Home
ಸುದ್ದಿಜಾಲ

ಅಮೆಜಾನ್ ಪ್ರೈಮ್ ಡೇ 2020 ಸೇಲ್‌: ಫೈರ್ ಟಿವಿ ಸ್ಟಿಕ್ ಮೇಲೆ 50% ರಿಯಾಯಿತಿ!

ಇ-ಕಾಮರ್ಸ್‌ ದೈತ್ಯ ಅಮೆಜಾನ್ ಪ್ರೈಮ್ ಡೇ ಸೇಲ್‌ ಇದೇ ಆಗಸ್ಟ್ 6 ಮತ್ತು 7 ರಂದು ಭಾರತದಲ್ಲಿ ನಡೆಯಲಿದೆ. ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಎರಡು ದಿನಗಳ ಪ್ರೈಮ್‌ ಡೇ ಸೇಲ್‌ನಲ್ಲಿ ವಿವಿಧ ವಿಭಾಗಗಳಲ್ಲಿನ ಉತ್ಪನ್ನಗಳ ಮೇಲೆ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಹೊಂದಿರುತ್ತದೆ. ಸದ್ಯ ಈಗಾಗಲೇ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ದತ್ತ ಗ್ರಾಹಕರು ಗಮನವಿದ್ದು, ಪ್ರೈಮ್‌ ಡೇ ಸೇಲ್‌ನಲ್ಲಿ ತಮಗಿಷ್ಟವಾದ ಪ್ರಾಡಕ್ಟ್‌ಗಳನ್ನ ಖರೀದಿಸಬಹುದಾಗಿದೆ. ಗ್ರಾಹಕರ ಹಿತಕ್ಕೆ ತಕ್ಕಂತೆ ಹಲವು ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನ ನೀಡಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ರೈಮ್‌ ಡೇ ಸೇಲ್‌ 2020 ಮೇಳಕ್ಕೆ ದಿನಗಣನೆ ಶುರುವಾಗಿದೇ. ಇದೇ ಅಗಸ್ಟ್‌ 6 ಮತ್ತು 7 ರಂದು ನಡೆಯುವ ಈ ಸೇಲ್‌ನಲ್ಲಿ ಸಾಕಷ್ಟು ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನ ಘೋಷಿಸಲಾಗಿದೆ.ಅಮೆಜಾನ್ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೆಚ್ಚಿನ ಪ್ರಾಡಕ್ಟ್‌ಗಳ ಮೇಗಾ ಡೀಲ್ ಮತ್ತು ಕೊಡುಗೆಗಳನ್ನು ನೀಡಲಾಗಿದೆ. ಸದ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ ತನ್ನ ಎಸ್‌ಎಂಬಿಗಳು ಮತ್ತು ಸ್ಟಾರ್ಟ್ಅಪ್‌ಗಳಿಂದ 1,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಪ್ರೈಮ್‌ ಡೇ ಸೇಲ್‌ನಲ್ಲಿ ಆಯೋಜಿಸುತ್ತದೆ.

ಅಮೆಜಾನ್‌

ಅಮೆಜಾನ್‌ ತನ್ನ ಪ್ರೈಮ್‌ ಡೇ ಸೇಲ್‌ನಲ್ಲಿ ವಿವಿಧ ಉತ್ಪನ್ನಗಳ ಪೈಕಿ, ಅಲೆಕ್ಸಾ ಸಾಧನಗಳಲ್ಲಿ 50% ವರೆಗೆ ರಿಯಾಯಿತಿ ನೀಡುತ್ತಿದೆ. ಅವುಗಳಲ್ಲಿ ಎಕೋ ಸ್ಮಾರ್ಟ್ ಸ್ಪೀಕರ್ಗಳು, ಕಿಂಡಲ್ ಇ-ರೀಡರ್ ಮತ್ತು ಫೈರ್ ಟಿವಿ ಸ್ಟಿಕ್ ನಂತಹ ಪ್ರಾಡಕ್ಟ್‌ಗಳು ಕೂಡ ಸೇರಿವೆ. ಹಾಗಾದ್ರೆ ಲಬ್ಯವಿರುವ ಮಾಹಿತಿ ಪ್ರಕಾರ ಯಾವೆಲ್ಲಾ ವಸ್ತುಗಳ ಮೇಲೆ ರಿಯಾಯಿತಿ ದರವಿದೆ ಅನ್ನೊದನ್ನ ಇಲ್ಲಿ ತಿಳಿದುಕೊಳ್ಳಿರಿ.

ಅಮೆಜಾನ್ ಎಕೋ ಪ್ಲಸ್, ಎಕೋ ಇನ್ಪುಟ್

ಅಮೆಜಾನ್ ಎಕೋ ಪ್ಲಸ್, ಎಕೋ ಇನ್ಪುಟ್

Amazon 14,999 ಕ್ಕೆ ಮಾರಾಟವಾಗುವ ಅಮೆಜಾನ್ ಎಕೋ ಪ್ಲಸ್ ಸ್ಮಾರ್ಟ್ ಸ್ಪೀಕರ್ ಪ್ರೈಮ್ ಡೇ ಸೇಲ್‌ನಲ್ಲಿ ಕೇವಲ 7,499 ರೂ ಲಭ್ಯವಾಗಲಿದೆ. ಅಲ್ಲದೆ ಇದು ಎರಡನೇ ತಲೆಮಾರಿನ ಎಕೋ ಪ್ಲಸ್ ಆಗಿದ್ದು ಇದು ಡಾಲ್ಬಿ ವಾಯ್ಸ್‌ ಮತ್ತು ಇಂಟರ್‌ಬಿಲ್ಟ್‌ ಸ್ಮಾರ್ಟ್ ಹೋಮ್ ಹಬ್‌ನೊಂದಿಗೆ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ ಸ್ಪೀಕರ್ ನಾಲ್ಕು ಮೈಕ್ರೊಫೋನ್‌ಗಳನ್ನು ಸಹ ಹೊಂದಿದೆ. ಎಕೋ ಇನ್ಪುಟ್ ಪೋರ್ಟಬಲ್ 5,999ರೂ.ಆಗಿದ್ದು, ಪ್ರೈಮ್‌ ಡೇ ಸೇಲ್‌ನಲ್ಲಿ ಇದನ್ನು ಕೇವಲ 2,749 ರೂ,ಗಳಿಗೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಅಮೆಜಾನ್ ಫೈರ್ ಟಿವಿ ಸ್ಟಿಕ್

ಅಮೆಜಾನ್ ಫೈರ್ ಟಿವಿ ಸ್ಟಿಕ್

ಇನ್ನು ಪ್ರೈಮ್ ಡೇ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಮತ್ತೊಂದು ಪ್ರಾಡಕ್ಟ್‌ ಅಂದರೆ ಅಮೆಜಾನ್ ಫೈರ್ ಟಿವಿ ಸ್ಟಿಕ್ ಆಗಿದೆ. ಸದ್ಯ ಅಮೆಜಾನ್‌ ಫೈರ್‌ ಟಿವಿ ಸ್ಟಿಕ್‌ ಬೆಲೆ 3,999 ರೂ ಆಗಿದ್ದು, ಪ್ರೈಮ್‌ ಡೇ ಸೇಲ್‌ನಲ್ಲಿ 2,399 ರೂ,ಗಳಿಗೆ ಲಭ್ಯವಿರುತ್ತದೆ. ಇನ್ನು ಈ ಫೈರ್ ಟಿವಿ ಸ್ಟಿಕ್ ಅಲೆಕ್ಸಾ ವಾಯ್ಸ್ ರಿಮೋಟ್, ಎಲ್ಲಾ ಜನಪ್ರಿಯ ಒಟಿಟಿ ಅಪ್ಲಿಕೇಶನ್‌ಗಳಿಗೆ ಬೆಂಬಲ, ಮತ್ತು ವೆಬ್ ಬ್ರೌಸಿಂಗ್ ಅನ್ನು ಹೊಂದಿದೆ.

ಅಮೆಜಾನ್ ಎಕೋ ಶೋ, ಎಕೋ ಶೋ 5

ಅಮೆಜಾನ್ ಎಕೋ ಶೋ, ಎಕೋ ಶೋ 5

ಅಮೆಜಾನ್ ಎಕೋ ಶೋ 5 ಮತ್ತು ಎಕೋ ಶೋ ಅನ್ನು ಕ್ರಮವಾಗಿ, 5,399 ಮತ್ತು 14,999 ರೂ, ಗಳ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇನ್ನು ಎಕೋ ಶೋ 5 ನಲ್ಲಿ 5.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು ವಿಡಿಯೋ ಕರೆಗಳಿಗಾಗಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಎಕೋ ಶೋ 10.1 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇಂಟರ್‌ಬಿಲ್ಟ್‌ ಸ್ಮಾರ್ಟ್ ಹಬ್ ಅನ್ನು ಒಳಗೊಂಡಿದೆ.

ಕಿಂಡಲ್ ಪೇಪರ್ ವೈಟ್

ಕಿಂಡಲ್ ಪೇಪರ್ ವೈಟ್

ಇನ್ನು 10 ನೇ ತಲೆಮಾರಿನ ಕಿಂಡಲ್ ಪೇಪರ್‌ವೈಟ್ ಇಂಟರ್‌ಬಿಲ್ಟ್‌ ಲೈಟ್‌ ಅನ್ನು ಹೊಂದಿದೆ. ಅಲ್ಲದೆ ಇದು 8GB RAM ಮತ್ತು ವೈ-ಫೈ ಬೆಂಬಲವನ್ನು ಒಳಗೊಂಡಿದೆ. ಇದು ವಾಟರ್‌ ಫ್ರೂಪ್‌ ಅನ್ನು ಹೊಂದಿದೆ. ಅಲ್ಲದೆ ಇದು ಸಿಂಗಲ್‌ ಚಾರ್ಜ್‌ನಲ್ಲಿ ವಾರಗಳವರೆಗೆ ರನ್‌ ಆಗಲಿದೆ. 12,999 ಬೆಲೆಯ ಕಿಂಡಲ್ ಪೇಪರ್‌ವೈಟ್ ಅನ್ನು ಪ್ರೈಮ್ ಡೇ ಮಾರಾಟದ ಸಮಯದಲ್ಲಿ, 9,999 ಕ್ಕೆ ಖರೀದಿಸಬಹುದಾಗಿದೆ.

ಒನಿಡಾ ಫೈರ್ ಟಿವಿ ಆವೃತ್ತಿ

ಒನಿಡಾ ಫೈರ್ ಟಿವಿ ಆವೃತ್ತಿ

ಒನಿಡಾ ಫೈರ್ ಟಿವಿ ಆವೃತ್ತಿ ಸಹ ಪ್ರೈಮ್‌ ಡೇ ಸೇಲ್‌ನಲ್ಲಿ ಮಾರಾಟವಾಗುತ್ತಿದೆ. ಇದು ಡಾಲ್ಬಿ ಮತ್ತು ಡಿಟಿಎಸ್ ಟ್ರುಸರೌಂಡ್ ಅನ್ನು ಹೊಂದಿದೆ. ಜೊತೆಗೆ ಇದು 32 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಒನಿಡಾ ಟಿವಿ ಫೈರ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ ಇದು ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌ ಮತ್ತು ಯೂಟ್ಯೂಬ್, ಪ್ರೈಮ್ ವಿಡಿಯೋ ಮತ್ತು ಇಂಟರ್‌ಬಿಲ್ಟ್‌ ಅಪ್ಲಿಕೇಶನ್‌ಗಳನ್ನ ಹೊಂದಿದೆ. ಸದ್ಯ ಒನಿಡಾ ಫೈರ್ ಟಿವಿ ಆವೃತ್ತಿಯು 50% ರಿಯಾಯಿತಿಯನ್ನು ಪಡೆದುಕೊಂಡಿದ್ದು, ಇದರ ಬೆಲೆಯನ್ನು, 19,990 ರಿಂದ, 10,999 ಕ್ಕೆ ಇಳಿಸಲಾಗಿದೆ.

Best Mobiles in India

English summary
Amazon devices such as Echo smart speakers, Kindle, Fire TV Stick will be available with up to 50% off during Prime Day sale.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+