ಭಾರತಕ್ಕೆ ಎಂಟ್ರಿ ಕೊಟ್ಟ ಫೈರ್-ಬೋಲ್ಟ್ ವೋಗ್ ಸ್ಮಾರ್ಟ್‌ವಾಚ್.. ಬೆಲೆ ಎಷ್ಟು?
ಫೈರ್-ಬೋಲ್ಟ್ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳಿಂದ ಗುರುತಿಸಿಕೊಂಡಿದೆ. ವಿವಿಧ ಶೈಲಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಸ್ಮಾರ್ಟ್‌ವಾಚ್ ಪ್ರಿಯರ ಮನಗೆದ್ದಿದೆ. ಸದ್ಯ ಇದೀಗ ಭಾರತದಲ್ಲಿ ಫೈರ್-ಬೋಲ್ಟ್ ವೋಗ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಪ್ರೀಮಿಯಂ ವಿನ್ಯಾಸ ಮತ್ತು ಬಿಗ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.
ಹೌದು, ಫೈರ್-ಬೋಲ್ಟ್ ವೋಗ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್ ಮೆಟಾಲಿಕ್ ಯುನಿಬಾಡಿಯನ್ನು ಪಡೆದುಕೊಂಡಿದೆ. ಆದರೆ ಇದು ಆಪಲ್ ವಾಚ್ ಕ್ಲೋನ್‌ನಂತೆ ಕಾಣಲಿದೆ. ಜೊತೆಗೆ ಬಲಭಾಗದಲ್ಲಿ ಕಾರ್ಯನಿರ್ವಹಿಸುವ ತಿರುಗುವ ಕಿರೀಟವನ್ನು ಹೊಂದಿರುವ ಸ್ಕ್ವೇರ್ ಡಯಲ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ವೋಗ್ ಸ್ಮಾರ್ಟ್‌ವಾಚ್ 2.01 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ವೇರ್ ಡಯಲ್ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 428 x 516 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಸ್ಟೇನ್‌ಲೆಸ್ ಸ್ಟೀಲ್, ಸ್ಟೀಲ್ ಮೆಶ್, ಡೈನಾ ಲೂಪ್, ಆಕ್ವಾ ಲೂಪ್ ಮತ್ತು ಮ್ಯಾಗ್ನಾ ಲೂಪ್ ಸೇರಿದಂತೆ ವಿವಿಧ ಸ್ಟ್ರಾಪ್ ಆಯ್ಕೆ ಮಾಡುವ ಅವಕಾಶವನ್ನು ನೀಡಲಿದೆ. ಜೊತೆಗೆ ಡಿಸ್‌ಪ್ಲೇ IP68 ರೇಟಿಂಗ್ ಹೊಂದಿದ್ದು ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ.
ಇದು ಆಲ್‌ವೇಸ್ ಆನ್ ಡಿಸ್‌ಪ್ಲೇ ಮೋಡ್ ಹೊಂದಿದ್ದು, ಕಸ್ಟಮೈಸ್‌ಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಸಹ ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಆಕರ್ಷಕ ಟ್ರ್ಯಾಕರ್‌ಗಳನ್ನು ಪಡೆದುಕೊಂಡಿದೆ. ಇದರಲ್ಲಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್ ಮತ್ತು ಸ್ಲೀಪ್ ಟ್ರ್ಯಾಕರ್‌ನೊಂದಿಗೆ ಬರಲಿದೆ. ಜೊತೆಗೆ ವಿಶ್ರಾಂತಿಗಾಗಿ ಧ್ಯಾನಸ್ಥ ಉಸಿರಾಟದ ಅವಧಿಗಳನ್ನು ನೀಡಲಿದೆ.
ಇನ್ನು ಈ ಸ್ಮಾರ್ಟ್ ವಾಚ್ ಬಳಕೆದಾರರ ತಾಪಮಾನವನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 105 ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದೆ. ಇನ್ನು ಇನ್‌ಬಿಲ್ಟ್ ಮೈಕ್ ಮತ್ತು ಸ್ಪೀಕರ್‌ನೊಂದಿಗೆ ಹ್ಯಾಂಡ್ಸ್-ಫ್ರೀ ಬ್ಲೂಟೂತ್ ಕಾಲ್ ಅನ್ನು ನೀಡಲಿದೆ. ಇದು ನೋಟಿಫಿಕೇಶನ್‌ಗಳ ಪ್ರದರ್ಶನ, ಕ್ಯಾಮರಾ ಮತ್ತು ಸಂಗೀತ ನಿಯಂತ್ರಣ, ಅಂತರ್ಗತ ಕ್ಯಾಲ್ಕುಲೇಟರ್, ಹವಾಮಾನ ನವೀಕರಣಗಳನ್ನು ಹೊಂದಿದೆ.
ಈ ಸ್ಮಾರ್ಟ್ ವಾಚ್ 260mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು ನಿಮಗೆ ಬಿಗ್ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ಸ್ಮಾರ್ಟ್‌ವಾಚ್ ಭಾರತದಲ್ಲಿ 2,199ರೂ. ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ವಿವಿಧ ಬಣ್ಣದ ಪಟ್ಟಿಯ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಬ್ರ್ಯಾಂಡ್‌ನ ವೆಬ್‌ಸೈಟ್ ಮತ್ತು ಅಮೆಜಾನ್‌ನಿಂದ ಖರೀದಿಸಬಹುದಾಗಿದೆ.
ಇದಲ್ಲದೆ ಇತ್ತೀಚಿಗೆ ಫೈರ್-ಬೋಲ್ಟ್ ಕಂಪೆನಿ ಹೊಸದಾಗಿ ಫೈರ್‌ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 1.43 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದ್ದು, ಫೋನ್ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಫೈರ್-ಬೋಲ್ಟ್ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಂತಹ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಜೊತೆಗೆ ಈ ಸ್ಮಾರ್ಟ್‌ವಾಚ್ 110 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್ ವಾಚ್ ನಿಮಗೆ ಹಲವು ಆಯ್ಕೆಯ ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಹೊಂದಿದೆ. ಇದಲ್ಲದೆ, ಸ್ಮಾರ್ಟ್‌ವಾಚ್ ಸಿರಿ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ. ಇದು ಯುವಜನರ ನೆಚ್ಚಿನ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದೆನಿಸಿಕೊಂಡಿದೆ.


Click it and Unblock the Notifications








