ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌

Written By:

ಇಷ್ಟುದಿನ ಬೆಂಗಳೂರು ಮತ್ತು ಇತರ ದೊಡ್ಡ ದೊಡ್ಡ ನಗರಗಳಲ್ಲಿ ಬಾಡಿಗೆ ಕಾರು ಬುಕ್‌ ಮಾಡಲು "ಓಲಾ ಕ್ಯಾಬ್‌" ಅಪ್ಲಿಕೇಶನ್‌ ಇತ್ತು. ಈಗ ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಾರಂಭವಾದ ಬಾಡಿಗೆ ಬೈಕ್‌ ಸವಾರಿಯು ಒಂದು ಉದ್ಯಮವಾಗಿ ಬೆಳೆದಿದೆ. ಅಂದಹಾಗೆ "ರಾಯಲ್‌ ಬ್ರದರ್ಸ್‌" ಉದ್ಯಮ ಬಾಡಿಗೆ ಬೈಕ್‌ ಸೇವೆ ಪ್ರಾರಂಭಿಸಿದ್ದು ಈಗ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಹ ಅಭಿವೃದ್ದಿ ಪಡಿಸಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾಯಲ್‌ ಬ್ರದರ್ಸ್‌

ರಾಯಲ್‌ ಬ್ರದರ್ಸ್‌

ರಾಯಲ್‌ ಬ್ರದರ್ಸ್‌

ದಕ್ಷಿಣ ಭಾರತದ "ರಾಯಲ್‌ ಬ್ರದರ್ಸ್"‌ ಎಂಬ ಬೈಕ್‌ ಬಾಡಿಗೆ ಉದ್ಯಮವು ಬೆಂಗಳೂರಿನಲ್ಲಿ ಬೈಕ್‌ ಲೈಸೆನ್ಸ್‌ ಅನ್ನು ಆರ್‌ಟಿ'ದಿಂದ ಪಡೆದುಕೊಂಡಿದೆ.

ಮೇ 2 ರಿಂದ ಮೊಬೈಲ್‌ ಅಪ್ಲಿಕೇಶನ್‌

ಮೇ 2 ರಿಂದ ಮೊಬೈಲ್‌ ಅಪ್ಲಿಕೇಶನ್‌

ಮೇ 2 ರಿಂದ ಮೊಬೈಲ್‌ ಅಪ್ಲಿಕೇಶನ್‌

ಅಂದಹಾಗೆ ಆರ್‌ಟಿಓ'ದಿಂದ ಲೈಸೆನ್ಸ್‌ ಪಡೆದುಕೊಂಡಿರುವ ಬೈಕ್‌ ಬಾಡಿಗೆ ಉದ್ಯಮದ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ 'ಇ ವಿ ರಮಣ ರೆಡ್ಡಿ'ರವರು ಮೇ 2 ರಂದು ಉದ್ಘಾಟನೆ ಮಾಡಲಿದ್ದಾರೆ.

ಅತ್ಯಲ್ಪ ದರದಲ್ಲಿ ಮುಂದೆ ಸಾಗಿ

ಅತ್ಯಲ್ಪ ದರದಲ್ಲಿ ಮುಂದೆ ಸಾಗಿ

ಅತ್ಯಲ್ಪ ದರದಲ್ಲಿ ಮುಂದೆ ಸಾಗಿ

ಅಂದಹಾಗೆ ಬಾಡಿಗೆಗೆ ಹೋಂಡಾ ಆಕ್ಟಿವಾ ಮತ್ತು ಸುಜುಕಿ ಬೈಕ್‌ಗಳು ಅತ್ಯಲ್ಪ ಬೆಲೆಯಲ್ಲಿ ದೊರೆಯಲಿದ್ದು, ಬೈಕ್‌ ಬಾಡಿಗೆ ಬೇಕಾದವರು ಮೊಬೈಲ್‌ ಆಪ್‌ನಲ್ಲಿ ಬುಕ್‌ ಮಾಡಬೇಕು. ಬುಕ್‌ ಮಾಡಿದ ನಂತರ ಬೈಕ್‌ ಬರುತ್ತದೆ. ಪ್ರಯಾಣ ಮಾಡುವವರು ಮೊದಲು ಹಣ ನೀಡ ಬೇಕು. ನಂತರ ಅವರು ಹೇಳಿದ ಸ್ಥಳಕ್ಕೆ ಡ್ರಾಪ್ ಮಾಡಲಾಗುತ್ತದೆ.

ಸಿಟಿಯ ಹಲವು ಪ್ರದೇಶಗಳಲ್ಲಿ ಬೈಕ್‌ ಇರುತ್ತವೆ

ಸಿಟಿಯ ಹಲವು ಪ್ರದೇಶಗಳಲ್ಲಿ ಬೈಕ್‌ ಇರುತ್ತವೆ

ಸಿಟಿಯ ಹಲವು ಪ್ರದೇಶಗಳಲ್ಲಿ ಬೈಕ್‌ ಇರುತ್ತವೆ

ಅಂದಹಾಗೆ 'ರಾಯಲ್‌ ಬ್ರದರ್ಸ್'‌ ಈಗಾಗಲೇ ಕರ್ನಾಟಕದ ಬೆಂಗಳೂರು ಮೈಸೂರು, ಮಣಿಪಾಲ್‌, ಉಡುಪಿ ಮತ್ತು ಮಂಗಳೂರಿನಲ್ಲಿ ಮಾತ್ರವಲ್ಲದೇ ಇತ್ತೀಚೆಗೆ ಗೋವಾದಲ್ಲಿ ಸಹ ಬೈಕ್‌ ಬಾಡಿಗೆ ಸೇವೆ ಆರಂಭಿಸಿದೆ. ಇದು ಹೇಗೆ ಅಂದ್ರೆ"ಓಲಾ ಕ್ಯಾಬ್‌" ಆಪ್‌ನಲ್ಲಿ ಕಾರು ಬಾಡಿಗೆಗೆ ಬುಕ್‌ ಮಾಡುತ್ತಿದ್ದರಲ್ಲಾ ಹಾಗೆ ರಾಯಲ್‌ ಬ್ರದರ್ಸ್‌'ನ ಆಪ್‌ ಬುಕ್‌ ಮಾಡಿ ಬೈಕ್‌ ಬಾಡಿಗೆಗೆ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
First bike rental app gets way in Bengaluru. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot