ಫಿಟ್‌ಬಿಟ್‌ ಸಂಸ್ಥೆಯಿಂದ GPS ಆಧಾರಿತ ಫಿಟ್‌ಬಿಟ್ ಚಾರ್ಜ್ 4,ಬ್ಯಾಂಡ್‌ಬಿಡುಗಡೆ !

|

ಟೆಕ್‌ ಮಾರುಕಟ್ಟೆಯಲ್ಲಿ ಬಾಡಿ ಫಿಟ್ನೆಸ್‌ ಅನ್ನು ನಿರ್ಧರಿಸುವ ಹಲವು ಸ್ಮಾರ್ಟ್‌ ಡಿವೈಸ್‌ಗಳು ಲಭ್ಯವಿವೆ. ಅದರಲ್ಲೂ ಫೀಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌, ಫೀಟ್ನೆಸ್‌ ಬ್ಯಾಂಡ್‌ಗಳು ಸಖತ್‌ ಸೌಂಡ್‌ ಮಾಡ್ತಿವೆ. ಮಲ್ಟಿ ಟಾಸ್ಕಿಂಗ್‌ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್‌ ಡಿವೈಸ್‌ಗಳು ನಮ್ಮ ದೇಹದ ರಕ್ತದ ಶುದ್ದತೆಯನ್ನು ಸಹ ತಿಳಿಸುತ್ತವೆ ಅಂದರೆ ನಿವು ನಂಬಲೇಬೇಕು. ಈ ಹೊಸ ತಲೆಮಾರಿನ ಫಿಟ್ನೆಸ್‌ ಬ್ಯಾಂಡ್‌ಗಲು ಮಾರುಕಟ್ಟೆಯಲ್ಲಿ ಸಖತ್‌ ಟ್ರೆಂಡ್‌ ಆಗಿದ್ದು,ಹಲವು ಕಂಪೆನಿಗಳು ತಮ್ಮ ಫಿಟ್ನೆಸ್‌ ಬ್ಯಾಂಡ್‌ಗಲನ್ನ ಪರಿಚಯಿಸುತ್ತಲೇ ಇವೆ. ಇವುಗಳಲ್ಲಿ ಫಿಟ್‌ಬಿಟ್‌ ಕಂಪೆನಿ ಕೂಡ ಒಂದಾಗಿದ್ದು, ಜನಪ್ರಿಯ ಬ್ಯಾಂಡ್‌ ಆಗಿ ಗುರುತಿಸಿಕೊಂಡಿದೆ.

ಹೌದು

ಹೌದು, ಈಗಾಗಲೇ ಫಿಟ್ನೆಸ್‌ ಬ್ಯಾಂಡ್‌ಗಳ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ಫಿಟ್‌ಬಿಟ್‌ ಕಂಪೆನಿ ತನ್ನ ಹೊಸ ಫೀಟ್‌ನೆಸ್‌ ಟ್ರ್ಯಾಕರ್‌ ಫೀಟ್‌ಬಿಟ್‌ ಚಾರ್ಜ್‌ 4 ಅನ್ನು ಬಿಡುಗಡೆ ಗೊಳಿಸಿದೆ. ಈ ಫಿಟ್‌ನೆಸ್‌ ಟ್ರ್ಯಾಕರ್‌ ಇಂಟರ್‌ಬಿಲ್ಟ್‌ ಜಿಪಿಎಸ್‌ ಅನ್ನು ಹೊಂದಿದೆ. ಅಲ್ಲದೆ ಫಿಟ್‌ಬಿಟ್ ಚಾರ್ಜ್ 4 ಸ್ಲೀಪ್ ಟ್ರ್ಯಾಕಿಂಗ್, 24/7 ಹೃದಯ ಬಡಿತ ಮಾನಿಟರ್, ವ್ಯಾಯಾಮ ವಿಧಾನಗಳು ಮತ್ತು ಉಸಿರಾಟದ ವ್ಯಾಯಾಮಗಳನ್ನು ಒಳಗೊಂಡಿದೆ. ಜೊತೆಗೆ ಈ ಹೊಸ ಫಿಟ್‌ನೆಸ್ ಬ್ಯಾಟರಿ ಚಾರ್ಜ್‌ ಏಳು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ ಈ ಫಿಟ್‌ನೆಸ್‌ ಟ್ರ್ಯಾಕರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

GPS

GPS ಅನ್ನು ಒಳಗೊಂಡ ಫಿಟ್‌ನೆಸ್‌ ಟ್ರ್ಯಾಕರ್‌ ಇದಾಗಿದ್ದು, ಇದು ಉತ್ತಮ ವೇರಿಯೆಬಲ್‌ ಸ್ಮಾರ್ಟ್‌ ಬ್ಯಾಂಡ್‌ ಆಗಿದೆ. ಇದಲ್ಲದೆ ಈ ಫೀಟ್‌ನೆಸ್‌ ಟ್ರ್ಯಾಕರ್‌ ಅಲ್ಲಿ ಜಿಪಿಎಸ್‌ ಆನ್‌ ಮಾಡಿಕೊಂಡರೆ ಒಂದು ಬಾರಿಗೆ ಐದು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು ಈ ಫಿಟ್‌ಬಿಟ್ ಚಾರ್ಜ್ 4 ಮೆಟ್ಟಿಲು ಹತ್ತುವುದು ಮತ್ತು ಈಜು ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಇದನ್ನ ಧರಿಸಿಕೊಂಡ ಬಲಕೆದಾರರು ತಮ್ಮ ಮಣಿಕಟ್ಟಿನ ಮೇಲೆ ಅಧಿಸೂಚನೆಗಳು, ಸಮಯ ಮತ್ತು ಹವಾಮಾನವನ್ನು ಸಹ ಪರಿಶೀಲಿಸಬಹುದು.

ಸ್ಮಾರ್ಟ್‌

ಅಲ್ಲದೆ ಈ ಸ್ಮಾರ್ಟ್‌ ಡಿವೈಸ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸ್ಪಾಟಿಫೈಗೆ ಬೆಂಬಲವನ್ನು ನೀಡುತ್ತದೆ. ಇದರಿಂದ ಬಳಕೆದಾರರು ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ಸಹ ನಿಯಂತ್ರಿಸಬಹುದು. ಜೊತೆಗೆ ಈ ಫಿಟ್‌ಬಿಟ್ ಅಪ್ಲಿಕೇಶನ್‌ನಲ್ಲಿ ಒಬ್ಬರು ಮಾತ್ರ ವರ್ಕೌಟ್‌ಇಂಟೆನ್ಸಿಟಿ ಮ್ಯಾಪ್‌ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಅಲ್ಲದೆ ಇದು ಐಡಲ್ ಆಲರ್ಟ್‌ಗಳನ್ನು ಸಹ ಕಳುಹಿಸುತ್ತದೆ. ಹಾಗೇಯೇ ಇದು ನಿಮಗೆ ಬರುವ ಮೇಸೆಜ್‌ಗಳಿಗೆ ಇನ್ಸಟಂಟ್‌ ರಿಪ್ಲೆಯನ್ನ ಸಹ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೀಟ್‌ಬಿಟ್‌ ಟ್ರ್ಯಾಕರ್‌ನಲ್ಲಿ ನಿಮ್ಮ ಆಮ್ಲಜನಕದ ಮಟ್ಟವನ್ನು ಅಳೆಯಲು ಎಸ್‌ಪಿಒ 2 ಸೆನ್ಸಾರ್‌ ಅನ್ನು ಸಹ ಅಳವಡಿಸಲಾಗಿದೆ.

ಡಿವೈಸ್‌ನಲ್ಲಿ

ಇನ್ನು ಈ ಸ್ಮಾರ್ಟ್‌ ಡಿವೈಸ್‌ನಲ್ಲಿ ಸಕ್ರಿಯ ವಲಯ ನಿಮಿಷಗಳಿದ್ದು, ಇದು ನಿಮ್ಮ ಹೃದಯ ಬಡಿತ ವಲಯಗಳ ಆಧಾರದ ಮೇಲೆ ಪ್ರತಿ ತಾಲೀಮು ಉದ್ದಕ್ಕೂ ನಿಮ್ಮ ಪ್ರಯತ್ನದ ಮಾಹಿತಿಯನ್ನು ಒದಗಿಸುತ್ತದೆ. ಸದ್ಯ ಈ ಫಿಟ್‌ಬಿಟ್ ಚಾರ್ಜ್ 4 $129, ಅಂದರೆ ಭಾರತದಲ್ಲಿ ಸುಮಾರು 10,000 ರೂ. ಬೆಲೆಯನ್ನ ಹೊಂದಿದೆ. ಸದ್ಯ ಇದೀಗ ಈ ಫಿಟ್‌ನೆಸ್ ಟ್ರ್ಯಾಕರ್ ಈಗಾಗಲೇ ಯುಎಸ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ.

Best Mobiles in India

English summary
The Fitbit Charge 4 comes with a price label of $129, which around Rs 10,000 in India. This fitness tracker from Fitbit is already on sale in the US.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X