Home
ಸುದ್ದಿಜಾಲ

ಭಾರತದಲ್ಲಿ ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಫೈರ್‌ಬೋಲ್ಟ್‌ ಅಗ್ರಸ್ಥಾನದಲ್ಲಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಫೈರ್‌ಬೋಲ್ಟ್‌ ಯುವಜನರ ಹಾಟ್‌ಫೇವರಿಟ್‌ ಎನಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಇದೀಗ ಹೊಸ ಫೈರ್‌ಬೋಲ್ಟ್‌ ರೈಸ್‌ ಲಕ್ಸ್‌ (Luxe ) ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಬೆಂಬಲಿಸಲಿದೆ. ಇದು ಸ್ಕ್ವೇರ್‌-ಡಯಲ್ ಸ್ಮಾರ್ಟ್ ವಾಚ್ ಆಗಿದ್ದು, ಸ್ಟೇನ್‌ಲೆಸ್ ಸ್ಟೀಲ್ ಬಾಡಿಯೊಂದಿಗೆ ಬರಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಮೆಟಾಲಿಕ್ ಸ್ಟ್ರಾಪ್ ಜೊತೆಗೆ ಪ್ರೀಮಿಯಂ ಲುಕ್‌ ಅನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಫೈರ್-ಬೋಲ್ಟ್ ರೈಸ್ ಲಕ್ಸ್ ವಾಚ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಬೆಂಬಲವನ್ನು ಹೊಂದಿದೆ. ಇದರಿಂದಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಸಹ ಅಳವಡಿಸಲಾಗಿದೆ.

ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ 100+ ಕ್ಲೌಡ್ ಆಧಾರಿತ ವಾಚ್‌ಫೇಸ್‌ಗಳನ್ನು ಹೊಂದಿದ್ದು, ಸ್ಟೇನ್‌ಲೆಸ್ ಸ್ಟೀಲ್ ಬಾಡಿಯೊಂದಿಗೆ ಬರಲಿದೆ. ಇದು 123 ಕ್ರೀಡಾ ವಿಧಾನಗಳು ಇದರಲ್ಲಿದ್ದು, ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ. ಇದರೊಂದಿಗೆ ಸ್ಮಾರ್ಟ್ ಅಧಿಸೂಚನೆಗಳು ಮತ್ತು ಇನ್‌ಬಿಲ್ಟ್‌ ಗೇಮ್‌ಗಳನ್ನು ಸಹ ಬೆಂಬಲಿಸುತ್ತದೆ.

ಭಾರತದಲ್ಲಿ ಫೈರ್-ಬೋಲ್ಟ್ ರೈಸ್ ಲಕ್ಸ್ ವಾಚ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಈ ಸ್ಮಾರ್ಟ್‌ವಾಚ್‌ ಸಹ ವಿವಿಧ ಮಾದರಿಯ ಹೆಲ್ತ್‌ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆ ಸೇರಿದಂತೆ ಫೈರ್-ಬೋಲ್ಟ್ ಹೆಲ್ತ್ ಸೂಟ್ ಅಡಿಯಲ್ಲಿ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಹೊಂದಿರುವುದರಿಂದ, ಇದರಲ್ಲಿ ಕಾಲಿಂಗ್‌ ಹಿಸ್ಟರಿ, ತ್ವರಿತ ಡಯಲ್ ಪ್ಯಾಡ್, ಸಿಂಕ್ ಕನೆಕ್ಟಿವಿಟಿಗಳನ್ನು ಬೆಂಬಲಿಸಲಿದೆ.

ಇನ್ನು ಸ್ಮಾರ್ಟ್‌ವಾಚ್‌ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದು ಇನ್‌ಬಿಲ್ಟ್‌ ಗೇಮ್ಸ್‌, ಸ್ಮಾರ್ಟ್ ನೋಟಿಫಿಕೇಶನ್ಸ್‌, ವೆದರ್‌ ಅಪ್ಡೇಟ್ಸ್‌, ಕ್ಯಾಲ್ಕುಲೇಟರ್, ಮ್ಯೂಸಿಕ್‌ ಮತ್ತು ಕ್ಯಾಮರಾ ಕಂಟ್ರೋಲ್‌, ಅಲಾರಾಂ, ಟೈಮರ್, ಸ್ಟಾಪ್‌ವಾಚ್ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಫೈರ್-ಬೋಲ್ಟ್ ರೈಸ್ ಲಕ್ಸ್ ವಾಚ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

ಫೈರ್-ಬೋಲ್ಟ್ ರೈಸ್ ಲಕ್ಸ್ ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ರೈಸ್ ಲಕ್ಸ್ ಸ್ಮಾರ್ಟ್‌ವಾಚ್‌ ಲಾಂಚ್‌ ಆಫರ್‌ನಲ್ಲಿ ಕೇವಲ 1,499ರೂ ಬೆಲೆಗೆ ಲಭ್ಯವಾಗುತ್ತಿದೆ. ಇದನ್ನು ಕಪ್ಪು, ಚಿನ್ನ, ಬೆಳ್ಳಿ ಮತ್ತು ಗುಲಾಬಿ ಚಿನ್ನದ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದು Fireboltt.com ಮತ್ತು Flipkart ನಲ್ಲಿ ಲಭ್ಯವಾಗಲಿದೆ.

ಇದಲ್ಲದೆ ಫೈರ್‌ಬೋಲ್ಟ್‌ ಇತ್ತೀಚಿಗೆ ಫೈರ್-ಬೋಲ್ಟ್ ರಾಯಲ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ 750 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದಲ್ಲದೆ ಕ್ರಿಯಾತ್ಮಕ ತಿರುಗುವ ಕಿರೀಟ ಮತ್ತು ಹೆಚ್ಚುವರಿ ಬಟನ್‌ಗಳನ್ನು ಬಳಸಿಕೊಂಡು ಗಡಿಯಾರವನ್ನು ನಿಯಂತ್ರಿಸಬಹುದು.

ಫೈರ್-ಬೋಲ್ಟ್ ಕಂಪೆನಿ ಹೇಳುವಂತೆ ಈ ಸ್ಮಾರ್ಟ್ ವಾಚ್ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಮ್ಯೂಸಿಕ್‌ ಅನ್ನು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ವಾಚ್‌ನಲ್ಲಿ 4GB ಸ್ಟೋರೇಜ್‌ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದರ ಮೂಲಕ ನೀವು ಸ್ಮಾರ್ಟ್‌ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ.

Best Mobiles in India

English summary
Fire-Boltt Rise Luxe with Bluetooth calling launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+