೆಸ್ ಸ್ಟೀಲ್ ಕೇಸ್ ಅನ್ನು ಹೊಂದಿದೆ. ಇನ್ನು ವಾಚ್ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಸ್ಮಾರ್ಟ್‌ವಾಚ್ ಹೆಲ್ತ್ ಫೀಚರ್ಸ್‌ಗಳಲ್ಲಿ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆ ಮಾನಿಟರಿಂಗ್ ಮತ್ತು ಮಹಿಳೆಯರ ಆರೋಗ್ಯದಂತಹ ಕೆಲವು ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ಸಹ ಹೊಂದಿವೆ.
ಈ ಮೂರು ವಾಚ್‌ಗಳು ಕೂಡ ಬಹುತೇಕ ಒಂದೇ ಮಾದರಿಯ ಫೀಚರ್ಸ್‌ಗಳನ್ನು ಹೊಂದಿವೆ. ಇವುಗಳು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಪಡೆದುಕೊಂಡಿವೆ. ಅಲ್ಲದೆ 108 ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ನೀಡಲಿದ್ದು, ಪಾವತಿ ಉದ್ದೇಶಗಳಿಗಾಗಿ NFC ಅನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಹುರಾಕನ್ ವಾಚ್ 6999ರೂ ಬೆಲೆಯನ್ನು ಹೊಂದಿದೆ. ಇದು ಕಪ್ಪು, ಸಿಲ್ವರ್ ಆರೆಂಜ್, ಸಿಲ್ವರ್ ಬ್ಲಾಕ್ ಮತ್ತು ಕಪ್ಪು ಹಸಿರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಫೈರ್-ಬೋಲ್ಟ್ ಎಲಿಮೆಂಟೊ ವಾಚ್ 7999ರೂ ಬೆಲೆಯನ್ನು ಹೊಂದಿದೆ. ಇದು ಕಪ್ಪು, ಬೆಳ್ಳಿ ಮತ್ತು ಚಿನ್ನದ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಫೈರ್-ಬೋಲ್ಟ್ ಡಯಾಬ್ಲೊ ವಾಚ್ 5999ರೂ ಬೆಲೆಯನ್ನು ಹೊಂದಿದೆ. ಇದು ಕಪ್ಪು, ಬಿಳಿ, ಕಿತ್ತಳೆ, ಕೆಂಪು ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.
ಈ ಮೂರು ಸ್ಮಾರ್ಟ್‌ವಾಚ್‌ಗಳನ್ನು ಡಿಸೆಂಬರ್ 25 ರಂದು ಕಂಪನಿಯ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಮಾರಾಟವಾಗಲಿದೆ.


Click it and Unblock the Notifications








