Home
ಸುದ್ದಿಜಾಲ

Fire-Boltt: ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ ಬಿಡುಗಡೆ! ವಾವ್ಹ್‌ ಎನಿಸುವ ಫೀಚರ್ಸ್‌!

ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಕಂಪೆನಿಗಳಲ್ಲಿ ಫೈರ್‌ಬೋಲ್ಟ್‌ (Fire-Boltt) ಕೂಡ ಒಂದಾಗಿದೆ. ತನ್ನ ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಹೊಸದಾಗಿ ಫೈರ್‌ಬೋಲ್ಟ್‌ ರಾಯಲ್ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಐಷಾರಾಮಿ ಫೀಚರ್ಸ್‌ಗಳಿಂದಾಗಿ ಗಮನಸೆಳೆದಿದೆ.

ಹೌದು, ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಅನ್ನು ಸಂಪೂರ್ಣ ಲೋಹದ ನಿರ್ಮಾಣದೊಂದಿಗೆ ಸಜ್ಜುಗೊಳಿಸಿದೆ. ಇನ್ನು ಸ್ಮಾರ್ಟ್‌ವಾಚ್‌ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್‌ ಕರೆಗಳನ್ನು ನಿಯಂತ್ರಿಸಲು ಅವಕಾಶ ನೀಡಿದೆ. ಹಾಗಾದ್ರೆ ಫೈರ್‌ಬೋಲ್ಟ್‌ ರಾಯಲ್‌ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Fire-Boltt: ಫೈರ್-ಬೋಲ್ಟ್ ರಾಯಲ್ ವಾಚ್‌ ಬಿಡುಗಡೆ! ವಾವ್ಹ್‌ ಎನಿಸುವ ಫೀಚರ್ಸ್‌!

ಫೈರ್-ಬೋಲ್ಟ್ ರಾಯಲ್‌ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ಫೈರ್-ಬೋಲ್ಟ್ ರಾಯಲ್‌ ಸ್ಮಾರ್ಟ್‌ವಾಚ್‌ 1.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 466 x 466 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 750 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದಲ್ಲದೆ ಕ್ರಿಯಾತ್ಮಕ ತಿರುಗುವ ಕಿರೀಟ ಮತ್ತು ಹೆಚ್ಚುವರಿ ಬಟನ್‌ಗಳನ್ನು ಬಳಸಿಕೊಂಡು ಗಡಿಯಾರವನ್ನು ನಿಯಂತ್ರಿಸಬಹುದು.

ಫೈರ್-ಬೋಲ್ಟ್ ಕಂಪೆನಿ ಹೇಳುವಂತೆ ಈ ಸ್ಮಾರ್ಟ್ ವಾಚ್ 130 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಮ್ಯೂಸಿಕ್‌ ಅನ್ನು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ವಾಚ್‌ನಲ್ಲಿ 4GB ಸ್ಟೋರೇಜ್‌ ಸಾಮರ್ಥ್ಯವನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದರ ಮೂಲಕ ನೀವು ಸ್ಮಾರ್ಟ್‌ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ.

Fire-Boltt: ಫೈರ್-ಬೋಲ್ಟ್ ರಾಯಲ್ ವಾಚ್‌ ಬಿಡುಗಡೆ! ವಾವ್ಹ್‌ ಎನಿಸುವ ಫೀಚರ್ಸ್‌!

ಇನ್ನು ಫೈರ್-ಬೋಲ್ಟ್ ರಾಯಲ್‌ ಸ್ಮಾರ್ಟ್‌ವಾಚ್‌ ವಿವಿಧ ಮಾದರಿಯ ಹೆಲ್ತ್‌ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಸ್ಮಾರ್ಟ್ ವಾಚ್ SpO2 ಮತ್ತು ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಅವಕಾಶ ನೀಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ 300ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಜೊತೆಗೆ ಸ್ಮಾರ್ಟ್ ವಾಚ್ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳಲಿದೆ.

ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ 380mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಹೆಚ್ಚುವರಿಯಾಗಿ ಮೋಷನ್ ಗೇಮಿಂಗ್, ಸ್ಮಾರ್ಟ್ ಅಧಿಸೂಚನೆಗಳು, ಹವಾಮಾನ, ಕ್ಯಾಮರಾ ಮತ್ತು ಸಂಗೀತ ನಿಯಂತ್ರಣ, ಟೈಮರ್, ಅಲಾರ್ಮ್, ಸ್ಟಾಪ್‌ವಾಚ್ ಹಾಗೂ 300+ ಕ್ರೀಡಾ ವಿಧಾನಗಳು, ಮೋಷನ್ ಗೇಮ್‌ಗಳಂತಹ ಹಲವು ವೈವಿಧ್ಯಮಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

Fire-Boltt: ಫೈರ್-ಬೋಲ್ಟ್ ರಾಯಲ್ ವಾಚ್‌ ಬಿಡುಗಡೆ! ವಾವ್ಹ್‌ ಎನಿಸುವ ಫೀಚರ್ಸ್‌!

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ 4,999 ರೂಗಳ ಪರಿಚಯಾತ್ಮಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ಅಮೆಜಾನ್ ಇಂಡಿಯಾ ಮತ್ತು ಫೈರ್-ಬೋಲ್ಟ್‌ನ ಇಸ್ಟೋರ್ ಮೂಲಕ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ನವೆಂಬರ್ 25 ರಿಂದ ಮಾರಾಟವಾಗಲಿದೆ ಎಂದು ಕಂಪನಿಯು ಹೇಳಿದೆ. ಇನ್ನು ಲಾಂಚ್‌ ಆಫರ್‌ನಲ್ಲಿ ಇದನ್ನು ಖರೀದಿಸುವ ಗ್ರಾಹಕರಿಗೆ ಫೈರ್-ಬೋಲ್ಟ್ ಹೆಚ್ಚುವರಿ 250ರೂ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್‌ ರೋಸ್ ಗೋಲ್ಡ್, ಗೋಲ್ಡ್, ಬ್ಲ್ಯಾಕ್, ಬ್ಲೂ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Fire-Boltt Royale with Metallic Build Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+