ಮೈಕ್ರೋಸಾಫ್ಟ್ ವಿಂಡೋಸ್ 10ನ ಐದು ಗೌಪ್ಯ ಫೀಚರ್ಸ್‌ಗಳು!
ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪೆನಿ ಈಗಾಗ್ಲೆ ವಿಂಡೋಸ್ 10ಆಪರೇಟಿಂಗ್ ಸಿಸ್ಟ್ಂ ಅನ್ನ ಪರಿಚಯಿಸಿರೊದು ನಿಮಗೆಲ್ಲಾ ಗೊತ್ತೆ ಇದೆ. 2015 ರಲ್ಲಿ ವಿಂಡೋಸ್ 8 ರಿಂದ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ಗೆ ಬದಲಾದ ನಂತರ ತನ್ನ ಬಳಕೆದಾರರಿಗೆ ಆಗಾ ಹೊಸ ರೀತಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇದೀಗ ವಿಂಡೋಸ್ 10ಒಎಸ್‌ನಲ್ಲಿ ಇನ್ನಷ್ಟು ಫೀಚರ್ಸ್‌ಗಳನ್ನ ಪರಿಚಯಿಸಲು ಮುಂದಾಗಿದೆ.

ಹೌದು, ಸಾಫ್ಟವೇರ್ ಕ್ಷೇತ್ರದಲ್ಲಿ ಮೆಲುಗೈ ಸಾಧಿಸಿರೊ ಮೈಕ್ರೋಸಾಫ್ಟ್ ಕಂಪೆನಿ ತನ್ನ ವಿಂಡೋಸ್10 ಒಎಸ್‌ನಲ್ಲಿ ಇನ್ನಷ್ಟು ಫೀಚರ್ಸ್‌ಗಳನ್ನ ಪರಿಸಯಿಚಲಿದೆ. ಇನ್ನು ಈಗಾಗ್ಲೆ ವಿಂಡೋಸ್ 10os ಎಕೋಸಿಸ್ಟಮ್‌ಗೆ ಸಂಬಂದಿಸಿದಂತೆ ಸ್ಯಾಂಡ್‌ಬಾಕ್ಸ್, ಸರ್ಚ್, ಮತ್ತು ಕೊರ್ಟಾನಾ ಫೀಚರ್ಸ್‌ಗಳನ್ನ ಬಿಡುಗಡೆ ಮಾಡಿದೆ. ಇದೀಗ ವಿಂಡೋಸ್ 10 ಬಳಕೆದಾರರ ಅನುಭವವನ್ನು ಇನ್ನಷ್ಟು ತ್ವರಿತವಾಗಿರಿಸಲು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳನ್ನ ಪರಚಯಿಸಿದೆ. ಹಾಗಾದ್ರೆ ವಿಂಡೋಸ್10ಒಎಸ್‌ನ ಹೊಸ ಫೀಚಸ್‌ಗಳು ಯಾವುವು ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ

ಟಿಪ್ಪಣಿ ಬರೆಯಲು ಧ್ವನಿ ಬಳಸಿ
ಹೌದು ವಿಂಡೋಸ್10os ಪರಿಚಯಿಸಿರೋ ಹೊಸ ಫೀಚರ್ಸ್‌ಗಳಲ್ಲಿ ಈ ವೈಶಿಷ್ಟ್ಯವೂ ಕೂಡ ಒಂದಾಗಿದೆ. ವಿಂಡೋಸ್10ನಲ್ಲಿ ಸರ್ಚ್ ಬಾರ್‌ನ ಪಕ್ಕದಲ್ಲಿರುವ ಸರ್ಕಲ್ ಐಕಾನ್ ಕ್ಲಿಕ್ ಮಾಡುವುದರಿಂದ ವಿಂಡೋಸ್‌ನ ವರ್ಚುವಲ್ ಅಸಿಸ್ಟೆಂಟ್ ಕೊರ್ಟಾನಾ ಸಕ್ರಿಯಗೊಳ್ಳುತ್ತದೆ. ಇದರಿಂದ ನೀವು ಕೊರ್ಟಾನಾಗೆ ಈ ಹಿಂದೆ ಬರೆದಿದ್ದ ಟಿಪ್ಪಣಿಗಳು ಇಲ್ಲವೇ ಈ ಹಿಂದೆ ನಡೆದಿದ್ದ ಘಟನೆಗಳನ್ನ ನೆನಪಿಸಲು ಕೊರ್ಟಾನಾಗೆ ಮೌಖಿಕ ಆಜ್ಞೆಗಳನ್ನು ನೀಡಬಹುದು. ಅಷ್ಟೇ ಅಲ್ಲ ಸಮಯ ಮತ್ತು ಸ್ಥಳೀಯ ಹವಾಮಾನಕ್ಕೆ ಸಂಬಂಧಿಸಿದಂತೆ ಕೊರ್ಟಾನಾಗೆ ಪ್ರಶ್ನೆಗಳನ್ನು ಸಹ ಕೇಳಬಹುದು.

ಹಿಡನ್ ಸ್ಟಾರ್ಟ್ ಮೆನು
ಇನ್ನು ವಿಂಡೋಸ್ 100s ಗೌಪ್ಯವಾದ ಸ್ಟಾರ್ಟ್ ಮೆನು ಹೊಂದಿದ್ದು ಅದು ವಿಂಡೋಸ್‌ನ ವಿದ್ಯುತ್ ಬಳಕೆದಾರರಿಗೆ ಕೆಲವು ಉಪಯುಕ್ತ ಸಾಧನಗಳನ್ನು ಒಳಗೊಂಡಿದೆ. ಇವುಗಳಲ್ಲಿ ಟಾಸ್ಕ್ ಮ್ಯಾನೇಜರ್, ಕಮಾಂಡ್ ಪ್ರಾಂಪ್ಟ್, ಡಿವೈಸ್ ಮತ್ತು ಡಿಸ್ಕ್ ಮ್ಯಾನೇಜ್‌ಮೆಂಟ್ ಸೇರಿದ್ದು. ಹಿಡನ್ ಸ್ಟಾರ್ಟ್ ಮೆನು ಪ್ರವೇಶಿಸಲು, ನೀವು ವಿಂಡೋಸ್ ಬಟನ್ ಮೇಲೆ ರೈಟ್‌ಕ್ಲಿಕ್ ಮಾಡಬೇಕು ಅಥವಾ ಕೀಬೋರ್ಡ್‌ನಲ್ಲಿ ವಿಂಡೋಸ್ ಕೀ + ಎಕ್ಸ್ ಬಳಸುವ ಮೂಲಕ ಶಾರ್ಟ್‌ಕಟ್ ಬಳಸಬಹುದು.ಈ ಫೀಚರ್ಸ್‌ನಿಂದ ವಿದ್ಯುತ್ ಪ್ರವಹಿಸುವುದರ ಬಗ್ಗೆ ಮಾಹಿತಿ ಸಿಗುತ್ತದೆ.

ವಿಂಡೋಸ್ ಸ್ಯಾಂಡ್‌ಬಾಕ್ಸ್
ಈ ಫೀಚರ್ಸ್ ವಿಂಡೋಸ್ 10 ಬಳಕೆದಾರರು ತಮ್ಮ ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಅನ್‌ನೌನ್ ಫೈಲ್‌ಗಳನ್ನ ಹೇಗೆ ರಕ್ಷಿಸಿಕೊಳ್ಳುವುದು ಎಂಬ ಪ್ರಶ್ನೆಗೆ ಪರಿಹಾರವನ್ನ ಓದಗಿಸುತ್ತದೆ. ಪ್ರತ್ಯೇಕ ಡೆಸ್ಕ್‌ಟಾಪ್ ನಲ್ಲಿ ನಿಮಗೆ ಇಷ್ಟವಾದ ಅಥವಾ ಇತರೆ ಅಪ್ಲಿಕೇಶನ್‌ಗಳನ್ನು ರನ್ ಮಾಡಲು ನಿಮಗೆ ಇದು ಸರಳ ಮಾರ್ಗವನ್ನ ನೀಡುತ್ತದೆ. ಅಂದರೆ ಸ್ಯಾಂಡ್‌ಬಾಕ್ಸ್‌ಗೆ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಪ್ರತ್ಯೇಕಿಸಲು ವಿಂಡೋಸ್ ಸ್ಯಾಂಡ್‌ಬಾಕ್ಸ್ ತಾತ್ಕಾಲಿಕ ಡೆಸ್ಕ್‌ಟಾಪ್ ಅನ್ನು ರಚಿಸುತ್ತದೆ. ಒಬ್ಬ ವ್ಯಕ್ತಿಯು ಈ ಮೋಡ್‌ನಲ್ಲಿ ಪರೀಕ್ಷಿಸಲು ಬಯಸಿದ ಅಪ್ಲಿಕೇಶನ್ ಅನ್ನು ಚಲಾಯಿಸಿದ ನಂತರ, ಸಂಪೂರ್ಣ ಸ್ಯಾಂಡ್‌ಬಾಕ್ಸ್ ಅನ್ನು ಅಳಿಸುತ್ತದೆ.

ಪಾಸ್‌ವರ್ಡ್-ಲೆಸ್ ಮೈಕ್ರೋಸಾಫ್ಟ್ ಅಕೌಂಟ್
ಇನ್ನು ಮೈಕ್ರೋಸಾಫ್ಟ್ ಬಳಕೆದಾರರು ಮೈಕ್ರೋಸಾಫ್ಟ್ ಖಾತೆಯಲ್ಲಿ ಕೇವಲ ಫೋನ್ ಸಂಖ್ಯೆಯೊಂದಿಗೆ ವಿಂಡೋಸ್ 10 ಕಂಪ್ಯೂಟರ್ ಅನ್ನು ಹೊಂದಿಸಬಹುದಾಗಿದ್ದು ಸುಲಭವಾಗಿ ಸೈನ್ ಇನ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಈ ಫೀಚರ್ಸ್‌ನಿಂದಾಗಿ ನೀವು ಫೋನ್ ಸಂಖ್ಯೆಯನ್ನು ಬಳಕೆದಾರ ಹೆಸರು ಎಂದು ನಮೂದಿಸಬಹುದಾಗಿದೆ. ಇದರಿಂದ ಲಾಗಿನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೋಡ್ ಅನ್ನು ಬಳಕೆದಾರ ನೀಡಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ನೀವು ವಿಂಡೋಸ್ 10 ಗೆ ಲಾಗ್ ಇನ್ ಮಾಡಿದ ನಂತರ, ಪಾಸ್‌ವರ್ಡ್ ಬಳಸದೆ ನಿಮ್ಮ ಕಂಪ್ಯೂಟರ್‌ಗೆ ಲಾಗ್ ಇನ್ ಮಾಡಲು ನೀವು ವಿಂಡೋಸ್‌ನಲ್ಲಿನ ಹಲೋ ಪಿನ್ ಅನ್ನು ಬಳಸಬಹುದಾಗಿದೆ.

ಸ್ಟಾಪ್ ಬ್ಯಾಕ್‌ಗ್ರೌಂಡ್ ಅಪ್ಲಿಕೇಶನ್
ಇದಲ್ಲದೆ ವಿಂಡೋಸ್ 10ಒಎಸ್ ಬಳಕೆದಾರರು ಮೊಬೈಲ್ ಹಾಟ್‌ಸ್ಪಾಟ್ ಬಳಸುತ್ತಿದ್ದರೆ ಹೆಚ್ಚಿನ ಡೇಟಾವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಸಕ್ರಿಯಗೊಂಡಿರುವ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲು ಬಳಕೆದಾರರಿಗೆ ಅನುಮತಿಸುವ ಫೀಚರ್ಸ್ ಅನ್ನ ನೀಡಿದ್ದು. ವಿಂಡೋಸ್‌ನಲ್ಲಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೋಡಬಹುದಾಗಿದೆ. ಅಲ್ಲದೆ ಯಾವ ಅಪ್ಲಿಕೇಶನ್ ರನ್ನಿಂಗ್ ಇರಬೇಕು ಯಾವುದನ್ನ ನಿಲ್ಲಿಸಬೇಕು ಅನ್ನೊದನ್ನ ಬಳಕೆದಾರ ನಿರ್ಧರಿಸಬಹುದಾಗಿದೆ.


Click it and Unblock the Notifications








