ನೀವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಇರಲೇಬೇಕಾದ ಗ್ಯಾಜೆಟ್ಸ್‌ಗಳು!

|

ಇದು ಡಿಜಿಟಲ್‌ ಜಮಾನ, ಇಲ್ಲಿ ಯಾವುದೇ ಕೆಲಸ ಮಾಡಿದ್ರೂ ಟೆಕ್ನಾಲಜಿ ಆಧಾರಿತವಾಗಿರುತ್ತದೆ. ಅದರಲ್ಲೂ ಟೆಕ್‌ ಜಗತ್ತಿನ ಸಂಸ್ಥೆ ಅಥವಾ ಕಛೇರಿಗಳು ಟೆಕ್ನಾಲಜಿ ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆ ಕಛೇರಿ ಅಂತೆಲ್ಲಾ ಕೆಲಸದ ಒತ್ತಡದಲ್ಲಿ ಮುಳುಗಿ ಹೋಗಿರುವ ಜನತೆ ಯಾಂತ್ರಿಕ ಬದುಕಿನ ನಡುವೆ ಸಿಲುಕಿ ಕೊಂಡಿದ್ದಾರೆ. ಒತ್ತಡದ ಜೀವನದ ನಡುವೆ ಆರಾಮದಾಯಕ ಕೆಲಸ ಕಾರ್ಯನಿರ್ವಹಿಸಲು ಹೆಣಗಾಡುತ್ತಾರೆ. ಆದರೆ ನಿಮಗೆ ಎಷ್ಟೇ ಒತ್ತಡವಿದ್ದರೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಕೆಲಸವ್ನನ ಸುಲಭ ಮಾಡಲು ಹಲವಾರು ವಿಧಾನಗಳಿವೆ.

ಹೌದು

ಹೌದು, ಟೆಕ್ನಾಲಜಿ ಆಧಾರಿತ ಇವತ್ತಿನ ದಿನಗಳಲ್ಲಿ ಯಾವುದೇ ಕೆಲಸವಾದರೂ ಒತ್ತಡದ ನಡುವೆಯೆ ನಡೆಯುತ್ತದೆ. ಆದರೆ ಕೆಲಸದ ಸಂದರ್ಭದಲ್ಲಿ ಒತ್ತಡ ಅಧಿಕವಾದರೆ ಅದರ ಫಲಿತಾಂಶ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಆದರಿಂದ ನೀವು ಕೆಲಸ ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಅಥವಾ ನಿಮ್ಮ ಆಫೀಸ್‌ ಕ್ಯಾಬಿನ್‌ನಲ್ಲಿ ನೀವು ಕೆಲವು ವಿಧಾನಗಳನ್ನ ಅನುಸರಿಸಿದರೆ ನಿಮ್ಮ ಒತ್ತಡದ ಕೆಸಲಗಳನ್ನು ಸುಲಭವಾಗಿಸಿಕೊಳ್ಳಬಹುದಾಗಿದೆ. ಅಷ್ಟಕ್ಕೂ ನಿಮ್ಮ ಕೆಲಸ ಕಾರ್ಯದ ಕಛೇರಿಯಲ್ಲಿ ಇರಲೇಬೇಕಾದ ಕೆಲ ಅತ್ಯುತ್ತಮ ಗ್ಯಾಜೆಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಲಾಜಿಟೆಕ್ ಎಚ್‌ಡಿ ಪ್ರೊ ವೆಬ್‌ಕ್ಯಾಮ್

ಲಾಜಿಟೆಕ್ ಎಚ್‌ಡಿ ಪ್ರೊ ವೆಬ್‌ಕ್ಯಾಮ್

ಲಾಜಿಟೆಕ್ ಎಚ್‌ಡಿ ಪ್ರೊ ವೆಬ್‌ಕ್ಯಾಮ್ ನಿಂದ ನೀವು ನಿಮ್ಮ ಕೆಲಸದ ಸ್ಥಳದಲ್ಲಿದ್ದು ಕೊಂಡು ಕೆಲಸ ಕಾರ್ಯ ನಿರ್ವಹಿಸುತ್ತಲೇ ಇತರರೊಡನೆ ಸ್ಕೈಪ್‌ ಮಾಡುತ್ತ ಮಾತನಾಡಬಹುದಾಗಿದೆ. ಇದರಿಂದ ನಿಮ್ಮ ಮನಸ್ಸಿಗೂ ಹಗುರವಾಗುತ್ತದೆ. ಅಷ್ಟೇ ಯಾಕೆ ಲಾಜಿಟೆಕ್ ಎಚ್ಡಿ ಪ್ರೊ ವೆಬ್‌ಕ್ಯಾಮ್ ಸಿ 920 ಉತ್ತಮ ಡಿವೈಸ್‌ ಆಗಿದ್ದು, ಫುಲ್‌ಹೆಚ್‌ಡಿ 1080p ವೀಡಿಯೊ ಕರೆಗಳನ್ನ ಮಾಡಬಹುದಾಗಿದೆ. ಅಲ್ಲದೆ ಗೂಗಲ್‌ ಹ್ಯಾಂಗ್‌ಔಟ್ಸ್‌ ಮತ್ತು ಇತರ ಎಲ್ಲ ವೀಡಿಯೊ-ಕರೆ ಕ್ಲೈಂಟ್‌ಗಳೊಂದಿಗೆ ಉತ್ತಮ-ಗುಣಮಟ್ಟದ ವೀಡಿಯೊ ಕರೆಗಳಿಗೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ ಈ ಡಿವೈಸ್‌ ಆಟೋಮ್ಯಾಟಿಕ್‌ ನಾಯಿಸ್‌ ರೇಡಿಯೇಷನ್‌ ಮೈಕ್‌ಗಳನ್ನು ಹೊಂದಿದ್ದು ಇತರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಮ್ಮ ಕುಟುಂಬದವರ ಜೊತೆ ಮಾತನಾಡಬಹುದು.

ಯುನಿವರ್ಸಲ್ ಟಚ್ ಸ್ಕ್ರೀನ್ ಪೆನ್

ಯುನಿವರ್ಸಲ್ ಟಚ್ ಸ್ಕ್ರೀನ್ ಪೆನ್

ನಿಮ್ಮ ಡೆಸ್ಕ್‌ನಲ್ಲಿ ನೀವು ಕೂಲ್‌ ಆಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮತ್ತೊಂದು ಉತ್ತಮ ಗ್ಯಾಜೆಟ್‌ ಯುವನಿವರ್ಸಲ್‌ ಟಚ್‌ಸ್ಕ್ರೀನ್‌ ಪೆನ್‌ ಆಗಿದೆ. ಇದು ಎಲ್ಲಾ ಟಚ್‌ಸ್ಕ್ರೀನ್ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಅದು ಆಪಲ್, ಆಂಡ್ರಾಯ್ಡ್ ಅಥವಾ ವಿಂಡೋಸ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಜೊತೆಗೆ ಹೊಂದಿಕೊಳ್ಳುತ್ತದೆ. ನೀವು ಕಾರ್ಯನಿರ್ವಹಿಸುತ್ತಲೇ ಸ್ಕ್ರೀನ್‌ ಪೆನ್‌ ಮೂಲಕದ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನ ಉಪಯೋಗಿಸಬಹುದು. ಇದರಿಂದ ನಿಮ್ಮ ಕೆಲಸದ ಸಂಧರ್ಭದಲ್ಲಿಯೂ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ಹಾಣಿಯಾಗದಂತೆ ನೋಡಿಕೊಳ್ಳಬಹುದು.

ನಾಯಿಸ್‌ ಕ್ಯಾನ್ಸೆಲಿಂಗ್‌ ಹೆಡ್‌ಫೋನ್‌

ನಾಯಿಸ್‌ ಕ್ಯಾನ್ಸೆಲಿಂಗ್‌ ಹೆಡ್‌ಫೋನ್‌

ಕಚೇರಿಗಳು ಅಂದ್ರೆ ಕೇಳಬೇಕ ಅಲ್ಲಿ ಗದ್ದಲ, ಅನ್ನೊದು ಇದ್ದೆ ಇರುತ್ತೆ. ನಿಮ್ಮ ಸುತ್ತಲಿನ ಗದ್ದಲದಿಂದ ನಿಮ್ಮ ಕೆಲಸದ ಮೇಲೆ ನಿಮ್ಮ ಗ್ರಹಿಕೆಗೆ ತೊಂದರೆ ಉಂಟಾಗುತ್ತಿರುತ್ತದೆ. ಇದನ್ನ ತಪ್ಪಿಸಬೇಕೆಂದ್ರೆ ನೀವು ನಾಯಿಸ್‌ ಕ್ಯಾನ್ಸೆಲಿಂಗ್‌ ಹೆಡ್‌ಫೋನ್‌ಗಳನ್ನ ಹೊಂದಿರುವುದು ಉತ್ತಮ ಎನಿಸುತ್ತದೆ. ಈ ಮಾದರಿಯ ಹೆಡ್‌ಫೋನ್‌ಗಳಿಂದ ಸುತ್ತಲಿನ ಗದ್ದಲವನ್ನ ಕಡಿಮೆ ಮಾಡುತ್ತದೆ, ಅಲ್ಲದೆ ನೀವು ನಿಮಗೆ ಹಿತವೆನಿಸುವ ಹಾಡುಗಳನ್ನ ಕೇಳಲು ಅವಕಾಶ ಕಲ್ಪಿಸುತ್ತದೆ. ಇದಿರಂದ ನೀವು ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಮಲ್ಟಿ ಲ್ಯಾಪ್‌ಟಾಪ್ ವಿಂಡೋಸ್

ಮಲ್ಟಿ ಲ್ಯಾಪ್‌ಟಾಪ್ ವಿಂಡೋಸ್

ನೀವು ಕೆಲಸ ನಿರ್ವಹಿಸಬೇಕಾದರೆ ಮಲ್ಟಿ ಲ್ಯಾಪ್‌ಟಾಪ್‌ ವಿಂಡೋಸ್‌ ಇದ್ದರೆ ಉತ್ತಮ, ಇಲ್ಲದೆ ಹೋದರೆ ಒಂದೊಂದು ಕಾರ್ಯಕ್ಕೂ ಅನೇಕ ಲ್ಯಾಪ್‌ಟಾಪ್‌ಗಳನ್ನ ಅವಲಂಬಿಸಬೇಕಾಗಿರುತ್ತದೆ. ಇದರಿಂದ ಒಂದೆಡೆ ಗಮನವನ್ನ ಕೇಂದ್ರಿಕರಿಸಲು ಅಡ್ಡಿಯಾಗುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿ ಉತ್ತಮ ಪಲಿತಾಂಶವನ್ನ ಪಡೆಯುವಲ್ಲಿ ನೀವು ವಿಫಲರಾಗಬೇಕಾಗುತ್ತದೆ. ಈ ಕಾರಣಕ್ಕಾಗಿ ಮಲ್ಟಿ ಲ್ಯಾಪ್‌ಟಾಪ್ ವಿಂಡೋಸ್, ಅಥವಾ ಪ್ಯಾಕ್ಡ್ ಪಿಕ್ಸೆಲ್‌ ಹೊಂದಿದ್ದರೆ ಉತ್ತಮ ಇವು ಯಾವುದೇ ಗಾತ್ರದ ಲ್ಯಾಪ್‌‌ಟಾಪ್‌ಗಳೊಂದಿಗೆ ಕಾರ್ಯನಿರ್ವಹಿಸುವ ರೆಟಿನಾ ರೆಸಲ್ಯೂಶನ್ ಪೋರ್ಟಬಲ್ ಲ್ಯಾಪ್‌ಟಾಪ್ ಮಾನಿಟರ್‌ಗಳನ್ನ ಹೊಂದಿವೆ.

R2-D2 ಯುಎಸ್‌ಬಿ ವ್ಯಾಕ್ಯೂಮ್ ಕ್ಲೀನರ್:

R2-D2 ಯುಎಸ್‌ಬಿ ವ್ಯಾಕ್ಯೂಮ್ ಕ್ಲೀನರ್:

R2-D2 ಯುಎಸ್‌ಬಿ ವ್ಯಾಕ್ಯೂಮ್‌ ಕ್ಲೀನರ್‌ ಇರಬೇಕು, ಇದರಿಂದ ನಿಮ್ಮ ಡೆಸ್ಕ್‌ನಲ್ಲಿ ಉಂಟಾಗುವ ಒತರೆ ತೊಂದರೆಗಳನ್ನ ಹೋಗಲಾಡಿಸಲು ಸುಲಭವಾಗುತ್ತದೆ. ಡೆಸ್ಕ್‌ನಲ್ಲಿನ ದೂಳಿನ ಸಮಸ್ಯೆಗಳಿದ್ದರೆ ನಿಮಗೆ ಕೆಲಸ ಮಾಡಲು ಮೂಡ್‌ ಬರೋದಿಲ್ಲ. ಅದರಿಂದ ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ಹೊಂದಿರುವುದು ಕೂಡ ಉತ್ತಮ ಎನಿಸುತ್ತದೆ.

Most Read Articles
Best Mobiles in India

English summary
From noise-cancelling headphones to multi laptop windows that make it easier to work on three screens at the same time, here’s looking at five gadgets which are most useful for office-goers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X