ಮಾರುಕಟ್ಟೆಗೆ ಬಂತು ಫಿಟ್‌ಬಿಟ್ ಚಾರ್ಜ್ 6! ಕಣ್ಣಿಗೆ ಹಬ್ಬ ಎನಿಸುವ ಫೀಚರ್ಸ್!
ಜನಪ್ರಿಯ ಫಿಟ್‌ನೆಸ್‌ಬ್ಯಾಂಡ್‌ಗಳಿಗೆ ಫಿಟ್‌ಬಿಟ್ ಕಂಪೆನಿ ಹೆಸರುವಾಸಿಯಾಗಿದೆ. ವಿಭಿನ್ನ ಶ್ರೇಣಿ ಹಾಗೂ ಡಿಸೈನ್ ಫಿಟ್‌ನೆಸ್‌ಬ್ಯಾಂಡ್‌ಗಳಿಂದ ಸೈ ಎನಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಇದೀಗ ಹೊಸ ಫಿಟ್‌ಬಿಟ್ ಚಾರ್ಜ್ 6 ಅನ್ನು ಬಿಡುಗಡೆ ಮಾಡಿದೆ. ಈ ಫಿಟ್‌ನೆಸ್‌ಬ್ಯಾಂಡ್ ಹೃದಯ ಬಡಿತ ಟ್ರ್ಯಾಕಿಂಗ್ ಮಾನಿಟರ್‌ನೊಂದಿಗೆ ಬರುತ್ತದೆ.
ಹೌದು, ಫಿಟ್‌ಬಿಟ್ ಚಾರ್ಜ್ 6 ಫಿಟ್‌ನೆಸ್‌ಬ್ಯಾಂಡ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಫಿಟ್‌ನೆಸ್ ಬ್ಯಾಂಡ್ ಅತ್ಯುತ್ತಮ ನಿಖರ ಹೆಲ್ತ್ ಟ್ರ್ಯಾಕಿಂಗ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಮಲ್ಟಿ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಇದು ಜಿಪಿಎಸ್ ಅನ್ನು ಸಹ ಬೆಂಬಲಿಸಲಿದ್ದು, ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಟ್‌ಬಿಟ್ ಚಾರ್ಜ್ 6 ಫೀಚರ್ಸ್ ಹೇಗಿದೆ?
ಫಿಟ್‌ಬಿಟ್ ಚಾರ್ಜ್ 6 ಫಿಟ್‌ನೆಸ್ ಬ್ಯಾಂಡ್ ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಹೊಂದಿದ್ದು, ಆಯತಾಕಾರದ ಕಲರ್ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ. ಇನ್ನು ಇದರ ಬಾಡಿಯನ್ನು ಅಲ್ಯೂಮಿನಿಯಂ ಮತ್ತು ರಾಳದಿಂದ ನಿರ್ಮಿಸಲಾಗಿದೆ. ಆದರೆ ಸ್ಮಾರ್ಟ್‌ವಾಚ್‌ನ ಬ್ಯಾಂಡ್ ಅನ್ನು ಸಿಲಿಕೋನ್‌ನಿಂದ ಅಲ್ಯೂಮಿನಿಯಂ ಬಕಲ್‌ನಿಂದ ತಯಾರಿಸಲಾಗಿದೆ. ಇದು 40ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದೆ.
ಇನ್ನು ಎಲ್ಲಾ ಫಿಟ್‌ನೆಸ್ ಟ್ರ್ಯಾಕರ್‌ಗಳಂತೆ, ಫಿಟ್‌ಬಿಟ್ ಚಾರ್ಜ್ 6 ಹೃದಯ ಬಡಿತ, ಸ್ಲಿಪಿಂಗ್ ಸರ್ಕಲ್, ಉಸಿರಾಟದ ದರ, ಒತ್ತಡ ನಿರ್ವಹಣೆ ಮತ್ತು ಬಳಕೆದಾರರ ಚರ್ಮದ ತಾಪಮಾನವನ್ನು ಸಹ ಟ್ರ್ಯಾಕ್ ಮಾಡಲಿದೆ. ಇದಲ್ಲದೆ ಫಿಟ್‌ನೆಸ್ ಬ್ಯಾಂಡ್ ಇನ್‌ಬಿಲ್ಟ್ ಜಿಪಿಎಸ್ ಫೀಚರ್ಸ್‌ನೊಂದಿಗೆ ಬರಲಿದೆ. ಜೊತೆಗೆ ಇದರ NFC ಸಂಪರ್ಕವು ಗೂಗಲ್ ವ್ಯಾಲೆಟ್ ಮೂಲಕ ಪಾವತಿಗಳನ್ನು ಸಹ ಅನುಮತಿಸಲಿದೆ ಎಂದು ಹೇಳಲಾಗಿದೆ.
ಇದಲ್ಲದೆ ಈ ವಾಚ್ ಗೂಗಲ್ ಫಾಸ್ಟ್ ಫೇರ್, ಗೂಗಲ್ ಮ್ಯಾಪ್ಸ್ ಮತ್ತು ಯೂಟ್ಯೂಬ್ ಮ್ಯೂಸಿಕ್ ಅನ್ನು ಬೆಂಬಲಿಸಲಿದೆ. ಇನ್ನು ಸ್ಮಾರ್ಟ್ ವೇರಬಲ್ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ. ಇದು 5 ATM ರೇಟಿಂಗ್ ಅನ್ನು ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ನೀಡಲಿದೆ. ಈ ಬ್ಯಾಂಡ್ ಏಳು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳುತ್ತದೆ.
ಫಿಟ್‌ಬಿಟ್ ಚಾರ್ಜ್ 6 ಆಪ್ಟಿಕಲ್ ಹಾರ್ಟ್ ರೇಟ್ ಮಾನಿಟರ್, 3-ಆಕ್ಸಿಸ್ ಅಕ್ಸೆಲೆರೊಮೀಟರ್, ಆಕ್ಸಿಜನ್ ಸ್ಯಾಚುರೇಶನ್ ಮಾನಿಟರ್, ತಾಪಮಾನ ಸಂವೇದಕ ಮತ್ತು ಇಸಿಜಿಅಪ್ಲಿಕೇಶನ್ ಮತ್ತು ಇಡಿಎ (ಎಲೆಕ್ಟ್ರೋಡರ್ಮಲ್ ಚಟುವಟಿಕೆ) ಗೆ ಹೊಂದಿಕೆಯಾಗುವ ವಿವಿಧೋದ್ದೇಶ ವಿದ್ಯುತ್ ಸೆನ್ಸಾರ್‌ಗಳನ್ನು ಸಹ ಹೊಂದಿದೆ.
ಫಿಟ್‌ಬಿಟ್ ಚಾರ್ಜ್ 6 ಬೆಲೆ ಮತ್ತು ಲಭ್ಯತೆ
ಫಿಟ್‌ಬಿಟ್ ಚಾರ್ಜ್ 6 ಬ್ಯಾಂಡ್ ಪ್ರಸ್ತುತ ಯುಎಸ್‌ನಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆಂದಿ ಇದರ ಬೆಲೆ US ನಲ್ಲಿ $159.95 (ಸುಮಾರು 13,300ರೂ) ಆಗಿದೆ. ಇದು ಶೀಘ್ರದಲ್ಲೇ ಭಾರತಕ್ಕೆ ಕೂಡ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ.
ಇನ್ನು ಫಿಟ್‌ಬಿಟ್ ಕಂಪೆನಿ ಇತ್ತೀಚಿಗೆ ತನ್ನ ಸ್ಮಾರ್ಟ್‌ವಾಚ್‌ಗಳಲ್ಲಿ ಹಲವು ಅನುಕೂಲಕರ ಹೆಲ್ತ್ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಅದರಲ್ಲಿ ಒತ್ತಡ ನಿವಾರಣೆ ಫೀಚರ್ಸ್ ಕೂಡ ಒಂದಾಗಿದೆ. ಅದರಂತೆ ಬಳಕೆದಾರರು ಒತ್ತಡದ ಸಮಯದಲ್ಲಿ ಅನುಭವಿಸಿದ ಭಾವನೆಗಳನ್ನು ಫಿಟ್‌ಬಿಟ್ ಆಪ್‌ನಲ್ಲಿ ಲಾಗ್ ಮಾಡಬಹುದು. ಒತ್ತಡವನ್ನು ನಿರ್ವಹಿಸಲು ಆಕ್ಟಿವಿಟಿಗಳ ಗುಂಪಿನಿಂದ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಫಿಟ್‌ಬಿಟ್ ಧನಾತ್ಮಕ ಭಾವನೆಗಳನ್ನು ಸಹ ಸೂಚಿಸಲಿದ್ದು, ಬಳಕೆದಾರರ ದೇಹವು ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.


Click it and Unblock the Notifications








