ಫಿಟ್‌ಬಿಟ್ ಹೊಸ ಸ್ಮಾರ್ಟ್ ವಾಚ್ ನಲ್ಲಿರಲಿದೆ ಆಪ್ ಸ್ಟೋರ್

ವೇರೆಬಲ್ ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕರ್ ಸಾಧನಗಳ ತಯಾರಕರಾದ ಫಿಟ್‌ಬಿಟ್ ತಮ್ಮ ಮುಂದಿನ ಸ್ಮಾರ್ಟ್ ವಾಚ್ನಲ್ಲಿ ಸ್ವಂತ ಆಪ್ ಸ್ಟೋರ್ ಅನ್ನು ನೀಡಲಿದ್ದಾರೆ.

By Tejaswini P G
|

ನಾವು ಧರಿಸಬಹುದಾದ ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕರ್ ಸಾಧನಗಳ ತಯಾರಕರಾದ ಫಿಟ್‌ಬಿಟ್ ಕಂಪೆನಿಯಿಂದ ಬಂದಿದೆ ಹೊಸ ಸುದ್ದಿ. ಫಿಬಿಟ್ ನ ಮುಂದಿನ ಸ್ಮಾರ್ಟ್ವಾಚ್ ನಲ್ಲಿ ಇರಲಿದೆ ಅವರದ್ದೇ ಸ್ವಂತ ಆಪ್ ಸ್ಟೋರ್. ಈ ಮೂಲಕ ಫಿಬಿಟ್ ಬಳಕೆದಾರರು ತಮ್ಮ ಹೊಸ ವಾಚ್ಗಳಲ್ಲಿ ಅದಕ್ಕೆಂದೇ ಸೀಮಿತವಾದ ಆಪ್ ಸ್ಟೋರ್ನಿಂದ ಆಪ್ಗಳನ್ನು ಡೌನ್ಲೋಡ್ ಮಾಡಬಹುದು. ಅಷ್ಟೇ ಅಲ್ಲ, ಮುಂದಿನ ಸ್ಮಾರ್ಟ್ ವಾಚ್ ನೊಂದಿಗೆ ಫಿಬಿಟ್ ಬಿಡುಗಡೆ ಮಾಡಲಿದೆ ಸಾಫ್ಟ್ವೇರ್ ಡೆವೆಲಪ್ಮೆಂಟ್ ಕಿಟ್(SDK) ಆಪ್ ಡೆವೆಲಪರ್ ಗಳಿಗಾಗಿ.

ಫಿಟ್‌ಬಿಟ್ ಹೊಸ ಸ್ಮಾರ್ಟ್ ವಾಚ್ ನಲ್ಲಿರಲಿದೆ ಆಪ್ ಸ್ಟೋರ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಫಿಬಿಟ್ ನ ಸಿಇಓ ಜೇಮ್ಸ್ ಪಾರ್ಕ್ "ಮೊದಲಿಗೆ ಸ್ಮಾರ್ಟ್ ವಾಚ್ ಕೆಲವು ಅಗತ್ಯ ಆಪ್ಗಳೊಂದಿಗೆ ಬರಲಿದೆ. ಇದರೊಂದಿಗೆ ನಾವು ಥರ್ಢ್ ಪಾರ್ಟಿ ಡೆವೆಲಪರ್ಗಳಿಗೆ SDK ಯನ್ನು ಕೂಡ ನೀಡಲಿದ್ದೇವೆ. ಈ ಮೂಲಕ ಕೆಲವೇ ಸಮಯದಲ್ಲಿ ಆಪ್ ಆಭಿವರ್ಧಕರು ಆಪ್ ಸ್ಟೋರ್ ಗೆ ಹೊಸ ಹೊಸ ಆಪ್ಗಳನ್ನು ನೀಡಲಿದ್ದಾರೆ " ಎಂದು ತಿಳಿಸಿದರು.
ಫಿಟ್‌ಬಿಟ್ ಹೊಸ ಸ್ಮಾರ್ಟ್ ವಾಚ್ ನಲ್ಲಿರಲಿದೆ ಆಪ್ ಸ್ಟೋರ್

ಫಿಬಿಟ್ ನ ಆಪ್ ಸ್ಟೋರ್ ಥರ್ಡ್ ಪಾರ್ಟಿ ಆಪ್ ಸಪೋರ್ಟ್ ಹೊಂದಲಿದೆ ಎಂಬ ಸುದ್ದಿಯನ್ನು ಖುದ್ದು ಸಿಇಓ ಅವರೇ ಖಚಿತಪಡಿಸಿದ್ದಾರೆ. ಅಲ್ಲದೆ ಫಿಬಿಟ್ ನ ಆಪ್ ಸ್ಟೋರ್ ಗೆ ಪ್ರವೇಶ ಪಡೆಯಲು, ಆಪ್ ಆಭಿವರ್ಧಕರು iOS ಮತ್ತು ಆಂಡ್ರಾಯ್ಡ್ ಸಾಧನಗಳಲ್ಲೆರಡರಲ್ಲೂ ನಡೆಯುವಂಥ ಆಪ್ಗಳನ್ನು ತಯಾರಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಬಂದ ಆಪ್ಗಳನೆಲ್ಲಾ ಪರೀಕ್ಷೆಗೊಳಪಡಿಸಿ ಸೂಕ್ತ ಆಪ್ಗಳನ್ನಷ್ಟೇ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

'ಸ್ಪಾಟಿಫೈ' ಕಂಪೆನಿಯು ಫಿಬಿಟ್ ನೊಂದಿಗಿನ ಒಡಂಬಡಿಕೆಯಿಂದ ಹಿಂದೆ ಸರಿಯುತ್ತಿದೆ ಎಂಬ ವದಂತಿ ನಿಜ ಎಂಬುದಾಗಿ ಚಿಕ್ಕ ಸುಳಿವೊಂದನ್ನು ನೀಡಿದ್ದಾರೆ ಪಾರ್ಕ್. "ಉತ್ತಮ ಫಿಟ್ನೆಸ್ ಅನುಭವವನ್ನು ನೀಡವುದರಲ್ಲಿ ಸಂಗೀತ ಮುಖ್ಯ ಪಾತ್ರವಹಿಸುತ್ತದೆ. ಸಂಗೀತದ ಉದ್ಯಮ ಬರೀ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ.ಆಫ್ಲೈನ್ ಪ್ಲೇಬ್ಯಾಕ್ ನ ವಿಷಯಕ್ಕೆ ಬಂದರೆ, ಅದರಲ್ಲಿ ಬಹಳಷ್ಟು ವ್ಯಾವಹಾರಿಕ ತೊಂದರೆಗಳು ಇರುತ್ತದೆ" ಎಂದು ಹೇಳಿದರು.

ಫಿಬಿಟ್ ಇದುವರೆಗೆ 60 ಮಿಲಿಯನ್ಗೂ ಅಧಿಕ ಸಾಧನಗಳನ್ನು ಮಾರಾಟ ಮಾಡಿದೆ. ಆದರೂ 2017 ಫಿಬಿಟ್ ಗೆ ಅಷ್ಟೇನೂ ಲಾಭದಾಯಕವಾಗಿಲ್ಲ,ಅಲ್ಲದೆ ಅದರ ಶೇರ್ಗಳೂ 60%ನಷ್ಟು ಕೆಳಗಿಳಿದಿದೆ.ಈ ಸಂದರ್ಭದಲ್ಲಿ ಫಿಬಿಟ್ ಅದರ ಸಾಧನಗಳಲ್ಲಿ ಹೊಸತನವನ್ನು ತರಬೇಕಿದ್ದು, ಜನರಿಗೆ ಉತ್ತಮ ಕೊಡುಗೆಗಳನ್ನು ನೀಡುವತ್ತ ಪ್ರಯತ್ನಿಸಬೇಕಿದೆ.ಆಪಲ್ ಮತ್ತು ಶಿಯೋಮಿಯಂತಹ ಪ್ರತಿಸ್ಪರ್ಧಿಗಳಿರುವಾಗ,ಫಿಬಿಟ್ ಗೆ ಮತ್ತೆ ತನ್ನ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಇಂತಹ ಪ್ರಯತ್ನಗಳ ಅಗತ್ಯ ಖಂಡಿತವಾಗಿಯೂ ಇದೆ.

Best Mobiles in India

Read more about:
English summary
Fitbit has confirmed that its next smartwatch will have an app store of its own and that it will support third party apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X