Home
ಸುದ್ದಿಜಾಲ

Fire-Boltt: ಫೈರ್-ಬೋಲ್ಟ್ ಲುಮೋಸ್ ವಾಚ್‌ ಬಿಡುಗಡೆ! 7 ದಿನಗಳ ಬ್ಯಾಟರಿ ಬಾಳಿಕೆ!

ಟೆಕ್‌ ವಲಯದಲ್ಲಿ ಮತ್ತೊಮ್ಮೆ ಫೈರ್‌ಬೋಲ್ಟ್‌ ಕಂಪೆನಿ ಸುನಾಮಿಯಂತೆ ಅಬ್ಬರಿಸುತ್ತಿದೆ. ವಿವಿಧ ಶೈಲಿಯ ಸ್ಮಾರ್ಟ್‌ವಾಚ್‌ಗಳ ಪರಿಚಯಿಸುವ ಮೂಲಕ ಯುವಜನರ ನೆಚ್ಚಿನ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಫೈರ್-ಬೋಲ್ಟ್ ಲುಮೋಸ್ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಅನ್ನು ಬೆಂಬಲಿಸಲಿದೆ.

ಹೌದು, ಫೈರ್-ಬೋಲ್ಟ್ ಲುಮೋಸ್ ಸ್ಮಾರ್ಟ್‌ವಾಚ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಸ್ಕ್ವೇರ್‌-ಡಯಲ್ ಸ್ಮಾರ್ಟ್ ವಾಚ್ ಆಗಿದ್ದು, ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಮತ್ತು ಮೆಟಾಲಿಕ್ ಸ್ಟ್ರಾಪ್ ಜೊತೆಗೆ ಪ್ರೀಮಿಯಂ ಲುಕ್‌ ಅನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Fire-Boltt: ಫೈರ್-ಬೋಲ್ಟ್ ಲುಮೋಸ್ ವಾಚ್‌ ಬಿಡುಗಡೆ! 7 ದಿನಗಳ ಬ್ಯಾಟರಿ ಬಾಳಿಕೆ!

ಫೈರ್-ಬೋಲ್ಟ್ ಲುಮೋಸ್ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇ ರಚನೆ
ಫೈರ್-ಬೋಲ್ಟ್ ಲುಮೋಸ್ ಸ್ಮಾರ್ಟ್‌ವಾಚ್‌ 1.91 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ 240 x 280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ, ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಸೂಟ್‌ ಅಡಿಯಲ್ಲಿ ಹಲವು ಹೆಲ್ತ್‌ ಟ್ರ್ಯಾಕಿಂಗ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆಯನ್ನು ಮಾಡಲಿದೆ. ಜೊತೆಗೆ 100+ ಕ್ರೀಡಾ ವಿಧಾನಗಳು, ಸ್ಮಾರ್ಟ್ ಅಧಿಸೂಚನೆಗಳು ಮತ್ತು ಇನ್‌ಬಿಲ್ಟ್‌ ಗೇಮ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದಲ್ಲದೆ 100+ ಕ್ಲೌಡ್ ಆಧಾರಿತ ವಾಚ್‌ಫೇಸ್‌ಗಳನ್ನು ಒಳಗೊಂಡಿದೆ.

Fire-Boltt: ಫೈರ್-ಬೋಲ್ಟ್ ಲುಮೋಸ್ ವಾಚ್‌ ಬಿಡುಗಡೆ! 7 ದಿನಗಳ ಬ್ಯಾಟರಿ ಬಾಳಿಕೆ!

ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಲುಮೋಸ್ ಸ್ಮಾರ್ಟ್‌ವಾಚ್‌ 1,499ರೂ ಬೆಲೆಯನ್ನು ಹೊಂದಿದೆ. ಇದು Fireboltt.com ಮತ್ತು Amazon.in ನಲ್ಲಿ ನವೆಂಬರ್ 30 ರಿಂದ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ, ಚಿನ್ನ, ಬೆಳ್ಳಿ ಮತ್ತು ಗುಲಾಬಿ ಚಿನ್ನದ ಬಣ್ಣಗಳಲ್ಲಿ ಬರುತ್ತದೆ.

ಇದಲ್ಲದೆ ಫೈರ್‌ಬೋಲ್ಡ್‌ ಕಂಪೆನಿ ಇತ್ತೀಚಿಗೆ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ ಅನ್ನು ಸಂಪೂರ್ಣ ಲೋಹದ ನಿರ್ಮಾಣದೊಂದಿಗೆ ಸಜ್ಜುಗೊಳಿಸಿದೆ. ಇನ್ನು ಸ್ಮಾರ್ಟ್‌ವಾಚ್‌ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್‌ ಕರೆಗಳನ್ನು ನಿಯಂತ್ರಿಸಲು ಅವಕಾಶ ನೀಡಿದೆ.

Fire-Boltt: ಫೈರ್-ಬೋಲ್ಟ್ ಲುಮೋಸ್ ವಾಚ್‌ ಬಿಡುಗಡೆ! 7 ದಿನಗಳ ಬ್ಯಾಟರಿ ಬಾಳಿಕೆ!

ಫೈರ್-ಬೋಲ್ಟ್ ಕಂಪೆನಿ ಹೇಳುವಂತೆ ಈ ಸ್ಮಾರ್ಟ್ ವಾಚ್ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಮ್ಯೂಸಿಕ್‌ ಅನ್ನು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ವಾಚ್‌ನಲ್ಲಿ 4GB ಸ್ಟೋರೇಜ್‌ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದರ ಮೂಲಕ ನೀವು ಸ್ಮಾರ್ಟ್‌ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ 300ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ.

ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ 380mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಹೆಚ್ಚುವರಿಯಾಗಿ ಮೋಷನ್ ಗೇಮಿಂಗ್, ಸ್ಮಾರ್ಟ್ ಅಧಿಸೂಚನೆಗಳು, ಹವಾಮಾನ, ಕ್ಯಾಮರಾ ಮತ್ತು ಸಂಗೀತ ನಿಯಂತ್ರಣ, ಟೈಮರ್, ಅಲಾರ್ಮ್, ಸ್ಟಾಪ್‌ವಾಚ್ ಹಾಗೂ 300+ ಕ್ರೀಡಾ ವಿಧಾನಗಳು, ಮೋಷನ್ ಗೇಮ್‌ಗಳಂತಹ ಹಲವು ವೈವಿಧ್ಯಮಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

Best Mobiles in India

English summary
Fire-Boltt Lumos with Bluetooth calling launched in india: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+