Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ನಲ್ಲಿ ವಾಯಿಸ್‌ ರೆಕಾರ್ಡಿಂಗ್‌ ಎಡಿಟ್‌ ಮಾಡುವ ಐದು ಅತ್ಯುತ್ತಮ ಆಪ್ಸ್!

ಇದು ಸ್ಮಾರ್ಟ್‌ಫೋನ್‌ ಜಮಾನ. ಸ್ಮಾರ್ಟ್‌ಫೋನ್‌ ಇಲ್ಲದ ದಿನವನ್ನೇ ಊಹಿಸಿಕೊಳ್ಳುವುದು ಕೂಡ ಕಷ್ಟ ಎನ್ನುವಂತ ಜಮಾನದಲ್ಲಿ ನಾವಿದ್ದೇವೆ. ಸದ್ಯ ಎಲ್ಲರ ಕೈನಲ್ಲೂ ಇದೀಗ ಸ್ಮಾರ್ಟ್‌ಫೋನ್‌ ರಿಂಗಣಿಸುತ್ತಿದ್ದು, ಸ್ಮಾರ್ಟ್‌ಫೋನ್‌ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಲರ್‌ ಕಲರ್‌ ಫೋಟೋ ತೆಗೆದು ಅದನ್ನ ಎಡಿಟಿಂಗ್‌ ಆಪ್‌ಗಳ ಮೂಲಕ ಇನ್ನಷ್ಟು ಸುಂದರಗೊಳಿಸುವುದು ಸಹ ಮಾಡುತ್ತಾರೆ. ಅಷ್ಟೇ ಯಾಕೆ ವಿಡಿಯೋ ರೆಕಾರ್ಡಿಂಗ್‌ ಮಾಡಿ ಅದನ್ನು ಕೂಡ ಆಪ್‌ಗಳ ಮೂಲಕ ಎಡಿಟ್‌ ಮಾಡಬಹುದಾಗಿದೆ. ಅದೇ ರೀತಿ ವಾಯಿಸ್‌ ರೆಕಾರ್ಡಿಂಗ್‌ ಎಡಿಟ್‌ ಮಾಡುವುದಕ್ಕೂ ಸಹ ಆಪ್‌ಗಳಿವೆ.

ವಾಯಿಸ್‌ ರೆರ್ಕಾಡಿಂಗ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಮಾಡುವ ವಾಯಿಸ್‌ ರೆರ್ಕಾಡಿಂಗ್‌ ಅನ್ನು ಸಹ ಎಡಿಟ್‌ ಮಾಡಬಹುದಾಗಿದೆ. ನಿಮಗೆ ಅವಶ್ಯಕತೆಗೆ ತಕ್ಕಂತೆ ಎಡಿಟ್‌ ಮಾಡಬಹುದಾಗಿದೆ. ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಯಿಸ್‌ ಎಡಿಟ್ ಆಪ್‌ಗಳು ಪ್ರಿ ಇನ್‌ಸ್ಟಾಲ್‌ ಆಗಿರುತ್ತವೆ. ಜೊತೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಯಿಸ್‌ ರೆಕಾರ್ಡಿಂಗ್‌ ಫೈಲ್‌ಗಳನ್ನು ಎಡಿಟ್ ಮಾಡಲು ಅನೇಕ ಆಪ್‌ಗಳು ಸಿಗುತ್ತವೆ. ಈ ಆಪ್‌ಗಳ ಮೂಲಕ ವಾಯಿಸ್‌ ರೆಕಾರ್ಡಿಂಗ್‌ ಆಡಿಯೊ ಕ್ಲಿಪ್‌ಗಳನ್ನು ಸುಲಭವಾಗಿ ಎಡಿಟ್‌ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ವಾಯ್ಸ್‌ ರೆಕಾರ್ಡಿಂಗ್‌ ಅನ್ನು ಸುಲಭವಾಗಿ ಎಡಿಟ್‌ ಮಾಡಬಹುದಾದ 5 ಅತ್ಯುತ್ತಮ ವಾಯಿಸ್ ಎಡಿಟಿಂಗ್ ಆಪ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನು ಓದಿರಿ.

ವೇವ್‌ಪ್ಯಾಡ್

ವೇವ್‌ಪ್ಯಾಡ್

ವೇವ್‌ಪ್ಯಾಡ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಇರುವ ಅತ್ಯುತ್ತಮ ವಾಯಿಸ್‌ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದು ಹಲವು ಇಂಟರ್‌ಬಿಲ್ಟ್‌ ಫೀಚರ್ಸ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಅನೇಕ ಟ್ರ್ಯಾಕ್‌ಗಳನ್ನು ತೆರೆಯುವ ಕುಶಲತೆಯನ್ನು ಇದು ಹೊಂದಿದೆ. ಬಹಳ ಸುಲಭ. ಇದಲ್ಲದೆ, ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಆಪ್‌ನಲ್ಲಿ ಟ್ರಿಮ್, ಇನ್ಸರ್ಟ್, ಕಟ್, ಕಾಪಿ, ಪೇಸ್ಟ್, ಆಂಪ್ಲಿಫೈ, ಎಕೋ ಮತ್ತು ಶಬ್ದ ಕಡಿತದಂತಹ ಆಡಿಯೊ ಪರಿಣಾಮಗಳನ್ನು ಸೇಸ್ವಯಂ-ಟ್ರಿಮ್ ಮತ್ತು ಧ್ವನಿ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು ವಿವಿಧ ಫೈಲ್ ಫಾರ್ಮ್ಯಾಟ್‌ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್ ಅಪ್ಲಿಕೇಶನ್ ಹಾಡುಗಳ ಎಡಿಟ್‌ಗೆ ಬೆಸ್ಟ್ ತಾಣವಾಗಿದೆ. ಈ ಆಪ್ ಮೂಲಕ ಹಾಡುಗಳನ್ನು ಕಟ್ ಮಾಡಬಹುದು, ರಿಂಗ್‌ಟ್ಯೂನ್ ಸಿದ್ಧಪಡಿಸಿಕೊಳ್ಳಬಹುದು, ಹಾಡುಗಳನ್ನು ಎಡಿಟ್ ಮಾಡಬಹುದು ಹಾಗೂ ಇನ್ನಿತರೆ ಎಡಿಟಿಂಗ್ ಸೌಲಭ್ಯಗಳು ಸಹ ಇವೆ. ಜೊತೆಗೆ ಈ ಆಪ್‌ನಲ್ಲಿ ಬಳಕೆದಾರರು ಆಡಿಯೊ ಕಂಪೋಸ್, ಟ್ರಿಮ್ ಆಡಿಯೊ, ಮರ್ಜ್ ಆಡಿಯೊ, ಫೈಲ್ ಸೇರಿಸುವುದು ಸೌಲಭ್ಯಗಳನ್ನು ಬಳಕೆ ಮಾಡಬಹುದಾಗಿದೆ.

ವೇವ್ ಎಡಿಟರ್

ವೇವ್ ಎಡಿಟರ್

ಈ ವೇವ್ ಎಡುಟರ್ ಆಪ್ ರೆಕಾರ್ಡಿಂಗ್ ಮತ್ತು ಎಡಿಟ್‌ಗೆ ಅತ್ಯುತ್ತಮ ಆಗಿದೆ. ಈ ಆಪ್‌ನಲ್ಲಿ ಮಲ್ಟಿ ಟ್ರಾಕ್ ಮಿಕ್ಸಿಂಗ್ ಮತ್ತು ಎಡಿಟಿಂಗ್ ಸೌಲಭ್ಯಗಳು ಇವೆ. ಎಂಪಿ3 ರೆಕಾರ್ಡಿಂಗ್ ಫಾರ್ಮೇಟ್‌ನಲ್ಲಿ ಸೇವ್ ಮಾಡಬಹುದಾಗಿದೆ. ಇದರೊಂದಿಗೆ ಇನ್ನಷ್ಟು ಆಕರ್ಷಕ ಫೀಚರ್‌ಗಳು ಸಹ ಇವೆ. ಒಟ್ಟಾರೆ ಬಳಕೆದಾರರಿಗೆ ಈ ಆಪ್ ಬಳಕೆ ಸುಲಭ ಅನಿಸಲಿದೆ.

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ ಎಡಿಟಿಂಗ್ ಅಪ್ಲಿಕೇಶನ್‌ನಲ್ಲಿ ಅಡ್ವಾನ್ಸಡ್ ಫೀಚರ್ಸ್‌ಗಳು ಸೇರಿವೆ. ವಾಯಿಸ್‌ ಕಟ್, ಟ್ರಿಮ್, ಮ್ಯೂವ್, ಸ್ಲಿಟ್‌, ಮಲ್ಟಿಟ್ರಾಕ್ ರೆಕಾರ್ಡಿಂಗ್ ನಂತಹ ಆಕರ್ಷಕ ಸೌಲಭ್ಯಗಳು ಇವೆ. ಈ ಆಪ್ ಬಳಕೆಯು ಸಹ ಸರಳವಾಗಿದೆ.

ವಾಯಿಸ್‌ ಪ್ರೊ

ವಾಯಿಸ್‌ ಪ್ರೊ

ವಾಯಿಸ್‌ ಪ್ರೊ ವಾಯಿಸ್ ಎಡಿಟಿಂಗ್ ಆಪ್ ಭಿನ್ನ ಫೀಚರ್ಸ್‌ಗಳಿಂದ ಗಮನ ಸೆಳೆದಿದ್ದು, ಒಟ್ಟು 100 ಭಿನ್ನ ಮಾದರಿ ಫಾರ್ಮೇಟ್‌ನಲ್ಲಿ ರೆಕಾರ್ಡಿಂಗ್ ಅವಕಾಶ ನೀಡುತ್ತದೆ. ವಾಯಿಸ್ ರೆಕಾರ್ಡಿಂಗ್ ಫೈಲ್‌ಗಳನ್ನು ಮೊನೊ ಅಥವಾ ಸ್ಟೀರಿಯೊ ಫಾರ್ಮೇಟ್‌ನಲ್ಲಿ ದಾಖಲಿಸಬಹುದು. ಇದರೊಂದಿಗೆ ನಿಮ್ಮ ರೆಕಾರ್ಡಿಂಗ್‌ಗೆ ಹಿನ್ನಲೆ ಮ್ಯೂಸಿಕ್ ಸಹ ಸೇರಿಸಬಹುದಾಗ ಸೌಲಭ್ಯ ಇದೆ. ಅದಕ್ಕಾಗಿ ಮಿಕ್ಸ್ ಮತ್ತು ಮರ್ಜ್ ಆಯ್ಕೆಗಳು ಇವೆ. ಕಾಲ್ ರೆಕಾರ್ಡಿಂಗ್ ಆಯ್ಕೆ ಸಹ ಇದೆ.

Best Mobiles in India

English summary
Are you looking for an audio editor app to edit your boring lecture recording. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+