Home
ಸುದ್ದಿಜಾಲ

ಫೈರ್‌ಬೋಲ್ಟ್‌ ನಡೆಗೆ ಟೆಕ್‌ವಲಯವೇ ಕಂಗಾಲು!..2,999ರೂ.ಬೆಲೆಯಲ್ಲಿ ಅಚ್ಚರಿಯ ವಾಚ್‌!

ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಫೈರ್‌ ಬೋಲ್ಟ್‌ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಹೊಸ ಟೆಕ್ನಾಲಜಿಯ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಫೈರ್‌ಬೋಲ್ಟ್‌ ಕಂಪೆನಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಕ್ವಾಂಟಮ್‌ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲಡ್‌ ಆಕ್ಸಿಜನ್‌ ಲೆವೆಲ್‌ ಮತ್ತು ಹೆಲ್ತ್‌ ಟ್ರ್ಯಾಕ್‌ ಮಾಡುವ ಮಾನಿಟರ್‌ಗಳನ್ನು ಹೊಂದಿದೆ.

ಫೈರ್‌ಬೋಲ್ಟ್‌ ನಡೆಗೆ ಟೆಕ್‌ವಲಯವೇ ಕಂಗಾಲು!..2,999ರೂ.ಬೆಲೆಯಲ್ಲಿ ಅಚ್ಚರಿಯ ವಾಚ್‌

ಹೌದು, ಫೈರ್‌ಬೋಲ್ಟ್‌ ಕ್ವಾಂಟಮ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್‌ ಮಲ್ಟಿ ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದ್ದು, ಸ್ಪೋರ್ಟ್ಸ್‌ ಪ್ರಿಯರ ಮನಗೆಲ್ಲಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ನೀರು ಮತ್ತು ದೂಳಿನಿಂದ ರಕ್ಷಣೆಗಾಗಿ IP67 ರೇಟಿಂಗ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್ ಫೀಚರ್ಸ್‌ ಹೇಗಿದೆ?

ಫೈರ್-ಬೋಲ್ಟ್‌ ಕ್ವಾಂಟಮ್ ಸ್ಮಾರ್ಟ್‌ವಾಚ್ 1.28 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಇದು ಬಳಕೆದಾರರಿಗೆ ವಾಚ್‌ನಿಂದ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ AI ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ.

ಫೈರ್‌ಬೋಲ್ಟ್‌ ನಡೆಗೆ ಟೆಕ್‌ವಲಯವೇ ಕಂಗಾಲು!..2,999ರೂ.ಬೆಲೆಯಲ್ಲಿ ಅಚ್ಚರಿಯ ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲಿಪಿಂಗ್‌ ಟ್ರ್ಯಾಕ್‌ ಅನ್ನು ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಹಲವು ಸ್ಪೋರ್ಟ್ಸ್‌ ಮೋಡ್‌ಗಳು ಮತ್ತು 50ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಸಹ ನೀಡಲಿದೆ. ಫೈರ್-ಬೋಲ್ಟ್ ಕ್ವಾಂಟಮ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್ ವಿ 5.1 ಅನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ 5.0 ಮತ್ತು ಐಒಎಸ್ 9.0 ನಲ್ಲಿ ರನ್‌ ಆಗುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಆಗಲಿದೆ.

ಫೈರ್‌ ಬೋಲ್ಟ್‌ ಕ್ವಾಂಟಮ್‌ ಸ್ಮಾರ್ಟ್‌ವಾಚ್‌ ಗೆಸ್ಚರ್ ಕಂಟ್ರೋಲ್ ಅನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸ್ಕ್ರೀನ್‌ ನೋಡಲು ತಮ್ಮ ಮಣಿಕಟ್ಟನ್ನು ಮೇಲಕ್ಕೆ ಎತ್ತಿದ ತಕ್ಷಣವೇ ಡಿಸ್‌ಪ್ಲೇ ಆನ್‌ ಮಾಡಲಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 350mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಾಮಾನ್ಯ ಬಳಕೆಯಲ್ಲಿ ಏಳು ದಿನಗಳ ಬ್ಯಾಕ್‌ಅಪ್‌ ನೀಡಲಿದೆ. ಬ್ಲೂಟೂತ್‌ ಕಾಲ್‌ ಆಕ್ಟಿವ್‌ ಮಾಡಿದ್ದರೆ ಎರಡು ದಿನಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡು ಗಂಟೆಗಳ ಅವಧಿ ಬೇಕಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ ಅಕ್ಸಿಲೆರೊಮೀಟರ್, ಮ್ಯೂಸಿಕ್‌ ಕಂಟ್ರೋಲ್‌, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಅಲಾರಾಂ, ಟೈಮರ್, ಸ್ಟಾಪ್‌ವಾಚ್ ಮತ್ತು ಹವಾಮಾನ ಮುನ್ಸೂಚನೆಯನ್ನು ನೀಡಲಿದೆ.

ಫೈರ್‌ಬೋಲ್ಟ್‌ ನಡೆಗೆ ಟೆಕ್‌ವಲಯವೇ ಕಂಗಾಲು!..2,999ರೂ.ಬೆಲೆಯಲ್ಲಿ ಅಚ್ಚರಿಯ ವಾಚ್‌

ಫೈರ್‌ ಬೋಲ್ಟ್‌ ಕ್ವಾಂಟಮ್‌ ಸ್ಮಾರ್ಟ್‌ವಾಚ್‌ ಬೆಲೆ ಮತ್ತು ಲಭ್ಯತೆ

ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್ ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಮತ್ತು ಅಮೆಜಾನ್ ಇಂಡಿಯಾ ಮೂಲಕ ಮಾರಾಟವಾಗಲಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಕಪ್ಪು, ಹಸಿರು, ನೀಲಿ ಮತ್ತು ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಫೈರ್‌ಬೋಲ್ಟ್‌ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
The latest smartwatch from the company features a 1.28-inch display and supports Bluetooth calling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+