ನೀವು ಖರೀದಿಸಬಹುದಾದ 6,000mAh ಬ್ಯಾಟರಿ ಸಾಮರ್ಥ್ಯದ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕೂಡ ಲಬ್ಯವಿವೆ. ಇನ್ನು ಇಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೊನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಸೈ ಎನಿಸಿಕೊಂಡಿವೆ. ಸದ್ಯ ನಿಮಗೆ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೊನ್‌ಗಳು ಲಭ್ಯವಿದೆಯಾದರೂ ನಿಮಲ್ಲಿ ಯಾವುದನ್ನ ಆಯ್ಕೆ ಮಾಡಬೇಕೆಂಬ ಗೊಮದಲ ಇದ್ದೇ ಇರುತ್ತೆ. ಆದರಿಂದ ನಾವು ಈ ಲೇಖನದಲ್ಲಿ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಲಭ್ಯವಿರುವ 6,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿವೆ. ಹೊಸತನಕ್ಕೆ ಹೆಸರಾದ ಹಲವು ಸ್ಮಾರ್ಟ್‌ಫೊನ್‌ಗಳು ಲಭ್ಯವಿದೆ. ಅಲ್ಲದೆ ಇನ್ನು ಹೊಸ ಮಾದರಿಯ ಹಲವು ಸ್ಮಾರ್ಟ್‌ಫೋನ್‌ಗಳು ಕೂಡ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕೂಡ ಬಿಡುಗಡೆ ಆಗಲಿವೆ. ಹಾಗಾದ್ರೆ ನೀವು ಆಯ್ಕೆ ಮಾಡಬಹುದಾದ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯದ ಐದು ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಇದೇ ಜುಲೈ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇದು ಅಮೆಜಾನ್ ಇಂಡಿಯಾ ಮೂಲಕ ದೇಶದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾ ಹೊಂದಿದ್ದು, ಜೊತೆಗೆ ಇದು ಸ್ಯಾಮೋಲ್ಡ್ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 25W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನ ಬೆಂಬಲಿಸಲಿದೆ. ಇನ್ನು ಇದರ ಬೆಲೆ 20,000 ರೂ ಬೆಲೆ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ m31

ಸ್ಯಾಮ್‌ಸಂಗ್ ಗ್ಯಾಲಕ್ಸಿ m31

ಸ್ಯಾಮ್‌ಸಂಗ್ ಗ್ಯಾಲಕ್ಸಿ m31 ಸ್ಮಾರ್ಟ್‌ಫೋನ್‌ ಕೂಡ 6,000mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ರೂಪಾಂತರದ ಬೆಲೆ 15,999 ರೂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.4-ಇಂಚಿನ ಸೂಪರ್ ಅಮೋಲೆಡ್ FHD + ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಎಕ್ಸಿನೋಸ್ 9611 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5-ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸಿಸ್ಟಮ್ ಮತ್ತು ನಾಲ್ಕನೇ ಕ್ಯಾಮೆರಾ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ ಕೂಡ 6,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದು 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 6.4 ಇಂಚಿನ ಸ್ಯಾಮೋಲ್ಡ್ ಫುಲ್ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದು ಎಕ್ಸಿನೋಸ್ 9611 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಲ್ಲದೆ ಇದು 6GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದರ ಬೆಲೆ 12,999 ರೂ. ಆಗಿದೆ.

ಇನ್ಫಿನಿಕ್ಸ್ 4 ಪ್ಲಸ್

ಇನ್ಫಿನಿಕ್ಸ್ 4 ಪ್ಲಸ್

ಇನ್ನು ಸದ್ಯ ಬಿಡುಗಡೆ ಆಗಿರುವ ಇನ್ಫಿನಿಕ್ಸ್‌ 4 ಪ್ಲಸ್‌ ಸ್ಮಾರ್ಟ್‌ಫೋನ್‌ ಕೂಡ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ A25 ಪ್ರೊಸೆಸರ್ ಹೊಂದಿದೆ. ಜೊತೆಗೆ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ VoWi-Fi ಅನ್ನು ಸಹ ಸಕ್ರಿಯಗೊಳಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ವಿಶೇಷವಾಗಿದ್ದು, ಇದು 23 ಗಂಟೆಗಳ ವೀಡಿಯೊ ಪ್ಲೇಬ್ಯಾಕ್, 23 ಗಂಟೆಗಳ ಇಂಟರ್ನೆಟ್ ಸರ್ಫಿಂಗ್, 15 ಗಂಟೆಗಳ ಗೇಮಿಂಗ್ ಟೈಂ, ಮತ್ತು 31 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡುತ್ತದೆ.

ರಿಯಲ್‌ಮಿ C15

ರಿಯಲ್‌ಮಿ C15

ರಿಯಲ್‌ಮಿ C15 ಸ್ಮಾರ್ಟ್‌ಫೋನ್‌ ಇದೇ ಜುಲೈ 28 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಕೂಡ 6,000mAh ಬ್ಯಾಟರಿ ಸಾಮರ್ಥ್ಯವನ್ನ ಹೊಂದಿರಲಿದೆ. ಅಲ್ಲದೆ ಇದು 18W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಯನ್ನು ಬೆಂಬಲಿಸಲಿದೆ ಎನ್ನಲಾಗಿದೆ.

Best Mobiles in India

English summary
top budget smartphones with 6,000mAh battery you can buy.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X