Home
ಸುದ್ದಿಜಾಲ

ಸ್ಮಾರ್ಟ್‌ವಾಚ್‌ ಖರೀದಿಸುವ ಮುನ್ನ ಈ ಸ್ಮಾರ್ಟ್‌ವಾಚ್‌ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿರಿ!

ಟೆಕ್‌ ವಲಯವೂ ಸ್ಮಾರ್ಟ್‌ ಆಗುತ್ತಾ ಹೋದಂತೆ ಸ್ಮಾರ್ಟ್‌ವಾಚ್‌ಗಳ ವಿನ್ಯಾಸ ಬದಲಾಗುತ್ತಿದೆ. ಕೇವಲ ಸಮಯ ತೋರುವುದಕ್ಕೆ ಸೀಮಿತವಾಗಿದ್ದ ಸ್ಮಾರ್ಟ್‌ವಾಚ್‌ಗಳೀಗ ಮಲ್ಟಿ ಟಾಸ್ಕ್‌ ನಿರ್ವಹಿಸಬಲ್ಲ ಮಟ್ಟಕ್ಕೆ ಬೆಳೆದು ನಿಂತಿವೆ. ಇವುಗಳಲ್ಲಿ ಫೈರ್‌ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಕೂಡ ಹೊರತಾಗಿಲ್ಲ.

ಫೈರ್‌ಬೋಲ್ಟ್‌ ಸಂಸ್ಥೆಯ ಸ್ಮಾರ್ಟ್‌ವಾಚ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ತಮ್ಮ ಸ್ಟೈಲಿಶ್‌ ಲುಕ್‌ ಹಾಗೂ ಡಿಸೈನ್‌ನಿಂದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡಿವೆ. ಇದೀಗ ಫೈರ್‌ಬೋಲ್ಟ್‌ ಕಂಪೆನಿ ಹೊಸ ಫೈರ್‌ಬೋಲ್ಟ್‌ ಅಲ್ಟಿಮೇಟ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ತನ್ನ ಸ್ಟೈಲಿಶ್‌ಲುಕ್‌ನಿಂದ ಇಡೀ ಟೆಕ್‌ವಲಯವೇ ಶೇಕ್‌ ಆಗುವಂತೆ ಮಾಡಿದೆ. ಹಾಗಾದ್ರೆ ಹೊಸ ಸ್ಮಾರ್ಟ್‌ಚಾಚ್‌ನ ವಿಶೇಷತೆ ಏನು? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್‌ ಖರೀದಿಸುವ ಮುನ್ನ ಈ ಸ್ಮಾರ್ಟ್‌ವಾಚ್‌ ಬಗ್ಗೆ ತಿಳಿದುಕೊಳ್ಳಿರಿ!

ಫೈರ್-ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ 1.39 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಮಲ್ಟಿ ವಾಚ್ ಫೇಸ್ ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ನಯವಾದ ಮತ್ತು ಸೊಗಸಾದ ವೃತ್ತಾಕಾರದ ಡಯಲ್ ವಿನ್ಯಾಸದೊಂದಿಗೆ ಬರಲಿದ್ದು, ಪ್ರೀಮಿಯಂ ಲುಕ್‌ನಲ್ಲಿ ಗಮನಸೆಳೆದಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಒಳಗೊಂಡಿದೆ. ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್, ಸ್ಪೀಕರ್ ಮತ್ತು ಬ್ಲೂಟೂತ್ 5.0 ಪ್ರೋಟೋಕಾಲ್ ಅನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್‌ ಮೂಲಕವೇ ನಿಮ್ಮ ಫೋನ್‌ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಕೆಲಸ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಮೀಸಲಾದ ಡಯಲ್ ಪ್ಯಾಡ್ ಅನ್ನು ಒಳಗೊಂಡಿದೆ. ಅಲ್ಲದೆ ಕಾಲ್‌ ಹಿಸ್ಟರಿ ಮತ್ತು ಕನೆಕ್ಟಿವಿಟಿ ಸಿಂಕ್ರೊನೈಸೇಶನ್ ಅನ್ನು ಬೆಂಬಲಿಸಲಿದೆ.

ಫೈರ್-ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್ ರನ್ನಿಂಗ್‌, ಸ್ವಿಮ್ಮಿಂಗ್‌, ಸೈಕ್ಲಿಂಗ್ ಮತ್ತು 123 ಸ್ಪೋರ್ಟ್ಸ್‌ ಆಕ್ಟಿವಿಟಿಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಗೇಮ್‌ಗಳನ್ನು ಸಹ ಆನಂದಿಸಬಹುದಾಗಿದೆ. ಜೊತೆಗೆ ಫೈರ್-ಬೋಲ್ಟ್ ಹೆಲ್ತ್ ಸೂಟ್ ಅನ್ನು ಪ್ರವೇಶಿಸಬಹುದು, ವಿವಿಧ ಹೆಲ್ತ್‌ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್, ಹಾಟ್‌ಬೀಟ್‌ ಮಾನಿಟರಿಂಗ್ ಮತ್ತು SpO2 ಟ್ರ್ಯಾಕರ್‌ ಅನ್ನು ಹೊಂದಿದೆ.

ಫೈರ್-ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್ IP68 ರೇಟಿಂಗ್‌ ಅನ್ನು ಹೊಂದಿದ್ದು, ನೀರು ಮತ್ತು ದೂಳಿನಿಂದ ರಕ್ಷಣೆ ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಕುಳಿತುಕೊಳ್ಳುವ ಜ್ಞಾಪನೆಗಳು, ಸ್ಮಾರ್ಟ್ ನೋಟಿಫಿಕೇಶನ್‌, ವೆದರ್‌ ಅಪ್ಡೇಟ್‌ ಮತ್ತು ಮ್ಯೂಸಿಕ್‌ ಮತ್ತು ಕ್ಯಾಮರಾ ಫಂಕ್ಷನ್‌ಗಳ ಕಂಟ್ರೋಲ್‌ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ 270mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇದು ಬ್ಲೂಟೂತ್ ಕರೆ ಇಲ್ಲದೆ 7 ದಿನಗಳವರೆಗೆ ಮತ್ತು ಬ್ಲೂಟೂತ್ ಕರೆಯೊಂದಿಗೆ 3 ದಿನಗಳ ರನ್‌ಟೈಂ ಅನ್ನು ಒದಗಿಸಲಿದೆ.

ಸ್ಮಾರ್ಟ್‌ವಾಚ್‌ ಖರೀದಿಸುವ ಮುನ್ನ ಈ ಸ್ಮಾರ್ಟ್‌ವಾಚ್‌ ಬಗ್ಗೆ ತಿಳಿದುಕೊಳ್ಳಿರಿ!

ಫೈರ್-ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 20 ದಿನಗಳ ಬಾಳಿಕೆ ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ 120 ನಿಮಿಷಗಳಲ್ಲಿ‌ 0 ರಿಂದ 100% ವರೆಗೆ ಚಾರ್ಜ್‌ ಮಾಡಲಿದೆ. ಈ ಸ್ಮಾರ್ಟ್‌ವಾಚ್‌ನ ಮೆಟಾಲಿಕ್ ಸ್ಟ್ರಾಪ್ ರೂಪಾಂತರವು 1,999ರೂ. ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ವಾಚ್ ಕಪ್ಪು, ಬೆಳ್ಳಿ ಮತ್ತು ಚಿನ್ನದಲ್ಲಿ ಲಭ್ಯವಿದೆ. ಲೆದರ್ ಸ್ಟ್ರಾಪ್ ರೂಪಾಂತರವು 1,799ರೂ. ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು ಮತ್ತು ಕಂದು ಬಣ್ಣದ ಆಯ್ಕೆಗಳಲ್ಲಿ ಸಿಗಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಫೈರ್-ಬೋಲ್ಟ್ ಡಾಗರ್ ಲಕ್ಸ್ ಮತ್ತು ಫೈರ್-ಬೋಲ್ಟ್ ಬ್ಲಿಝಾರ್ಡ್ ಅನ್ನು ಸಹ ಬಿಡುಗಡೆ ಮಾಡಿದೆ.

Best Mobiles in India

English summary
Fire-Boltt Ultimate with 7-day battery life launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+