ಭಾರತದಲ್ಲಿ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳು!
ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಬ್ಲೂಟೂತ್ ಸ್ಪೀಕರ್‌ಗಳಿವೆ. ಮ್ಯೂಸಿಕ್ ಕೇಳುತ್ತಾ ಸಮಯ ಕಳೆಯಲು ಬಯಸುವ ಸಾಕಷ್ಟು ಮಂದಿ ಒಂದು ಉತ್ತಮ ಬ್ಲೂಟೂತ್ ಸ್ಪೀಕರ್ ಹೊಂದುವುದಕ್ಕೆ ಬಯಸುತ್ತಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಅನೇಕ ಬ್ಲೂಟೂತ್ ಸ್ಪೀಕರ್‌ಗಳಿವೆ. ಇನ್ನು ಬ್ಲೂಟೂತ್ ಸ್ಪೀಕರ್‌ಗಳನ್ನು ಎಲ್ಲಿ ಬೇಕಾದರೂ ಸಾಗಿಸಬಹುದು ಮತ್ತು ಸಾಗಿಸಲು ಸುಲಭವಾಗಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್‌ಗಳು ಉತ್ತಮ ಸೌಂಡ್ ಸಿಸ್ಟಂಗಳನ್ನ ಹೊಂದಿರುವುದರಿಂದ ಮನೆಗಳಲ್ಲಿ ಪಾರ್ಟಿ ಮಾಡುವುದಕ್ಕೆ, ಸ್ನೇಹಿತರ ಪಾರ್ಟಿಗಳಲ್ಲಿ ಎಂಜಾಯ್ ಮಾಡುವುದಕ್ಕೆ ಉತ್ತಮ ಆಯ್ಕೆಯಾಗಿವೆ.

ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ಬ್ಲೂಟೂತ್ ಸ್ಪೀಕರ್‌ಗಳು ಲಬ್ಯವಿರುವುದರಿಂದ ಯಾವುದನ್ನು ಆಯ್ಕೆ ಮಾಡುವುದು ಅನ್ನೊ ಗೊಂದಲ ಸಹಜವಾಗಿಯೇ ಇದೆ. ಉತ್ತಮ ಸೌಂಡ್ ಸಿಸ್ಟಂ, ಬ್ಯಾಟರಿ ಪವರ್ ಹೊಂದಿರುವ ಸ್ಪೀಕರ್‌ಗಳ ಹೊಂದುವುದಕ್ಕೆ ಬಳಕೆದಾರರು ಬಯಸುತ್ತಾರೆ. ಹೀಗಾಗಿ ಬಳಕೆದಾರರಿಗೆ ಉತ್ತಮ ಎನಿಸಬಲ್ಲ, ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಮ್ಯೂಸಿಕ್ ಅನ್ನು ನುಡಿಸುವ ಕೆಲವು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೆಬಿಎಲ್ ಗೋ
ಮೈಕ್ರೊಫೋನ್ ಹೊಂದಿರುವ ಜೆಬಿಎಲ್ ಗೋ ಪೋರ್ಟಬಲ್ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಒಂದಾಗಿದೆ. ಇದು ನಾಯಿಸ್ ಕ್ಯಾನ್ಸಲೇಶನ್ ಸ್ಪೀಕರ್ ಫೋನ್ ಅನ್ನು ಹೊಂದಿದೆ. ಇದರಲ್ಲಿ ಬ್ಲೂಟೂತ್ ಜೊತೆಗೆ ಆಡಿಯೊ ಕೇಬಲ್ ಇನ್‌ಫುಟ್‌ನೊಂದಿಗೆ ಹಾಡುಗಳನ್ನು ಸಹ ಪ್ಲೇ ಮಾಡಬಹುದು. ಇನ್ನು ಪ್ಲೇ ಬಟನ್ ಅನ್ನು ಜೋರಾಗಿ ಪ್ರೆಸ್ ಮಾಡುವ ಮೂಲಕ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಯಂತಹ ವಾಯ್ಸ್ ಅಸಿಸ್ಟೆಂಟ್ ಜೊತೆಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಇದು 5 ಗಂಟೆಗಳ ಗೇಮ್ ಟೈಂ ಅನ್ನು ಹೊಂದಿದೆ.

ಬೋಟ್ ಸ್ಟೋನ್ 200
ಇನ್ನು ಬೋಟ್ ಸ್ಟೋನ್ 200 ಪೋರ್ಟಬಲ್ ವಾಯರ್‌ಲೆಸ್ ಸ್ಪೀಕರ್ ಕೂಡ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಒಂದಾಗಿದೆ. ಇದು 3Wನ ಪ್ರೀಮಿಯಂ ವಾಯ್ಸ್ ಪ್ರೊಡಕ್ಟಿವಿಟಿಯನ್ನು ನೀಡುತ್ತದೆ. ಇನ್ನು ಈ ಸ್ಪೀಕರ್ 1500 mAh ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 10 ಗಂಟೆಗಳ ಬ್ಯಾಕಪ್ ಹೊಂದಿದೆ. ಜೊತೆಗೆ ಇದು IPX6 ವಾಟರ್ ಮತ್ತು ಸ್ಪ್ಲಾಶ್ ನಿರೋಧಕವನ್ನು ಹೊಂದಿದೆ. ಅಲ್ಲದೆ ಇದು ಸುಲಭವಾಗಿ ಪೋರ್ಟಬಲ್ ಮತ್ತು ಮೌಂಟೇಬಲ್ ವಿನ್ಯಾಸವನ್ನು ಹೊಂದಿದೆ.

ಫಿಲಿಪ್ಸ್ BT50A/00
ಫಿಲಿಪ್ಸ್ BT50A/00 ಪೋರ್ಟಬಲ್ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್ ಅತ್ಯುತ್ತಮ ಸ್ಪೀಕರ್‌ಗಳಲ್ಲಿ ಒಂದಾಗಿದೆ. ಅದ್ಭುತ ಸ್ಪೀಕರ್ ಆಗಿದೆ. ಈ ಬ್ಲೂಟೂತ್ ಸ್ಪೀಕರ್ ಸುಧಾರಿತ ಆಡಿಯೊ ಕಾರ್ಯಕ್ಷಮತೆಯನ್ನು ನೀಡಲಿದೆ. ಜೊತೆಗೆ ಇದು ಸುಂದರವಾದ ಮತ್ತು ಸಾಂದ್ರವಾದ ವಿನ್ಯಾಸವನ್ನು ಹೊಂದಿದೆ. ಇದು ಮುಕ್ತ ಸಂಗೀತ ಸ್ಟ್ರೀಮಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ಅಲ್ಲದೆ ಇದು ಮ್ಯೂಸಿಕ್ ಪ್ಲೇಬ್ಯಾಕ್‌ಗಾಗಿ ಇಂಟರ್‌ಬಿಲ್ಟ್ ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಯನ್ನು ಹೊಂದಿದೆ. ಇದು 5 ರಿಂದ 6 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಹೊಂದಿದೆ. ಪಾರ್ಟಿಹಾಲ್‌ಗಳಲ್ಲಿ ಬಳಸುವುದಕ್ಕೆ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ ಇದಾಗಿದೆ.

ಜೆಬಿಎಲ್ ಗೋ 2
ಇನ್ನು ಜೆಬಿಎಲ್ ಗೋ 2 ಪೋರ್ಟಬಲ್ ವಾರ್‌ಪ್ರೂಪ್ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಜೆಬಿಎಲ್‌ನ ಸಿಗ್ನೆಚರ್ ವಾಯ್ಸ್ ಅನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ನೀಡುತ್ತದೆ. ಅಲ್ಲದೆ ಇದು 5 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಹೊಂದಿದೆ. ಈ ಸ್ಪೀಕರ್ IPX7 ವಾಟರ್ ಪ್ರೂಪ್ ರೇಟಿಂಗ್ ಅನ್ನು ಹೊಂದಿದೆ. ಇದರ ಸ್ಪೀಕರ್ ಫೋನ್ ಸೌಂಡ್ ಕ್ಯಾನ್ಸಲೇಶನ್ ಫೀಚರ್ಸ್ ಅನ್ನು ಹೊಂದಿದೆ. ಅಲ್ಲದೆ ಇದು ಆಡಿಯೊ ಕೇಬಲ್ ಇನ್‌ಪುಟ್‌ನೊಂದಿಗೆ ಆಡಿಯೊವನ್ನು ಸಹ ಪ್ಲೇ ಮಾಡುತ್ತದೆ. ಇನ್ನು ಈ ಬ್ಲೂಟೂತ್ ಇಯರ್‌ಫೋನ್ ಅನ್ನು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದಾಗಿದೆ.

ಬೋಟ್ ಸ್ಟೋನ್ 1000
ಬೋಟ್ ಸ್ಟೋನ್ 1000 ಪೋರ್ಟಬಲ್ ವಾಯರ್‌ಲೆಸ್ ಸ್ಪೀಕರ್ ಬಾಸ್ ನಿಷ್ಕ್ರಿಯ ರೇಡಿಯೇಟರ್ ಅನ್ನು ಹೊಂದಿದ್ದು, ಇದು ಸಾಕಷ್ಟು ಬಾಸ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಇದು 14W ಡ್ಯುಯಲ್ ಸ್ಪೀಕರ್‌ಗಳ ಸ್ಟಿರಿಯೊ ಧ್ವನಿಯನ್ನು ನೀಡುತ್ತದೆ. ಅಲ್ಲದೆ ಇದು ಐಪಿಎಕ್ಸ್ 5 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಹೊಂದಿದೆ. ಜೊತೆಗೆ ಈ ಸ್ಪೀಕರ್ 8 ಗಂಟೆಗಳವರೆಗೆ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಬ್ಲೂಟೂತ್ ಸ್ಪೀಕರ್ 10 ಮೀಟರ್ ಕನೆಕ್ಟಿವಿಟಿಯನ್ನು ಹೊಂದಿದೆ. ಇದರಲ್ಲಿ ಹ್ಯಾಂಡಲ್ ಅನ್ನು ಸಹ ನೀಡಲಾಗಿದೆ.


Click it and Unblock the Notifications