95,000 ಪೌಂಡ್‌ಗೆ ಹರಾಜಾಯ್ತು ಮೊದಲ 'ಕಂಪ್ಯೂಟರ್ ಪ್ರೋಗ್ರಾಂ' ದಾಖಲೆ ಪ್ರತಿ!

|

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅತ್ಯಂತ ಅಪರೂಪದ ಎಡಾ ಲವ್ಲೇಸ್ ಅವರ ಪ್ರವರ್ತಕ 'ಕಂಪ್ಯೂಟರ್ ಪ್ರೋಗ್ರಾಂ' ದಾಖಲೆ ಪ್ರತಿ ಹರಾಜಿನಲ್ಲಿ 95,000 ಪೌಂಡ್‌ಗಳಿಗೆ (ಅಂದಾಜು 90 ಲಕ್ಷ) ಮಾರಾಟವಾಗಿದೆ. ಚಾರ್ಲ್ಸ್ ಬ್ಯಾಬೇಜ್ ಯೋಜನೆಗಳನ್ನು ಚರ್ಚಿಸುವ ಇಟಾಲಿಯನ್ ಗಣಿತಜ್ಞ ಮೆನಾಬ್ರಿಯರಿಂದ ಲೊವೆಲಾಸ್ ಕಾಗದದ ಅನುವಾದದ ಲೆದರ್ ಪ್ರತಿ ಇದಾಗಿದ್ದು, ಇದನ್ನು ಮೊದಲ ಕಂಪ್ಯೂಟರ್ ಪ್ರೊಗ್ರಾಮ್ ಎಂದು ಪರಿಗಣಿಸಲಾಗಿದೆ.

"ಆಧುನಿಕ ಕಾಲಕ್ಕಿಂತ ಮೊದಲು ಡಿಜಿಟಲ್ ಕಂಪ್ಯೂಟಿಂಗ್ ಇತಿಹಾಸದಲ್ಲಿ ಪ್ರಮುಖವಾದ ಕಾಗದದ ಮೊದಲ ಪ್ರತ್ಯೇಕ ಆವೃತ್ತಿ" ಮತ್ತು "ಅತ್ಯಂತ ಅಪರೂಪದ ತುಣುಕು" ಎಂದು ಇದನ್ನು ಕರೆಯಲಾಗಿದ್ದು, ಈ ಲೇಖನದ ಮುದ್ರಿತ ಪುಸ್ತಕದ ಆರು ಪರಿಚಿತ ಪ್ರತಿಗಳು ಮಾತ್ರ ಇವೆ ಎಂದು ಹರಾಜುಗಾರ ಫಿಲಿಪ್ ಆಲ್ವುಡ್ ಅವರು ಹೇಳಿದ್ದಾರೆ. 40 ಸಾವಿರ ರಿಂದ 60 ಸಾವಿರ ಪೌಂಡ್ ಗಳಿಕೆಯ ನಿರೀಕ್ಷೆಯನ್ನು ಮೀರಿ ಪುಸ್ತಕ ವ್ಯಾಪಾರಿಯೋರ್ವರು ಪ್ರವರ್ತಕ 'ಕಂಪ್ಯೂಟರ್ ಪ್ರೋಗ್ರಾಂ' ದಾಖಲೆಯನ್ನು ಖರೀದಿಸಿದ್ದಾರೆ.

 95,000 ಪೌಂಡ್‌ಗೆ ಹರಾಜಾಯ್ತು ಮೊದಲ 'ಕಂಪ್ಯೂಟರ್ ಪ್ರೋಗ್ರಾಂ' ದಾಖಲೆ ಪ್ರತಿ!

ಕಂಪ್ಯೂಟರ್ ಎಂಬ ಪರಿಕಲ್ಪನೆಯ ಇತಿಹಾಸವನ್ನು ನೋಡಲು ಹೊರಟರೆ ಕಾಣುವ ಚಿತ್ರಣ ಬೇರೆಯೇ ಇದೆ. ಕಂಪ್ಯೂಟರ್ ಕಂಡುಹಿಡಿದದ್ದು ಪಿತಾಮಹಾ ಆದರೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ರೂಪುಗೊಂಡದ್ದು ಓರ್ವ ಯುವತಿಯಿಂದ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆಶ್ಚರ್ಯವೆಂದರೆ, ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ರಚನೆಯಾಗಿದ್ದು ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ.! ಆಶ್ಚರ್ಯವೇ? ಹಾಗಿದ್ದರೆ, ಈ ಕುತೋಹಲದ ವಿಷಯವನ್ನು ಮುಂದೆ ಓದಿ ತಿಳಿಯಿರಿ.!

ಮೊದಲ ಕಂಪ್ಯೂಟರ್ ಪ್ರೋಗ್ರಾಮ್!

ಮೊದಲ ಕಂಪ್ಯೂಟರ್ ಪ್ರೋಗ್ರಾಮ್!

ಕಂಪ್ಯೂಟರ್ ಕಂಡುಹಿಡಿದದ್ದು ಪಿತಾಮಹಾ ಆದರೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ರೂಪುಗೊಂಡದ್ದು ಓರ್ವ ಯುವತಿಯಿಂದ. ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ರಚಿಸಿದ್ದು ಎಡಾ ಬೈರನ್ ಅಥವಾ ಎಡಾ ಲವ್ಲೇಸ್ ಬೈರನ್ ಎಂಬ ಯುವತಿ. ಅದೂ ಕೂಡ ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ.!

ಯಾರೀಕೆ ಎಡಾ ಲವ್ಲೇಸ್ ಬೈರನ್?

ಯಾರೀಕೆ ಎಡಾ ಲವ್ಲೇಸ್ ಬೈರನ್?

ಗೂಗಲ್‌ನಲ್ಲಿ ಒಮ್ಮೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ರೂಪಿಸಿದ್ದು ಯಾರು ಎಂದು ನೀವು ಸರ್ಚ್ ಮಾಡಿದರೆ ಎಡಾ ಲವ್ಲೇಸ್ ಬೈರನ್ ಅವರ ಚಿತ್ರ ಸಮೇತ ಅವರ ಕಾರ್ಯಗಳು ನಿಮಗೆ ಸಿಗುತ್ತವೆ. ಇಂಗ್ಲಿಷ್ ಕಾವ್ಯವಾದ ರಮ್ಯ ಪಂಥದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಖ್ಯಾತ ಕವಿ ಬೈರನ್ ಅವರ ಅವರ ಪುತ್ರಿ ಎಡಾ ಲವ್ಲೇಸ್ ಬೈರನ್.!

ಕವಿ ಮನೆಯಿಂದ ಕಂಪ್ಯೂಟರ್!

ಕವಿ ಮನೆಯಿಂದ ಕಂಪ್ಯೂಟರ್!

ಖ್ಯಾತ ಕವಿ ಬೈರನ್ ಅವರ ಅವರ ಪುತ್ರಿ ಎಂಬ ಪದನಾಮವು ಎಡಾ ಲವ್ಲೇಸ್ ಬೈರನ್‌ಗೆ ಸಿಕ್ಕಿದರೂ ಕೂಡ ಅಪ್ಪನಿಂದ ಅವಳಿಗೆ ಮತ್ತೇನು ದೊರೆಯಲಿಲ್ಲ. ಮಗಳು ಹುಟ್ಟಿದ ಐದೇ ವಾರಕ್ಕೆ ಬೈರನ್ ತನ್ನ ಪತ್ನಿ ಆನಿ ಇಸಬೆಲ್ಲಾ ಮಿಲ್‌ಬೇಂಕ್‌ಗೆ ವಿಚ್ಛೇದನ ನೀಡಿದ. ಹಾಗಾಗಿ, ಎಡಾಳನ್ನು ಸಾಕಿದ್ದು ತಾಯಿಯೇ.!

 ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು!

ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು!

ಬೈರನ್ ತನ್ನ ಪತ್ನಿ ಆನಿ ಇಸಬೆಲ್ಲಾ ಮಿಲ್‌ಬೇಂಕ್‌ಗೆ ವಿಚ್ಛೇದನ ನೀಡಿದ ನಂತರ ಅನೆಬೆಲ್ಲಾಳಿಗೆ ಬೈರನ್‌ನ ಮೇಲೆ ಎಷ್ಟು ಕೋಪವಿತ್ತು. ಹಾಗಾಗಿ, ಮಗಳು ಯಾವುದೇ ಕಾರಣಕ್ಕೂ ತಂದೆಯಂತೆ ಕವಿತೆಯ ಹಾದಿಯಲ್ಲಿ ಸಾಗಬಾರದೆಂದು ಇಸಬೆಲ್ಲಾ ನಿರ್ಧರಿಸಿದ್ದಳು.ಮಾಜಿ ಗಂಡನ ಕಾವ್ಯ ಮತ್ತು ‘ರಸಿಕತೆ'ಗಳ ಮೇಲಿನ ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು.

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆದದ್ದು ಹೇಗೆ?

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆದದ್ದು ಹೇಗೆ?

1840ರಲ್ಲಿ ತತ್ವಜ್ಞಾನಿ ಮತ್ತು ಮೆಕಾನಿಕಲ್ ಎಂಜಿನಿಯರ್ ಚಾರ್ಲ್ಸ್ ಬ್ಯಾಬೇಜ್, ‘ವಿಶ್ಲೇಷಣಾ ಯಂತ್ರ' ಎಂದು ಆತ ಹೆಸರಿಟ್ಟಿದ್ದ ಕಂಪ್ಯೂಟರ್ ಬಗ್ಗೆ ಒಂದು ಉಪನ್ಯಾಸ ನೀಡಿದ್ದರು. ಆ ಉಪನ್ಯಾಸವನ್ನು ಯುವ ಎಂಜಿನಿಯರ್‌ ಲ್ಯೂಗಿ ಮೆನಾಬ್ರಿಯಾ ಫ್ರೆಂಚ್‌ನಲ್ಲಿ ಬರೆದುಕೊಂಡ. ನಂತರ, ಬ್ಯಾಬೇಜ್‌ನ ಗೆಳೆಯ ವ್ಹೀಟ್ಸ್ಟೋನ್ ಎಂಬಾತ ಇದನ್ನು ಇಂಗ್ಲಿಷ್‌ಗೆ ಅನುವಾದಿಸಲು ಲವ್ಲೇಸ್‌ಗೆ ನೀಡಿದ.

ಅನುವಾದದೇ ಕೆಲಸವಾಯಿತು!

ಅನುವಾದದೇ ಕೆಲಸವಾಯಿತು!

ಇಂಗ್ಲಿಷ್‌ಗೆ ಅನುವಾದಿಸಲು ಪಡೆದುಕೊಂಡ ಎಡಾ ಲವ್ಲೇಸ್ ಇದನ್ನು ಅನುವಾದಿಸಿ ಕೊಡುವ ಬದಲಿಗೆ ಅಲ್ಲಿದ ಪರಿಕಲ್ಪನಾತ್ಮಕ ಟಿಪ್ಪಣಿಗಳಿಗೆ ತನ್ನ ಆಲೋಚನೆಗಳ ಟಿಪ್ಪಣಿಯನ್ನೂ ಸೇರಿಸುತ್ತಾ ಹೋದಳು. ಇಡೀ ಒಂದು ವರ್ಷ ಈ ಕೆಲಸದಲ್ಲಿಯೇ ಮುಳುಗಿದ ಈಕೆ ಬ್ಯಾಬೇಜ್‌ನ ಜೊತೆ ಸಂಪರ್ಕ ಬೆಳೆಸಿ ಚರ್ಚಿಸಿ ಮೆನಾಬ್ರಿಯಾ ಬರೆದುಕೊಂಡಿದ್ದ ಟಿಪ್ಪಣಿಯನ್ನು ವಿಸ್ತಾರಗೊಳಿಸಿದಳು.

110 ವರ್ಷಗಳ ಕಾಲ ಬೇಕಾಯಿತು.!

110 ವರ್ಷಗಳ ಕಾಲ ಬೇಕಾಯಿತು.!

ಬ್ಯಾಬೇಜ್ ಕಂಪ್ಯೂಟರ್‌ನ ರೂಪವನ್ನು ಕಲ್ಪಿಸಿದ್ದ. ಹಾಗೆಯೇ, ಅದಕ್ಕೆ ಬೇಕಿರುವ ಪ್ರೋಗ್ರಾಮ್ ಅನ್ನು ಎಡಾ ಲವ್ಲೇಸ್ ರಚಿಸಿದ್ದಳು ಎಂಬುದು ಹೊರಜಗತ್ತಿಗೆ ತಿಳಿಯುವುದಕ್ಕೆ 110 ವರ್ಷಗಳ ಕಾಲ ಬೇಕಾಯಿತು. 1953ರಲ್ಲಿ ಬ್ಯಾಬೇಜ್ ಮುಂದಿಟ್ಟ ಪರಿಕಲ್ಪನೆಗೆ ಮೊದಲ ಕಂಪ್ಯೂಟರ್ ಮತ್ತು ಎಡಾ ರಚಿಸಿದ ಗಣನವಿಧಾನಕ್ಕೆ ಮೊದಲ ಪ್ರೊಗ್ರಾಮ್ ಎಂಬ ಮಾನ್ಯತೆ ದೊರೆಯಿತು.

ಗಣನವಿಧಾನ!

ಗಣನವಿಧಾನ!

ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ ಎಡಾ ಲವ್ಲೇಸ್ ಬರ್ನೌಲಿ ಸಂಖ್ಯೆಗಳನ್ನು ಯಂತ್ರವೊಂದರಲ್ಲಿ ಲೆಕ್ಕ ಹಾಕುವುದಕ್ಕೆ ಬೇಕಿರುವ ಗಣನವಿಧಾನ (Algorithm) ಎಂದು ಕರೆಯುವ ಕ್ರಮವನ್ನು ಒದಗಿಸಿದಳು. ಗಣಕ ಯಂತ್ರದ ಕುರಿತಂತೆ ಬರೆದ ಟಿಪ್ಪಣಿಯ ಭಾಗವಾಗಿ ಈ ಗಣನ ವಿಧಾನವನ್ನು ಆಕೆ ರಚಿಸಿದ್ದಳು.

ಭವಿಷ್ಯವನ್ನು ನುಡಿದಿದ್ದಳು!

ಭವಿಷ್ಯವನ್ನು ನುಡಿದಿದ್ದಳು!

ಎಡಾ ಲವ್ಲೇಸ್ ಹೆಗ್ಗಳಿಕೆ ಇರುವುದು ಕೇವಲ ಈ ಗಣನವಿಧಾನವನ್ನು ರೂಪಿಸಿದ್ದರಲ್ಲಷ್ಟೇ ಅಲ್ಲ. ‘ವಿಶ್ಲೇಷಣಾ ಯಂತ್ರಗಳ' ಸಾಮರ್ಥ್ಯವನ್ನು ಆಕೆ ಗುರುತಿಸಿದ್ದರಲ್ಲಿ. ಕೇವಲ ಸಂಖ್ಯೆಗಳನ್ನು ಲೆಕ್ಕ ಹಾಕುವುದಷ್ಟೇ ಅಲ್ಲದೆ ಈ ಯಂತ್ರಗಳು ಸಂಗೀತವನ್ನೂ ಸೃಷ್ಟಿಸಬಲ್ಲವು ಎಂಬ ಭವಿಷ್ಯವನ್ನು ಆಕೆ ಅಂದೇ ನುಡಿದಿದ್ದಳು. ಅಂದರೆ, ನೂರು ವರ್ಷಗಳಿಗೂ ಮೊದಲೇ.!

Best Mobiles in India

English summary
The auctioneer, Philip Allwood, called it “the first separate edition of arguably the most important paper in the history of digital computing before modern times” and “an extremely rare piece”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X