ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗುವ ಐದು ಅತ್ಯುತ್ತಮ ಇಯರ್‌ಫೋನ್‌ಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್‌ ಧರಿಸಿಕೊಂಡು ಮ್ಯೂಸಿಕ್‌ ಕೇಳುವುದು ಎಲ್ಲರಿಗೂ ಇಷ್ಟ. ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಈಗಂತೂ ತರಹೇವಾರಿ ಇಯರ್‌ಫೋನ್‌ಗಳು ಲಭ್ಯ ಇವೆ. ಅವುಗಳಲ್ಲಿ ಟ್ರೂ ವಾಯರ್‌ಲೆಸ್‌ ಇಯರ್‌ಫೊನ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರಲ್ಲೂ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ ಇರುವ ಟ್ರೂ ವಾಯರ್‌ ಲೆಸ್‌ ಇಯರ್‌ಫೋನ್‌ಗಳಿಗೆ ಇಂದಿಗೂ ಡಿಮ್ಯಾಂಡ್‌ ಇದ್ದೆ ಇದೆ.

ಇಯರ್‌ಫೋನ್‌ಗಳು

ಹೌದು, ಟೆಕ್‌ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಇಯರ್‌ಫೋನ್‌ಗಳು ಲಭ್ಯವಿವೆ. ಬಜೆಟ್‌ ಬೆಲೆಯಿಂದ ದುಬಾರಿ ಬೆಲೆಯವರೆಗೂ ಅನೇಕ ತರಹೇವಾರಿ ಇಯರ್‌ಫೋನ್‌ಗಳು ಸಿಗುತ್ತವೆ. ಅವುಗಳಲ್ಲಿ ಬ್ರ್ಯಾಂಡೆಡ್‌ ಕಂಪನಿಗಳ ಇಯರ್‌ಫೋನ್‌ಗಳು ಸಹ ಸೇರಿವೆ. ಇದಲ್ಲದೆ ಐದು ಸಾವಿರ ರೂಪಾಯಿ ಒಳಗೂ ಅತ್ಯುತ್ತಮ ಇಯರ್‌ಫೋನ್‌ ಸಿಗುತ್ತವೆ. ಹಾಗಾದರೇ 5,000ರೂ. ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಇಯರ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಬಡ್ಸ್ ಏರ್ ಪ್ರೊ

ರಿಯಲ್‌ಮಿ ಬಡ್ಸ್ ಏರ್ ಪ್ರೊ

ರಿಯಲ್‌ಮಿ ಬಡ್ಸ್ ಏರ್ ಪ್ರೊ ಇಯರ್‌ಫೋನ್‌ ಪ್ರಸ್ತುತ ಇ-ಕಾಮರ್ಸ್ ಸೈಟ್‌ಗಳಲ್ಲಿ 4,999 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಇನ್ನು ಈ ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಜೊತೆಗೆ ಅಗ್ಗದ ವಾಯರ್‌ಲೆಸ್ ಇಯರ್‌ಫೋನ್‌ಗಳಲ್ಲಿ ಇದು ಒಂದಾಗಿದೆ. ಇದು 35DB ವರೆಗಿನ ನಾಯ್ಸ್‌ ಕ್ಯಾನ್ಸಲೇಶನ್‌ ಭರವಸೆ ನೀಡುತ್ತದೆ. ಇನ್ನು ಇಯರ್‌ಫೋನ್‌ಗಳು ಬ್ಲೂಟೂತ್ 5 ಕನೆಕ್ಟಿವಿಟಿ, 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳು, 94 mm ಲೋ ಲೇಟೆನ್ಸಿ ಮೋಡ್, ಟ್ರಾನ್ಸ್ ಪರೆನ್ಸಿ ಮೋಡ್ ಮತ್ತು ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ. ಈ ಇಯರ್‌ಫೋನ್‌ 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ.

ಒನ್‌ಪ್ಲಸ್ ಬಡ್ಸ್

ಒನ್‌ಪ್ಲಸ್ ಬಡ್ಸ್

ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಇಯರ್‌ಫೋನ್‌ಗಳಲ್ಲಿ ಒನ್‌ಪ್ಲಸ್ ಬಡ್ಸ್‌ ಕೂಡ ಒಂದಾಗಿದೆ. ಸದ್ಯ ಈ ಇಯರ್‌ಬಡ್ಸ್‌ 4,990 ರೂ. ಬೆಲೆಯನ್ನು ಹೊಂದಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರ ಮೂಲಕವೂ ಖರೀದಿಸಬಹುದು. ಒನ್‌ಪ್ಲಸ್ ಬಡ್ಸ್ 13.4 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ ಮತ್ತು ಡಾಲ್ಬಿ ಅಟ್ಮೋಸ್‌ನೊಂದಿಗೆ 3 ಡಿ ಸ್ಟೀರಿಯೋವನ್ನು ಬೆಂಬಲಿಸುತ್ತದೆ. ಇದು ಕೇಸ್‌ನೊಂದಿಗೆ ಬಳಕೆದಾರರು 30 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯುತ್ತಾರೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ. ಸಿಂಗಲ್‌ ಚಾರ್ಜ್‌ನಲ್ಲಿ, ಇದು 7 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಉತ್ತಮ ಗೇಮಿಂಗ್ ಅನುಭವಕ್ಕಾಗಿ ಕಡಿಮೆ-ಲೇಟೆನ್ಸಿ ಮೋಡ್ ಇದೆ.

ಒಪ್ಪೊ ಎನ್‌ಕೋ W51

ಒಪ್ಪೊ ಎನ್‌ಕೋ W51

ಒಪ್ಪೊ ಎನ್‌ಕೋ W51 ಇಯರ್‌ಫೋನ್‌ 4,999 ರೂಗಳಿಗೆ ಖರೀದಿಸಬಹುದಾಗಿದೆ. ಈ ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಬೆಂಬಲವನ್ನು ಹೊಂದಿವೆ. 35 ಡಿಬಿ ವರೆಗೆ ಶಬ್ದವನ್ನು ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದು 7mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಕಿ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರರ್ಥ ವಾಯರ್‌ಲೆಸ್ ಚಾರ್ಜಿಂಗ್ ಮ್ಯಾಟ್ಸ್ ಮತ್ತು ಪ್ಯಾಡ್‌ಗಳನ್ನು ಬಳಸಿಕೊಂಡು ಅದನ್ನು ಚಾರ್ಜ್ ಮಾಡಬಹುದಾಗಿದೆ.

ಶಿಯೋಮಿ ಮಿ ಟ್ರೂ ವಾಯರ್‌‌ಲೆಸ್ ಇಯರ್‌ಫೋನ್‌‌2

ಶಿಯೋಮಿ ಮಿ ಟ್ರೂ ವಾಯರ್‌‌ಲೆಸ್ ಇಯರ್‌ಫೋನ್‌‌2

ಶಿಯೋಮಿ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗುವ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಇಯರ್‌ಫೋನ್‌ 3,999 ರೂ. ಬೆಲೆಯನ್ನು ಹೊಂದಿದ್ದು, ಹೊರ-ಇಯರ್ ಫಿಟ್‌ನೊಂದಿಗೆ ಏರ್‌ಪಾಡ್ಸ್ ತರಹದ ಇಯರ್‌ಪೀಸ್ ವಿನ್ಯಾಸವನ್ನು ಹೊಂದಿದೆ. ಇದು 14.2mm ಆಡಿಯೋ ಡ್ರೈವರ್‌ಗಳೊಂದಿಗೆ ಬರುತ್ತದೆ. ಜೊತೆಗೆ ಎಸ್‌ಬಿಸಿ, ಎಎಸಿ ಮತ್ತು ಎಲ್‌ಎಚ್‌ಡಿಸಿ ಬ್ಲೂಟೂತ್ ಕೋಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ 5.0 ಸಂಪರ್ಕ ಹೊಂದಿದೆ. ಇದು 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ನಾಯ್ಸ್ ಶಾಟ್ಸ್ ಎಕ್ಸ್ 5 ಪ್ರೊ

ನಾಯ್ಸ್ ಶಾಟ್ಸ್ ಎಕ್ಸ್ 5 ಪ್ರೊ

ನಾಯ್ಸ್ ಶಾಟ್ಸ್ ಎಕ್ಸ್ 5 ಪ್ರೊ ಸಿಂಗಲ್‌ ಚಾರ್ಜ್‌ನಲ್ಲಿ 8 ಗಂಟೆಗಳ ಬ್ಯಾಟರಿ ಅವಧಿಯೊಂದಿಗೆ ಬರುತ್ತದೆ. ಈ ಆಡಿಯೊ ಉತ್ಪನ್ನವು ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಕ್ವಾಲ್ಕಾಮ್ ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಪ್ಟ್‌ಎಕ್ಸ್ + ಎಎಸಿ ಹೈ-ಫೈ ಆಡಿಯೊ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಐಪಿಎಕ್ಸ್ 7 ವಾಟರ್ ಪ್ರೂಫ್ ರೇಟಿಂಗ್‌ನೊಂದಿಗೆ ಸಹ ಬರುತ್ತದೆ. ಇದು ಪ್ರಸ್ತುತ 4,499 ರೂಗಳಿಗೆ ಲಭ್ಯವಿದೆ.

Best Mobiles in India

Read more about:
English summary
We have made a list of five best TWS wireless earphones under Rs 5,000, which you can consider buying.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X