ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಬಿಡುಗಡೆ; ಬೆಲೆ ಎಷ್ಟು?
ಸ್ಮಾರ್ಟ್‌ವಾಚ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಫೈರ್‌ಬೋಲ್ಟ್ ಹೊಸ ವಾಚ್ ಬಿಡುಗಡೆ ಮಾಡಿದೆ. ಇದನ್ನು ಫೈರ್‌ಬೋಲ್ಟ್ ಫೀನಿಕ್ಸ್ ಅಮೋಲೆಡ್ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದೆ.
ಹೌದು, ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್‌ವಾಚ್ SpO2 ಲೆವೆಲ್ ಮಾನಿಟರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ಹಾರ್ಟ್‌ಬೀಟ್ ಸೆನ್ಸಾರ್ ಅನ್ನು ಸಹ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಫೀಚರ್ಸ್
ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ 1.43 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 466x466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 700 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿರುವ ರೌಂಡ್ ಡಯಲ್ ಅನ್ನು ಹೊಂದಿದೆ.
ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್ ವಾಚ್‌ನಲ್ಲಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಫೈರ್-ಬೋಲ್ಟ್ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಂತಹ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇನ್ನು ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್ ವಾಚ್ ನಿಮಗೆ ಹಲವು ಆಯ್ಕೆಯ ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ, ಸ್ಮಾರ್ಟ್‌ವಾಚ್ ಸಿರಿ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ.
ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಸ್ಟ್ರಾಂಗ್ ಬ್ಯಾಟರಿಯನ್ನು ಹೊಂದಿದ್ದು, ಬಿಗ್ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದಲ್ಲದೆ, ಈ ಸ್ಮಾರ್ಟ್‌ವಾಚ್ ಸ್ಮಾರ್ಟ್ ನೋಟಿಫಿಕೇಶನ್‌ಗಳನ್ನು ಸಹ ಒಳಗೊಂಡಿದೆ. ಇದು ಬಳಕೆದಾರರು ಸಂಪರ್ಕಿತ ಸ್ಮಾರ್ಟ್‌ಫೋನ್‌ನಿಂದ ಕರೆಗಳು ಮತ್ತು ಸಂದೇಶಗಳಿಗೆ ತಮ್ಮ ಎಚ್ಚರಿಕೆಗಳನ್ನು ಪ್ರತಿಬಿಂಬಿಸಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಸ್ಮಾರ್ಟ್‌ವಾಚ್ ರಿಮೋಟ್ ಕ್ಯಾಮೆರಾ ಕಂಟ್ರೋಲ್, ವೆದರ್ ಅಪ್ಡೇಟ್, ಆಲರ್ಟ್ ಮತ್ತು ಮ್ಯೂಸಿಕ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಭಾರತದಲ್ಲಿ ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಭಾರತದಲ್ಲಿ 2,199ರೂ,ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದೆ. ಇದು ಕಪ್ಪು, ಚಿನ್ನ ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ.
ಫೈರ್‌ಬೋಲ್ಟ್ ಕಂಪೆನಿ ಇತ್ತೀಚಿಗೆ ಹೊಸ ಫೈರ್-ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 1.39 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಮಲ್ಟಿ ವಾಚ್ ಫೇಸ್ ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ನಯವಾದ ಮತ್ತು ಸೊಗಸಾದ ವೃತ್ತಾಕಾರದ ಡಯಲ್ ವಿನ್ಯಾಸದೊಂದಿಗೆ ಬರಲಿದ್ದು, ಪ್ರೀಮಿಯಂ ಲುಕ್‌ನಲ್ಲಿ ಗಮನಸೆಳೆದಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್, ಸ್ಪೀಕರ್ ಮತ್ತು ಬ್ಲೂಟೂತ್ 5.0 ಪ್ರೋಟೋಕಾಲ್ ಅನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ನಿಮ್ಮ ಫೋನ್ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಕೆಲಸ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಮೀಸಲಾದ ಡಯಲ್ ಪ್ಯಾಡ್ ಅನ್ನು ಒಳಗೊಂಡಿದೆ. ಅಲ್ಲದೆ ಕಾಲ್ ಹಿಸ್ಟರಿ ಮತ್ತು ಕನೆಕ್ಟಿವಿಟಿ ಸಿಂಕ್ರೊನೈಸೇಶನ್ ಅನ್ನು ಬೆಂಬಲಿಸಲಿದೆ.


Click it and Unblock the Notifications








