ಫಿಟ್‌ಬಿಟ್ ಏಸ್ 3 ಬ್ಯಾಂಡ್ ಬಿಡುಗಡೆ! 8 ಗಂಟೆಗಳ ಬ್ಯಾಟರಿ ವಿಶೇಷತೆ!
ಟೆಕ್ ವಲಯದಲ್ಲಿ ಫಿಟ್ನೆಸ್ ಆಧಾರಿತ ಫಿಟ್ನೆಸ್ ಬ್ಯಾಂಡ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದಕ್ಕಾಗಿಯೇ ಹಲವು ಕಂಪೆನಿಗಳು ತಮ್ಮದೇ ಆದ ಹೊಸ ಮಾದರಿಯ ಫಿಟ್ನೆಸ್ ಬ್ಯಾಂಡ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಫಿಟ್‌ಬಿಟ್ ಕಂಪೆನಿ ಆರು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಫಿಟ್‌ಬಿಟ್ ಏಸ್ 3 ಅನ್ನು ಪರಿಚಯಿಸಿದೆ. ಇದು ಈ ವರ್ಷದ ಜನವರಿಯಲ್ಲಿ ಗೂಗಲ್ ತನ್ನ $2.1 ಬಿಲಿಯನ್ (ಸುಮಾರು 15,320 ಕೋಟಿ ರೂ.) ಫಿಟ್‌ಬಿಟ್‌ನ ಸ್ವಾಧೀನ ಒಪ್ಪಂದವನ್ನು ಕ್ಲೋಸ್ ಮಾಡಿದ ನಂತರ ಪ್ರಾರಂಭಿಸಿದ ಮೊದಲ ಪ್ರಾಡಕ್ಟ್ ಫಿಟ್‌ನೆಸ್ ಬ್ಯಾಂಡ್ ಆಗಿದೆ.

ಹೌದು, ಫಿಟ್‌ಬಿಟ್ ಸಂಸ್ಥೆ ಹೊಸ ಫಿಟ್‌ಬಿಟ್ ಏಸ್ 3 ಅನ್ನು ಪರಿಚಯಿಸಿದೆ. ಇದು ಟಚ್‌ಸ್ಕ್ರೀನ್ PMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಬ್ಯಾಂಡ್ ಸಿಂಗಲ್ ಚಾರ್ಜ್‌ನಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದರ ಟ್ರ್ಯಾಕರ್ ಸಹ 50 ಮೀಟರ್ ವರೆಗೆ ವಾಟರ್ ಪ್ರೂಪ್ ಅನ್ನು ಹೊಂದಿದ್ದು, ಇದು ಬೆಳಕಿನ ಈಜು ಅವಧಿಗಳಿಗೆ ಸೂಕ್ತವಾಗಿದೆ. ಇಡೀ ದಿನದ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ಹೊರತುಪಡಿಸಿ, ಏಸ್ 3 ಸಹ ಜ್ಞಾಪನೆಗಳನ್ನು ನೀಡುತ್ತದೆ. ಇನ್ನುಳಿದಂತೆ ಈ ಫಿಟ್ನೆಸ್ ಬ್ಯಾಂಡ್ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಟ್‌ಬಿಟ್ ಏಸ್ 3 ಅನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಫಿಟ್‌ನೆಸ್ ಚಟುವಟಿಕೆಗಳನ್ನು ಅನುಸರಿಸುವುದಕ್ಕಾಗಿಯೇ ಇದನ್ನು ರೂಪುಗೊಳಿಸಲಾಗಿದೆ. ಇದರಲ್ಲಿ ಮಕ್ಕಳನ್ನು ಪ್ರೇರೇಪಿಸುವ ಸವಾಲುಗಳು ಮತ್ತು ಹೆಚ್ಚು ಸಮಾನ ವೈಶಿಷ್ಟ್ಯಗಳೊಂದಿಗೆ ಫಿಟ್ನೆಸ್ ಬ್ಯಾಂಡ್ ಎಲ್ಲಾ ದಿನಗಳ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ನೀಡುತ್ತದೆ. ಇದರಲ್ಲಿ ಪೋಷಕರು ತಮ್ಮ ಮಕ್ಕಳ ವಿವರವಾದ ಕ್ರಮಗಳನ್ನು ತಿಳಯಬಹುದಾಗಿದೆ. ಇದು ಅನಿಮೇಟೆಡ್ ಕ್ಲಾಕ್ ಫೇಸ್‌ಗಳನ್ನು ತೋರಿಸುತ್ತದೆ.ಅಲ್ಲದೆ ಫಿಟ್‌ನೆಸ್ ಸಾಧನೆಗಳಿಗಾಗಿ ಮಕ್ಕಳಿಗೆ ವರ್ಚುವಲ್ ಬ್ಯಾಡ್ಜ್‌ಗಳನ್ನು ನೀಡುತ್ತದೆ. ಇದು ಸ್ಲೀಪ್ ಟ್ರ್ಯಾಕಿಂಗ್, ಬೆಡ್‌ಟೈಮ್ ಜ್ಞಾಪನೆಗಳುನ್ನು ಒಳಗೊಂಡಿದೆ.

ಇನ್ನು ಗೂಗಲ್ ಒಡೆತನದ ಕಂಪನಿಯ ಹೊಸ ಫಿಟ್‌ನೆಸ್ ಬ್ಯಾಂಡ್ ಟಚ್‌ಸ್ಕ್ರೀನ್ PMOLED ಡಿಸ್ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಇದು ಹೊಂದಾಣಿಕೆ ಮಾಡಬಹುದಾದ ಸಿಲಿಕೋನ್ ಬ್ಯಾಂಡ್‌ನಲ್ಲಿದೆ. ಈ ಬ್ಯಾಂಡ್ ಲಿಪೊ ಬ್ಯಾಟರಿಯೊಂದಿಗೆ ಬರುತ್ತದೆ, ಇದು ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಎಂಟು ದಿನಗಳ ಬ್ಯಾಟರಿ ಲೈಪ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಫಿಟ್‌ಬಿಟ್ ಏಸ್ 3 ಬ್ಲೂಟೂತ್ ವಿ 4.2 ಬೆಂಬಲವನ್ನು ಹೊಂದಿದೆ.

ಇದಲ್ಲದೆ ಫಿಟ್‌ನೆಸ್ ಏಸ್ 3 "ಹಾರ್ಟ್‌ಬಿಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದು ಫರ್ಮ್‌ವೇರ್ ಅಪ್ಡೇಟ್ ಮೂಲಕ ಫಿಟ್‌ಬಿಟ್ ಆನ್ ಮಾಡಬಹುದು. ಇನ್ನು ಈ ಫಿಟ್‌ಬಿಟ್ ಏಸ್ 3 ಬ್ಯಾಂಡ್ ಆಂಡ್ರಾಯ್ಡ್ ಓಎಸ್ 7.0 ಮತ್ತು ಐಒಎಸ್ ಆವೃತ್ತಿ 12.2 ನಲ್ಲಿರುವ ಫಿಟ್‌ಬಿಟ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡಬಹುದಾಗಿದೆ. ಸದ್ಯ ಫಿಟ್‌ಬಿಟ್ ಏಸ್ 3 ಯುಎಸ್‌ನಲ್ಲಿ $ 99.95 (ಸುಮಾರು 7,300 ರೂ.) ಬೆಲೆಯನ್ನು ಹೊಂದಿದೆ. ಇದು ಸಿಲಿಕೋನ್ ಬ್ಯಾಂಡ್ ಮತ್ತು ಹೊಂದಾಣಿಕೆ ಕೊಂಡಿಯೊಂದಿಗೆ ಬರುತ್ತದೆ. ಇನ್ನು ಈ ಫಿಟ್ನೆಸ್ ಬ್ಯಾಂಡ್ ಅನ್ನು ಬ್ಲ್ಯಾಕ್ / ಸ್ಪೋರ್ಟ್ ರೆಡ್ ಮತ್ತು ಕಾಸ್ಮಿಕ್ ಬ್ಲೂ / ಆಸ್ಟ್ರೋ ಗ್ರೀನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.


Click it and Unblock the Notifications



