Home
ಸುದ್ದಿಜಾಲ

ಫೈರ್‌ ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಗ್ರ್ಯಾಂಡ್‌ ಎಂಟ್ರಿ! ಇದಕ್ಕೆ ಮನಸೋಲದವರೇ ಇಲ್ಲ!

ಫೈರ್‌ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಮನಸೋಲದವರೇ ಇಲ್ಲ. ಸ್ಟೈಲಿಶ್‌ ಡಿಸೈನ್‌ ರಗಡ್‌ ಲುಕ್‌ಗೆ ಫೈರ್‌ಬೋಲ್ಟ್‌ ಸ್ಮಾರ್ಟ್‌ವಾಚ್‌ಗಳು ಪ್ರಸಿದ್ಧಿ ಪಡೆದಿವೆ. ಸದ್ಯ ಫೈರ್‌ಬೋಲ್ಟ್‌ ಹೊಸ ಫೈರ್‌ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್‌ ಎಂಟು ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ.

ಹೌದು, ಫೈರ್‌ಬೋಲ್ಟ್‌ ಭಾರತದಲ್ಲಿ ಹೊಸ ಫೈರ್‌ ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 120 ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಕೂಡ ಒಳಗೊಂಡಿದ್ದು, ವಾಚ್‌ನಿಂದ ನೇರವಾಗಿ ಫೋನ್‌ ಕಾಲ್‌ಗಳನ್ನು ಸ್ವೀಕರಿಸಲು ಅನುವು ಮಾಡಿಕೊಡಲಿದೆ. ಹಾಗಾದ್ರೆ ಫೈರ್‌ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್‌ ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಗ್ರ್ಯಾಂಡ್‌ ಎಂಟ್ರಿ! ಮನಸೋಲದವರೇ ಇಲ್ಲ

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 1.83-ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು ಶಾಕ್ ಪ್ರೂಫ್, ಸ್ಕ್ರಾಚ್ ರೆಸಿಸ್ಟೆಂಟ್ ಮತ್ತು ಎರಡು ಬಟನ್ ಪಶರ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ನೀವುಯ ಸ್ಮಾರ್ಟ್‌ವಾಚ್‌ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಅವಕಾಶ ಸಿಗಲಿದೆ.

ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್‌ ಸಿರಿಯಂತಹ AI ವಾಯ್ಸ್‌ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದು ಅತ್ಯಾಕರ್ಷಕ ಹೆಲ್ತ್‌ ಫೀಚರ್ಸ್‌ಗಳನ್ನು ಕೂಡ ಪಡೆದುಕೊಂಡಿದ್ದು, SpO2 ಮಾನಿಟರಿಂಗ್, ಹಾರ್ಟ್‌ಬೀಟ್‌ ಸೆನ್ಸಾರ್‌ಗಳು, ಮಹಿಳೆಯರ ಆರೋಗ್ಯ ಸಂಬಂಧಿತ ಟ್ರ್ಯಾಕರ್ ಮತ್ತು ನಿದ್ರೆಯ ಮೇಲ್ವಿಚಾರಣೆ ಮಾಡುವ ಹೆಲ್ತ್‌ ಟ್ರ್ಯಾಕರ್‌ಗಳನ್ನು ಹೊಂದಿದೆ. ಇದಲ್ಲದೆ ಅಥ್ಲೆಟಿಕ್ಸ್, ಆಟೋ ರೇಸಿಂಗ್ ಸೇರಿದಂತೆ 120ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ.

ಫೈರ್‌ ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಗ್ರ್ಯಾಂಡ್‌ ಎಂಟ್ರಿ! ಮನಸೋಲದವರೇ ಇಲ್ಲ

ಇನ್ನು ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 100 ಕಸ್ಟಮೈಸ್ ಮಾಡಬಹುದಾದ ಕ್ಲೌಡ್‌ ಆಧಾರಿತ ವಾಚ್‌ ಫೇಸ್‌ಗಳನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸಾಮಾನ್ಯ ಬಳಕೆಯಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಬ್ಲೂಟೂತ್ ಕರೆಯೊಂದಿಗೆ ಐದು ದಿನಗಳ ಬಾಳಿಕೆ ನೀಡಲಿದೆ. ಆದರೆ ನೀವು ಕೇವಲ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಳಸಿದರೆ 25 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಸ್ಮಾರ್ಟ್‌ವಾಚ್ ಇನ್‌ಬಿಲ್ಟ್‌ ಗೇಮ್ಸ್‌, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಅಲಾರಾಂ, ಟೈಮರ್, ಸ್ಟಾಪ್‌ವಾಚ್, ವೆದರ್‌ ಅಪ್ಡೇಟ್‌, ಸಿಟ್ಟಿಂಗ್‌ ರಿಮೈಂಡರ್‌ಗಳನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್ ನೋಟಿಫೀಕೇಶನ್‌ಗಳನ್ನು ಸಹ ಬೆಂಬಲಿಸಲಿದೆ.

ಫೈರ್‌ ಬೋಲ್ಟ್‌ ಶಾರ್ಕ್‌ ಸ್ಮಾರ್ಟ್‌ವಾಚ್‌ ಗ್ರ್ಯಾಂಡ್‌ ಎಂಟ್ರಿ! ಮನಸೋಲದವರೇ ಇಲ್ಲ

ಭಾರತದಲ್ಲಿ ಫೈರ್-ಬೋಲ್ಟ್ ಶಾರ್ಕ್ ಬೆಲೆ ಮತ್ತು ಲಭ್ಯತೆ

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಭಾರತದಲ್ಲಿ 1,799ರೂ. ಬೆಲೆ ಹೊಂದಿದೆ. ಇದು ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿದ್ದು, ಕಪ್ಪು ಕ್ಯಾಮೌ, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇನ್ನು ಫೈರ್ ಬೋಲ್ಟ್ ರಾಕೆಟ್‌ ವಾಚ್‌ 1.3 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ರೌಂಡ್ ಡಯಲ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಬಲಭಾಗದಲ್ಲಿ ಫಿಸಿಕಲ್‌ ಬಟನ್ ಹೊಂದಿದ್ದು, IP67-ಪ್ರಮಾಣೀಕೃತ ವಾಟರ್‌ ರೆಸಿಸ್ಟೆನ್ಸಿಯನ್ನು ಪಡೆದಿದೆ. ಇದು ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ ಫೇಸ್‌ಗಳನ್ನು ಒಳಗೊಂಡಿದೆ. ಫೈರ್ ಬೋಲ್ಟ್ ರಾಕೆಟ್‌ ವಾಚ್‌ ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪಿಂಗ್‌ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್‌ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಮೂಲಕ ಸ್ಟೆಪ್ಸ್‌, ಡಿಸ್ಟೆನ್ಸ್‌, ಕ್ಯಾಲೂರಿ ಬರ್ನಿಂಗ್ಸ್‌ ಅನ್ನು ಅಳೆಯುವುದಕ್ಕೆ ಅವಕಾಶವನ್ನು ನೀಡಲಿದೆ.

Best Mobiles in India

English summary
Fire-Boltt's Shark smartwatch sports a 1.83-inch (240x284 pixels) HD display with a 240x284 pixel resolution.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+