Home
ಸುದ್ದಿಜಾಲ

ಪಬ್​ಜಿ ಗೇಮ್ ವ್ಯಸನದಿಂದ ಅರೆಹುಚ್ಚನಾಗಿ ಆಸ್ಪತ್ರೆ ಸೇರಿದ ಜಿಮ್​ ಟ್ರೈನರ್!!

ಆನ್​ಲೈನ್​ ಗೇಮ್ ಪಬ್​ಜಿ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ವಿಧ್ಯಾರ್ಥಿಯೋರ್ವ ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾದ ಸುದ್ದಿ ನಿಮ್ಮ ಕಿವಿಗೆ ಬಿದ್ದಿರಬಹುದು. ಇದೇ ರೀತಿಯಲ್ಲಿ ಪಬ್‌ಜಿ ಈ ಗೇಮ್​ ಚಟಕ್ಕೆ ಒಳಗಾದ ಜಿಮ್​ ಟ್ರೈನರ್​ ಒಬ್ಬ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ವರದಿಯಾಗಿದೆ. ಇದು ಜಮ್ಮು ಕಾಶ್ಮೀರದಲ್ಲಿ ದಾಖಲಾದ 6ನೇ ಪ್ರಕರಣವಾಗಿದೆ.

ಹೌದು, ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಜಿಮ್​ ಟ್ರೈನರ್​ ಕಳೆದ ಹತ್ತು ದಿನಗಳಿಂದ ಪಬ್​ಜಿ ಗೇಮ್​ ಚಟಕ್ಕೆ ಒಳಗಾಗಿದ್ದ ಎಂದು ಹೇಳಲಾಗಿದ್ದು, ಆತ ಒಂದು ಸುತ್ತಿನ ಆಟವನ್ನು ಪೂರ್ತಿಗೊಳಿಸಿ ತನಗೆ ತಾನೇ ಹೊಡೆದುಕೊಂಡು ಗಾಯಗೊಂಡಿದ್ದಾನೆ ಎಂದು ಮಾಧ್ಯಮ ವರದಿಗಗಳು ತಿಳಿಸಿವೆ. ಆತ ಭಾಗಶಃ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತನಿಗೆ ಸಂಪೂರ್ಣವಾಗಿ ಪ್ರಜ್ಞೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪಬ್​ಜಿ ಗೇಮ್ ವ್ಯಸನದಿಂದ ಅರೆಹುಚ್ಚನಾಗಿ ಆಸ್ಪತ್ರೆ ಸೇರಿದ ಜಿಮ್​ ಟ್ರೈನರ್!!

ಮಕ್ಕಳ ಮೇಲಿನ ನಿರ್ಲಕ್ಷ್ಯದಿಂದ ಅಥವಾ ಅರ್ಥ ಮಾಡಿಕೊಳ್ಳುವುದರಲ್ಲಿ ಪಾಲಕರು ವಿಫಲವಾಗುತ್ತಿರುವುದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಹಾಗಾಗಿ, ಸಾಧ್ಯವಾದಷ್ಟು ಈ ಗೇಮ್​ನಿಂದ ದೂರ ಉಳಿದರೆ ಒಳಿತು. ಅದರಲ್ಲೂ ಮಕ್ಕಳು ಇದರಿಂದ ದೂರ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಗೇಮಿಂಗ್ ವ್ಯಸನ ಎಂಬ ಕರಾಳ ಲೋಕ ಮತ್ತು ಜನಪ್ರಿಯ ಗೇಮ್ ಪಬ್‌ಜಿ ಬಗೆಗೆ ನಿಮ್ಮನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಬೇಕು

ಬೇಕು

ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!

ಕೋಟ್ಯಾಂತರ ಮಾರುಕಟ್ಟೆ!

1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!

ಗೇಮಿಂಗ್ ಎಂಬ ಕರಾಳ ಲೋಕ!

ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.

ಸಮಸ್ಯೆ ಬಹಳಷ್ಟಿದೆ.

ಕೋಟ್ಯಾಂತರ ಜನ ನಿರರ್ಥಕವಾಗಿ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ಸಾಧ್ಯವೇ.?

Best Mobiles in India

English summary
PUBG can be addicting. But can it be addictive to the extent that it injures a person's health?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+