ಫಿಟ್‌ಬಿಟ್‌ ಸಂಸ್ಥೆಯಿಂದ ಬರಲಿದೆ 4G ಬೆಂಬಲಿಸುವ ಸ್ಮಾರ್ಟ್‌ವಾಚ್‌!

|

ಟೆಕ್‌ ವಲಯದಲ್ಲಿ ಸಾಕಷ್ಟು ಮಾದರಿಯ ಸ್ಮಾರ್ಟ್‌ವಾಚ್‌ಗಳು ಲಬ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿವೆ. ಇನ್ನು ಮಾರುಕಟ್ಟೆಯಲ್ಲಿ ವೈವಿದ್ಯಮಯ ಸ್ಮಾರ್ಟ್‌ವಾಚ್‌ಗಳು ಲಬ್ಯವಿದ್ದರು ಸಹ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಕಂಪೆನಿಗಳಲ್ಲಿ ಫಿಟ್‌ಬಿಟ್‌ ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿಬಿನ್ನ ಸ್ಮಾರ್ಟ್‌ವಾಚ್‌ಗಳಿಂದ ಸೈ ಎನಿಸಿಕೊಂಡಿದೆ.

ಹೌದು

ಹೌದು, ಸ್ಮಾರ್ಟ್‌ವಾಚ್‌ ವಲಯದಲ್ಲಿ ಫಿಟ್‌ಬಿಟ್‌ ಕಂಪೆನಿ ಜನಪ್ರಿಯ ಕಂಪೆನಿಗಳಲ್ಲಿ ಒಂದಾಗಿದೆ. ಸದ್ಯ ಇದೀಗ ಫಿಟ್‌ಬಿಟ್‌ ತನ್ನ ಹೊಸ ಮಾದರಿಯ 4G ಬೆಂಬಲಿಸುವ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ ಎಂದು ಹೇಳಲಾಗ್ತಿದೆ. ಈ ಸ್ಮಾರ್ಟ್‌ವಾಚ್‌ ಕೇವಲ ಮಕ್ಕಳನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ ಎನ್ನಲಾಗ್ತಿದ್ದು, ವೀಡಿಯೊ ಕರೆ ಮತ್ತು ಧ್ವನಿ ಕರೆ ಆಯ್ಕೆಗಳೊಂದಿಗೆ "ಸುರಕ್ಷತಾ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನ ಒಳಗೊಂಡಿರುತ್ತದೆ ಎಂದು ಊಹಿಸಲಾಗಿದೆ. ಅಷ್ಟಕ್ಕೂ ಈ ಸ್ಮಾರ್ಟ್‌ವಾಚ್‌ ಕುರಿತು ಲಬ್ಯವಿರುವ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಫಿಟ್‌ಬಿಟ್‌

ಫಿಟ್‌ಬಿಟ್‌ ಕಂಪೆನಿ ಅಭಿವೃದ್ದಿ ಪಡಿಸುತ್ತಿರುವ ಈ ಹೊಸ ಸ್ಮಾರ್ಟ್‌ವಾಚ್‌ 4G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದ್ದು, ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನಲಾಗ್ತಿದೆ. ಸದ್ಯ ಫಿಟ್‌ಬಿಟ್‌ ಕಂಪನಿಯು ಮಕ್ಕಳಿಗಾಗಿ ಏಸ್ ಸರಣಿಯ ಸ್ಮಾರ್ಟ್ ವಾಚ್‌ಗಳನ್ನು ಹೊಂದಿದ್ದರೂ, ಈ ಮಾದರಿಗಳು ಯಾವಾಗಲೂ ಆನ್ ಟ್ರ್ಯಾಕಿಂಗ್ ಮತ್ತು ಸಂವಹನಕ್ಕಾಗಿ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿರುವುದಿಲ್ಲ. ಇದಲ್ಲದೆ, ಫಿಟ್‌ಬಿಟ್ ಏಸ್ ಸರಣಿಯು ಫಿಟ್‌ನೆಸ್ ಕಡೆಗೆ ಹೆಚ್ಚು ಆಧಾರಿತವಾಗಿದೆ. ಅಲ್ಲದೆ ಜಿಪಿಎಸ್ ಟ್ರ್ಯಾಕಿಂಗ್‌ನಂತಹ ಸುರಕ್ಷತಾ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನ ಹೊಂದಿಲ್ಲ, ಇದೇ ಕಾರಣಕ್ಕೆ ಮಕ್ಕಳಿಗಾಗಿ 4G-ಶಕ್ತಗೊಂಡ ಸ್ಮಾರ್ಟ್ ವಾಚ್ ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಅಭಿವೃದ್ಧಿಪಡಿಸುವ ಸಲುವಾಗಿ ಫಿಟ್‌ಬಿಟ್, ಹಾಂಗ್ ಕಾಂಗ್ ಮೂಲದ ಡೋಕಿ ಟೆಕ್ನಾಲಜೀಸ್ ಕಂಪೆನಿಯನ್ನ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಈ ಕಂಪೆನಿ ಮಕ್ಕಳ ಸ್ನೇಹಿ ಧರಿಸಬಹುದಾದ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಡೋಕಿ ಟೆಕ್ನಾಲಜೀಸ್‌ನ ಸ್ಮಾರ್ಟ್‌ವಾಚ್‌ಗಳು ವಿಡಿಯೋ ಮತ್ತು ವಾಯ್ಸ್ ಕಾಲಿಂಗ್ ಆಯ್ಕೆಗಳ ಜೊತೆಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿವೆ. ಈ ಕಾರಣಕ್ಕಾಗಿ ಫಿಟ್‌ಬಿಟ್‌
ಮತ್ತು ಡೋಕಿ ಟೆಕ್ನಾಲಜೀಸ್ ಎರಡೂ ಈ ಸ್ಮಾರ್ಟ್‌ವಾಚ್‌ ಅನ್ನು ಅಭಿವೃದ್ಧಿ ಪಡಿಸುತ್ತಿವೆ ಎಂದು ಎನ್ನಲಾಗ್ತಿದೆ.

ಫಿಟ್‌ಬಿಟ್‌

ಸದ್ಯ ಫಿಟ್‌ಬಿಟ್‌ ಕಂಪನಿಯು ಮುಂಬರುವ ವಾಚ್‌ಓಎಸ್‌ನಲ್ಲಿ "ಸ್ಕೂಲ್‌ಟೈಮ್" ಫೀಚರ್ಸ್‌ ಅನ್ನ ನೀಡುವ ಸಾಧ್ಯತೆ ಇದೆ. ಇದು ಶಾಲಾ ಸಮಯದಲ್ಲಿ ಪೋಷಕರಿಗೆ ಅಪ್ಲಿಕೇಶನ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ 4G ನೆಟ್‌ವರ್ಕ್‌ ಬೆಂಬಲಿಸುವುದರಿಂದ ಮಕ್ಕಳ ಮೇಲೆ ಫೋಷಕರು ಗಮನಹರಿಸಲು ಸಾಧ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಇನ್ನು ಹೆಚ್ಚಿನ ನವೀನ ಮಾದರಿಯ ಫೀಚರ್ಸ್‌ಗಳನ್ನ ಹೊಂದಿರುವ ಸೂಚನೆ ಇದೆ ಎನ್ನಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Fitbit is reportedly working with Doki Technologies for a smartwatch for kids.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X