ಫೈರ್‌ಬೋಲ್ಟ್‌ನಿಂದ ಹೊಸ ಸ್ಮಾರ್ಟ್‌ವಾಚ್ ಲಾಂಚ್; ಫೈರಿಂಗ್ ಫೀಚರ್ಸ್!
ಫೈರ್‌ಬೋಲ್ಟ್ ಕಂಪೆನಿ ಯುವಜನರ ಹಾಟ್‌ಫೇವರಿಟ್ ಸ್ಮಾರ್ಟ್‌ವಾಚ್ ಬ್ರ್ಯಾಂಡ್ ಎನಿಸಿಕೊಂಡಿದೆ. ಇಂದಿನ ಯುವಜನತೆಯೆ ಆಶಯಕ್ಕೆ ತಕ್ಕಂತ ವಾಚ್‌ಗಳನ್ನು ಪರಿಚಯಿಸುವಲ್ಲಿ ಫೈರ್‌ಬೋಲ್ಟ್ ಕಂಪೆನಿ ಮುಂಚೂಣಿಯಲ್ಲಿದೆ. ಇದಕ್ಕೆ ಅನುಗುಣವಾಗಿ ಇದೀಗ ಫೈರ್‌ಬೋಲ್ಟ್ ವಿಷನರಿ ಅಲ್ಟ್ರಾ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
ಹೌದು, ಫೈರ್‌ಬೋಲ್ಟ್ ಕಂಪೆನಿ ಭಾರತದಲ್ಲಿ ಫೈರ್‌ಬೋಲ್ಟ್ ವಿಷನರಿ ಅಲ್ಟ್ರಾ ಸ್ಮಾರ್ಟ್‌ವಾಚ್ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್ ಬಿಗ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ತಿರುಗುವ ಕ್ರೌನ್ ಬಟನ್ ಅನ್ನು ಹೊಂದಿದ್ದು, ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರಾಪ್ ಅನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್ ಕ್ಲಾಸಿಕ್ ಲುಕ್ ಅನ್ನು ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ವಿಷನರಿ ಅಲ್ಟ್ರಾ
ಫೈರ್-ಬೋಲ್ಟ್ ವಿಷನರಿ ಅಲ್ಟ್ರಾ ಸ್ಮಾರ್ಟ್‌ವಾಚ್ 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಒಳಗೊಂಡಿದೆ. ಇದು ಕಠಿಣವಾದ ಮೆಟಲ್ ಪಟ್ಟಿಯನ್ನು ಹೊಂದಿದೆ. ಇದಲ್ಲದೆ ತಿರುಗುವ ಕಿರೀಟವನ್ನು ಹೊಂದಿದ್ದು, ಸುಲಭ ಸಂಚರಣೆಗಾಗಿ ಬಟನ್ ಅನ್ನು ಒಳಗೊಂಡಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಇದರಿಂದ ಬ್ಲೂಟೂತ್ ಬಳಸಿಕೊಂಡು ನೀವು ಸ್ಮಾರ್ಟ್‌ವಾಚ್ ಮೂಲಕವೇ ಕರೆಗಳನ್ನು ಮಾಡಬಹುದು. ಅಲ್ಲದೆ ಕಾಲಿಂಗ್ ಹಿಸ್ಟರಿಯನ್ನು ಸಹ ಪರಿಶೀಲಿಸಬಹುದು. ಜೊತೆಗೆ ನಿಮ್ಮ ಕಂಟ್ಯಾಕ್ಟ್‌ಗಳನ್ನು ಸಿಂಕ್ ಮಾಡಬಹುದು. ಇದಕ್ಕಾಗಿ ಸ್ಮಾರ್ಟ್‌ವಾಚ್‌ನಲ್ಲಿ ಕರೆಗಳನ್ನು ನಿರ್ವಹಿಸಲು ಮೈಕ್ ಮತ್ತು ಸ್ಪೀಕರ್ ಅನ್ನು ಹೊಂದಿವೆ.
ಇದಲ್ಲದೆ ಸ್ಮಾರ್ಟ್‌ವಾಚ್ 110ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಕೂಡ ಹೊಂದಿದೆ. ಇದರಿಂದ ಸ್ಪೋರ್ಟ್ಸ್ ಪ್ರಿಯರಿಗೆ ಸೂಕ್ತವಾದ ಆಯ್ಕೆಗಳನ್ನು ಸಹ ಇದರಲ್ಲಿ ಕಾಣಬಹುದು. ಇನ್ನು ಸ್ಮಾರ್ಟ್‌ವಾಚ್ SpO2, ಹೃದಯ ಬಡಿತ ಮತ್ತು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಸಹ ಪಡೆದಿದೆ. ಇದರಿಂದ ನಿಮ್ಮ ಆರೋಗ್ಯ ಮಟ್ಟವನ್ನು ಕೂಡ ಆಗಾಗ ಗಮನಿಸುವುದಕ್ಕೆ ಸಾದ್ಯವಾಗಲಿದೆ.
ಇನ್ನು ಸ್ಮಾರ್ಟ್ ವಾಚ್‌ಗಳು ನೀರು ಮತ್ತು ಧೂಳಿನಿಂದ ರಕ್ಷಣೆಯನ್ನು ಸಹ ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಅನ್ನು ಇಯರ್‌ಬಡ್ಸ್‌ಗಳಿಗೆ ಕೂಡ ಕನೆಕ್ಟ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಲ್ಲಿ ಅಧಿಸೂಚನೆಗಳು, ವೆದರ್ ಅಪ್ಡೇಟ್‌ಗಳನ್ನು ಸಹ ಪಡೆಯಲು ಅವಕಾಶವಿದೆ. ಹಾಗೆಯೇ ಫೋನ್‌ನ ಕ್ಯಾಮರಾ ಮತ್ತು ಮ್ಯೂಸಿಕ್ ಕಂಟ್ರೋಲ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಟೈಮರ್, ಅಲಾರಾಂ ಅಥವಾ ಸ್ಟಾಪ್‌ವಾಚ್ ಆಗಿ ಕೂಡ ಬಳಸಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಬ್ಯಾಟರಿಯು 5 ದಿನಗಳ ಬ್ಯಾಕ್‌ಅಪ್ ಅನ್ನು ಸಹ ಹೊಂದಿದೆ.
ಬೆಲೆ ಮತ್ತು ಲಬ್ಯತೆ
ಭಾರತದಲ್ಲಿ ಈ ಸ್ಮಾರ್ಟ್‌ವಾಚ್ ವಿಶೇಷ ಪರಿಚಯಾತ್ಮಕ ಬೆಲೆ 3,499ರೂ.ಗಳಿಗೆ ಸಿಗಲಿದೆ. ಇದನ್ನು ನೀವು ಚಿನ್ನ, ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್ ಅನ್ನು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಆಗಸ್ಟ್ 15 ರಿಂದ ಖರೀದಿಸಬಹುದಾಗಿದೆ.
ಫೈರ್‌ಬೋಲ್ಟ್ ಕಂಪೆನಿ ಇತ್ತೀಚಿಗೆ ಫೈರ್‌ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ SpO2 ಮಾನಿಟರಿಂಗ್, ಹಾರ್ಟ್‌ಬೀಟ್ ಸೆನ್ಸಾರ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ನಿದ್ರೆಯ ಮೇಲ್ವಿಚಾರಣೆ ಮಾಡುವ ಹೆಲ್ತ್ ಟ್ರ್ಯಾಕರ್‌ಗಳನ್ನು ಹೊಂದಿದೆ.


Click it and Unblock the Notifications








