Home
ಸುದ್ದಿಜಾಲ

ಭಾರತಕ್ಕೆ ಹೊಸ ಲಕ್ಸುರಿ ಸ್ಮಾರ್ಟ್‌ವಾಚ್‌ ಎಂಟ್ರಿ! ಯಾವುದು ಈ ಸ್ಮಾರ್ಟ್‌ವಾಚ್‌!

ಫೈರ್-ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ಅನುಗುಣವಾಗಿ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ತನ್ನ ಲಕ್ಸುರಿ ಸ್ಮಾರ್ಟ್‌ವಾಚ್‌ಗಳ ಮೂಲಕ ಎಲ್ಲರಿಂದ ಸೈ ಎನಿಸಿಕೊಂಡಿದೆ. ಇದೀಗ ಹೊಸ ಫೈರ್‌ಬೋಲ್ಟ್‌ ಇನ್ಫಿನಿಟಿ ಲಕ್ಸ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ಹೌದು, ಫೈರ್-ಬೋಲ್ಟ್ ಇನ್ಫಿನಿಟಿ ಲಕ್ಸ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ 300ಕ್ಕೂ ಹೆಚ್ಚು ಹಾಡುಗಳನ್ನು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ 4GB ಆನ್‌ಬೋರ್ಡ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಹೊಸ ಲಕ್ಸುರಿ ಸ್ಮಾರ್ಟ್‌ವಾಚ್‌ ಎಂಟ್ರಿ! ಯಾವುದು ಈ ಸ್ಮಾರ್ಟ್‌ವಾಚ್‌!

ಫೈರ್-ಬೋಲ್ಟ್ ಇನ್ಫಿನಿಟಿ ಲಕ್ಸ್‌ ಫೀಚರ್ಸ್‌ ಹೇಗಿದೆ?
ಫೈರ್-ಬೋಲ್ಟ್ ಇನ್ಫಿನಿಟಿ ಲಕ್ಸ್‌ ಸ್ಮಾರ್ಟ್‌ವಾಚ್‌ 1.6 ಇಂಚಿನ ಬಿಗ್‌ ಡಿಸ್‌ಪ್ಲೇ ಹೊಂದಿದೆ. ಇದು ವೃತ್ತಾಕಾರದ ಡಯಲ್‌ನೊಂದಿಗೆ ಬರುತ್ತದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಮತ್ತು 600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ತಿರುಗುವ ಕಿರೀಟವನ್ನು ಒಳಗೊಂಡಿದ್ದು, ಬಲಭಾಗದಲ್ಲಿ ಮೂರು ಬಟನ್‌ಗಳನ್ನು ಹೊಂದಿದೆ.

ಈ ಸ್ಮಾರ್ಟ್‌ವಾಚ್‌ ಸ್ಟೇನ್‌ಲೆಸ್ ಸ್ಟೀಲ್ ಬಾಡಿಯನ್ನು ಹೊಂದಿದ್ದು, ನೀರು ಮತ್ತು ದೂಳಿನಿಂದ ರಕ್ಷಣೆ ನೀಡುವುದಕ್ಕಾಗಿ IP67 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಫೈರ್ ಬೋಲ್ಟ್ ಇನ್ಫಿನಿಟಿ ಲಕ್ಸ್‌ ಹಾರ್ಟ್‌ಬೀಟ್‌ ಸೆನ್ಸಾರ್‌, SpO2 ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕರ್ ಮತ್ತು ಮಹಿಳೆಯರ ಆರೋಗ್ಯ ಮಾನಿಟರ್ ಅನ್ನು ಹೊಂದಿದೆ. ಜೊತೆಗೆ ಉಸಿರಾಟದ ತರಬೇತಿ, ಸಿಟ್ಟಿಂಗ್‌ ರಿಮೈಂಡರ್‌ ಅನ್ನು ನೀಡಲಿದೆ. ಇದಿಷ್ಟೇ ಅಲ್ಲದೆ ಸ್ಮಾರ್ಟ್‌ವಾಚ್‌ 300 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ.

ಇನ್ನು ಫೈರ್-ಬೋಲ್ಟ್ ಇನ್ಫಿನಿಟಿ ಲಕ್ಸ್‌ ಸ್ಮಾರ್ಟ್‌ವಾಚ್‌ 300ಕ್ಕೂ ಹೆಚ್ಚು ಹಾಡುಗಳನ್ನು ಸ್ಟೋರೇಜ್‌ ಮಾಡುವು ಕ್ಯಾಪಾಸಿಟಿ ಹೊಂದಿದೆ. ಇದಕ್ಕಾಗಿ 4GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ TWS ಇಯರ್‌ಫೋನ್‌ಗಳಿಗೆ ಸಹ ಕನೆಕ್ಟ್‌ ಮಾಡುವು ಅವಕಾಶವನ್ನು ನೀಡಲಿದೆ. ಸ್ಮಾರ್ಟ್‌ವಾಚ್‌ನಲ್ಲಿ ಸಾಂಗ್‌ ಪ್ಲೇ ಮಾಡಿ ಇಯರ್‌ಫೋನ್‌ನಲ್ಲಿ ಕೇಳುವುದಕ್ಕೆ ಸಾಧ್ಯವಾಗಲಿದೆ.

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದ್ದು, ಇದಕ್ಕಾಗಿಯೇ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಸ್ಮಾರ್ಟ್ ನೋಟಿಫಿಕೇಶನ್‌, ವೆದರ್‌ ಅಪ್ಡೇಟ್‌, ಕ್ಯಾಮರಾ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಸೇರಿದಂತೆ ಇನ್ನು ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,499ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಗೋಲ್ಡ್, ಸಿಲ್ವರ್, ಬ್ಲ್ಯಾಕ್ ಮತ್ತು ರೋಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ.

ಇನ್ನು ಫೈರ್-ಬೋಲ್ಟ್ ಕಂಪೆನಿ ಇತ್ತೀಚಿಗೆ ಹೊಸ ಫೈರ್-ಬೋಲ್ಟ್ ಆರ್ಟಿಲರಿ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್‌ 1.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು ವಾಯ್ಸ್‌ ಅಸಿಸ್ಟೆಂಟ್‌ , ಮ್ಯೂಸಿಕ್‌ ಪ್ಲೇ ಬ್ಯಾಕ್‌ ಅನ್ನು ಕಂಟ್ರೋಲ್‌ ಮಾಡಬಹುದಾದ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಮೋಷನ್ ಸೆನ್ಸಾರ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ ಅನ್ನು ವರ್ಚುವಲ್ ರಿಯಾಲಿಟಿ ಗೇಮ್‌ಗಳನ್ನು ಕಂಟ್ರೋಲರ್‌ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಫೈರ್‌ಬೋಲ್ಟ್‌ ಆರ್ಟಿಲರಿ ಸ್ಮಾರ್ಟ್‌ವಾಚ್‌ 380mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಯಾಟರಿ ಕ್ಲಾಸಿಕ್ ಮೋಡ್‌ನಲ್ಲಿ 8 ದಿನಗಳವರೆಗೆ ಬ್ಯಾಕಪ್‌ ನೀಡಲಿದ್ದು, ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳ ಬ್ಯಾಕಪ್‌ ನೀಡಲಿದೆ. ಇದಲ್ಲದೆ ಬ್ಲೂಟೂತ್ ಕಾಲ್‌ ಆಕ್ಟಿವ್‌ ಆಗಿದ್ದಾಗ 5 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

Best Mobiles in India

English summary
Fire-Boltt Infinity Luxe Smartwatch Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+