ಹೋಳಿ ಹಬ್ಬದ ನಿಮ್ಮ ಫೋಟೋ ಇನ್ನಷ್ಟು ಅಂದವಾಗಿಸಲು ಈ ಅಪ್ಲಿಕೇಶನ್‌ಗಳನ್ನ ಬಳಸಿ!

|

ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪರಸ್ಪರ ಬಣ್ಣವನ್ನು ಹಚ್ಚಿ ರಂಗುರಂಗಿನ ಬಣ್ಣಗಳ ಚಿತ್ತಾರವನ್ನು ಮೂಡಿಸುತ್ತಿದ್ದಾರೆ. ಇ್ನು ಹೋಳಿ ಹಬ್ಬವೆಂದರೆ ಯುವಜನತೆಗೆ ಎಲ್ಲಿಲ್ಲದ ಉತ್ಸಾಹ. ತಮ್ಮ ಪ್ರೀತಿ ಪಾತ್ರರು ಸ್ನೇಹಿತರಿಗೆ ಬಣ್ನ ಬಳಿದು ಸಂಭ್ರಮಿಸುವ ಹಬ್ಬ. ಇನ್ನು ಹೋಳಿ ಹಬ್ಬದ ಸಂಭ್ರಮವನ್ನು ತಮ್ಮ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ಎಲ್ಲರೂ ಬಯಸುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸೆರೆ ಹಿಡಿದು ಸೊಶೀಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡುತ್ತಾರೆ.

ಹೋಳಿ

ಹೌದು, ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮುಗಿಲುಮುಟ್ಟಿದೆ. ಕಾಮನ ಹಬ್ಬವಾದ ಹೋಳಿಹಬ್ಬದಂದು ಬಣ್ಣ ಹಚ್ಚಿ ಸಂಭ್ರಮಿಸುವ ಯುವಜನತೆ ಕಲರ್‌ಫುಲ್‌ ಫೋಟೋ ಹಿಡಯುವುದಕ್ಕೆ ಇಷ್ಟ ಪಡುತ್ತಾರೆ. ಬಣ್ಣ ಹಚ್ಚಿದ ಫೋಟೋಗಳನ್ನ ಅತ್ಯುತ್ತಮವಾಗಿ ಸೆರೆಹಿಡಿಯುವುದಕ್ಕೆ ಎಲ್ಲರೂ ಬಯಸುತ್ತಾರೆ. ಇನ್ನು ನಿಮ್ಮ ಹೋಳಿ ಹಬ್ಬದ ಸಂಭ್ರಮವನ್ನ ಇನ್ನಷ್ಟು ಕಲರ್‌ಫುಲ್‌ ಆಗಿ ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿಯಲು ಹಲವು ಆಪ್‌ಗಳು ಸಹಾಯಕವಾಗಿವೆ. ಹಾಗಾದ್ರೆ ನಿಮ್ಮ ಹೋಳಿ ಹಬ್ಬದ ಫೋಟೋಗಳನ್ನು ಇನ್ನಷ್ಟು ಕಲರ್‌ಫುಲ್‌ ಆಗಿಸುವ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಿಕ್ಸ್‌ಲ್ಯಾಬ್

ಪಿಕ್ಸ್‌ಲ್ಯಾಬ್

ಪಿಕ್ಸ್‌ಲ್ಯಾಬ್ ಅತ್ಯುತ್ತಮ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ನಿಮ್ಮ ಫೋಟೋವನ್ನು ಸುಂದರವಾಗಿ ಮತ್ತು ವರ್ಣಮಯವಾಗಿ ಕಾಣುವಂತೆ ಮಾಡಲು ನೀವು ಬಳಸಬಹುದಾದ ಫಿಲ್ಟರ್‌ಗಳು ಮತ್ತು ಸ್ಪೇಷಲ್‌ ಎಫೆಕ್ಟ್‌ಗಳನ್ನು ಹೊಂದಿದೆ. ಇದರಲ್ಲಿ ನೀವು ನಿಮ್ಮ ಫೋಟೋಗಳಿಗೆ ಸುರುಳಿಯಾಕಾರದ ಎಫೆಕ್ಟ್‌ಗಳನ್ನು ಮತ್ತು ಮೋಷನ್‌ ಬ್ಲರ್‌ ಅನ್ನು ಸೇರಿಸಬಹುದು. ಅಪಾರದರ್ಶಕತೆ ಮತ್ತು ಬಣ್ಣಗಳನ್ನು ಸರಿಹೊಂದಿಸುವ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಇದು ನಿಮ್ಮ ಚಿತ್ರವನ್ನು ಸ್ವಯಂಚಾಲಿತವಾಗಿ ಕ್ರಾಪ್ ಮಾಡುತ್ತದೆ ಮತ್ತು ನೀವು ಆಯ್ಕೆ ಮಾಡಿದ ವಿಭಿನ್ನ ಹಿನ್ನೆಲೆಗಳನ್ನು ಒವರ್ಲೆ ಮಾಡಬಹುದು. ಇದು ಉಚಿತ ಅಪ್ಲಿಕೇಶನ್ ಆದರೆ ಜಾಹೀರಾತುಗಳನ್ನು ಒಳಗೊಂಡಿದೆ.

B612

B612

B612 ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮದೇ ಆದ ಹೋಳಿ ಫಿಲ್ಟರ್‌ಗಳನ್ನು ಅಥವಾ ಎಫೆಕ್ಟ್‌ ಅನ್ನು ಕ್ರಿಯೆಟ್‌ ಮಾಡಲು ಮತ್ತು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ಒಮ್ಮೆ ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಎಫೆಕ್ಟ್‌ಗಳ ವಿಭಾಗಕ್ಕೆ ಹೋಗಿ ನೀವು ನಿಮ್ಮ ಫೋಟೋಗಳಿಗೆ ಸೇರಿಸಬಹುದಾಗಿದೆ. ನಂತರ ನಿಮ್ಮ ಫೋಟೋಗಳನ್ನ Instagram ನಲ್ಲಿ ಕೂಡ ಶೇರ್‌ ಮಾಡಬಹುದಾಗಿದೆ. ಜೊತೆಗೆ ಇದರಲ್ಲಿ ‘ಹಾಟ್' ಮತ್ತು ‘ಲೈಟ್' ವಿಭಾಗಗಳಲ್ಲಿ ಇರುವ ಫಿಲ್ಟರ್‌ಗಳು ಉತ್ತಮವಾಗಿದ್ದು, ನಿಮ್ಮ ಹೋಳಿ ಫೋಟೋಗಳನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌

ಇನ್ನು ನಿಮ್ಮ ಹೋಳಿ ಹಬ್ಬದ ಫೋಟೋಗಳಿಗೆ ಇನ್ನಷ್ಟು ರಂಗುತುಂಬಲು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ ಕೂಡ ಸಹಾಯಕವಾಗಲಿದೆ. ಈ ಅಪ್ಲಿಕೇಶನ್‌ನಲ್ಲಿಯೂ ಸಹ ಸಾಕಷ್ಟು ಮಾದರಿಯ ಫಿಲ್ಟರ್‌ಗಳನ್ನು ಒಳಗೊಂಡಿದೆ. ನೀವು ಯಾವುದೇ ನಿರ್ದಿಷ್ಟ ರೀತಿಯ ಫಿಲ್ಟರ್‌ಗಾಗಿ ಹುಡುಕುತ್ತಿದ್ದರೆ, ನೀವು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಗಳ ವಿಭಾಗಕ್ಕೆ ಹೋಗಿ ಮತ್ತು ಅಸ್ತಿತ್ವದಲ್ಲಿರುವ ಫಿಲ್ಟರ್‌ಗಳ ಮೇಲೆ ಕೊನೆಯವರೆಗೂ ಸ್ವೈಪ್ ಮಾಡಿ. ಅಲ್ಲದೆ ಹೋಳಿ ಫಿಲ್ಟರ್‌ಗಳನ್ನು ಪಡೆಯಲು ನೀವು ಸರ್ಚ್‌ ಭಾರ್‌ನಲ್ಲಿಯು ಸಹ ಟೈಪ್ ಮಾಡಬಹುದು.

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್

ಹೋಳಿ ಫೋಟೋಗಳನ್ನ ಕಲರ್‌ಪುಲ್‌ ಆಗಿಸುವಲ್ಲಿ ಸ್ನ್ಯಾಪ್‌ಚಾಟ್ ಅಪ್ಲಿಕೇಶನ್‌ ಅನ್ನು ಸಹ ಬಳಸಬಹುದು. ಸ್ನ್ಯಾಪ್‌ಚಾಟ್ ಪ್ರತಿ ಸಂದರ್ಭದಲ್ಲೂ ಹಬ್ಬಕ್ಕೆ ಸಂಬಂಧಿಸಿದ ಫಿಲ್ಟರ್‌ಗಳನ್ನು ನೀಡುತ್ತದೆ. ಇದರಲ್ಲಿ ವರ್ಣರಂಜಿತ ಸ್ಟಿಕ್ಕರ್ ಪ್ಯಾಕ್‌ಗಳು, ವರ್ಧಿತ ರಿಯಾಲಿಟಿ ಲೆನ್ಸ್‌ಗಳು ಮತ್ತು ಫಿಲ್ಟರ್‌ಗಳನ್ನು ಅಪ್ಡೇಟ್‌ ಮಾಡಬಹುದಾಗಿದೆ. ಇನ್ನು ಡಿಸ್ಕವರ್ ವಿಭಾಗದಲ್ಲಿ ಬಳಕೆದಾರರು ಮೀಸಲಾದ ಹೋಳಿ ವಿಷಯದ ವಿಷಯವನ್ನು ಪಡೆಯುತ್ತಾರೆ. ಸ್ನ್ಯಾಪ್‌ಚಾಟ್ ಪ್ರಕಾರ, ಪ್ರಪಂಚದಾದ್ಯಂತದ ಬಳಕೆದಾರರು 50 ಕ್ಕೂ ಹೆಚ್ಚು ಹೋಲಿ ಲೆನ್ಸ್‌ಗಳನ್ನು ಕ್ರಿಯೆಟ್‌ ಮಾಡಿದ್ದಾರೆ ಎನ್ನಲಾಗಿದೆ.

PIXLR

PIXLR

PIXLR ಅಪ್ಲಿಕೇಶನ್‌ ಫೋಟೋ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ನಿಮ್ಮ ಹೋಳಿ ಫೋಟೋಗಳನ್ನು ಹೆಚ್ಚು ವರ್ಣಮಯವಾಗಿಸಲು ಅವಕಾಶವಿದೆ. ಇನ್ನು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನೇರವಾಗಿ ‘ಓವರ್‌ಲೇ' ವಿಭಾಗಕ್ಕೆ ಭೇಟಿ ನೀಡಬೇಕು. ಇರಲ್ಲಿ ನೀವು ‘ಎಫೆಕ್ಟ್ಸ್‌' ಅನ್ನು ಸಹ ಅನ್ವೇಷಿಸಬಹುದು. ಲೆಯರ್ಸ್‌ ಮತ್ತು ಹೊಂದಾಣಿಕೆ ಪಾರದರ್ಶಕತೆಯೊಂದಿಗೆ ಎಫೆಕ್ಟ್ಸ್‌ಗಳನ್ನು ಕ್ರಿಯೆಟ್‌ ಮಾಡಲು ಡಬಲ್ ಎಕ್ಸ್‌ಪೋಸರ್ ಫೀಚರ್ಸ್‌ ಅನ್ನು ಬಳಸಬಹುದು.

Best Mobiles in India

English summary
Holi 2021: There are a lot of apps that you can use to make your Holi photos even more colourful.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X