ಆಪಲ್ ಪ್ರಿಯರು ಫುಲ್ ಖುಷ್! ಒಂದೇ ದಿನ ಐದು ಹೊಸ ಉತ್ಪನ್ನ ಬಿಡುಗಡೆ.. ಯಾರೂ ನಿರೀಕ್ಷಿಸಿರಲ್ಲ ಬಿಡಿ
ಆಪಲ್ ಪ್ರಿಯರು ಖುಷಿ ಪಡಲು ಇದಕ್ಕಿಂತ ಮತ್ತೇನು ಬೇಕು! ಆಪಲ್ ಫೋನ್, ಇಯರ್‌ಬಡ್‌ಗಳು, ಟ್ಯಾಬ್‌ಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್‌ವಾಚ್‌ಗಳು.. ಒಂದೇ ದಿನ ಐದು ಅತ್ಯಾಕರ್ಷಕ ಉತ್ಪನ್ನಗಳು ಲಾಂಚ್. ಹೌದು, ಟೆಕ್ ಜಗತ್ತನ್ನು ಆಳುತ್ತಿರುವ ಈ ದೈತ್ಯ ಕಂಪನಿ ಗ್ರಾಹಕರನ್ನು ಮೆಚ್ಚಿಸುವಲ್ಲಿ ಸದಾ ಮುಂದಿದೆ. ಆದರೂ, ಆಪಲ್ ಸಂಸ್ಥೆ 2025ರಲ್ಲಿ ಬ್ಲ್ಯಾಕ್ ಯೂನಿಟಿ ಸ್ಪೋರ್ಟ್ ಲೂಪ್ ಬ್ಯಾಂಡ್ ಹೊರತುಪಡಿಸಿ ಯಾವುದೇ ಪ್ರಮುಖ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿಲ್ಲ. ಇದೀಗ, ಮುಂದಿನ ತಿಂಗಳಲ್ಲೇ ಐದು ಹೊಸ ಉತ್ಪನ್ನಗಳನ್ನು (Five Apple Products) ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಐಫೋನ್ SE 4
ಐಫೋನ್ SE 4 (iPhone SE 4) ಆಂಟಿ ಡಸ್ಟ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಇದು ಮಾರ್ಚ್ ಅಥವಾ ಮೇ ತಿಂಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಆಪಲ್ ಬಿಡುಗಡೆ ಮಾಡಲಿರುವ ಉತ್ಪನ್ನಗಳಲ್ಲಿ, ಇದು ಹೈಲೈಟ್ ಆಗಿದೆ. 2016 ರಲ್ಲಿ SE ಸರಣಿಯು ಪ್ರಾರಂಭವಾದಾಗಿನಿಂದ, ಯಾವುದೇ ಪ್ರಮುಖ ಅಪ್‌ಗ್ರೇಡ್ ಇರಲಿಲ್ಲ. ಈ ಫೋನ್‌ನಿಂದ ಹೋಮ್ ಬಟನ್ ತೆಗೆದುಹಾಕಲಾಗಿದೆ. ಇದನ್ನು ಐಫೋನ್ 14 ನಂತಹ ಹೊಸ ವಿನ್ಯಾಸದೊಂದಿಗೆ ಪರಿಚಯಿಸಲಾಗುತ್ತದೆ.

ಇದು ಆಪಲ್‌ನ ಸ್ವಂತ ಮೋಡೆಮ್‌ನೊಂದಿಗೆ ಬರುವ ಮೊದಲ ಐಫೋನ್ ಆಗಿದೆ. ಚಾರ್ಜ್ ಮಾಡಲು ಲೈಟ್ನಿಂಗ್ ಪೋರ್ಟ್ ಬದಲಿಗೆ ಯುಎಸ್‌ಬಿ ಸಿ ಪೋರ್ಟ್ ಸಹ ಇರುತ್ತದೆ. ಕಂಪನಿಯು ಇದರ ಹೆಸರನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ. ಐಫೋನ್ SE 4 ಬದಲಿಗೆ, ಇದನ್ನು iPhone 16E ಎಂದು ಹೆಸರಿಸಲಾಗುತ್ತದೆ.
ಐಪ್ಯಾಡ್ 11
ಆಪಲ್‌ನ iPad ಶ್ರೇಣಿಯಲ್ಲಿ ಕಡಿಮೆ ಬೆಲೆಯ ಐಪ್ಯಾಡ್ 11ಗೆ (iPad 11) ಅಪ್‌ಡೇಟ್ ಬರುತ್ತಿದೆ. ಅಪ್‌ಡೇಟ್ ಪಡೆದು ಎರಡು ವರ್ಷಗಳೇ ಕಳೆದಿವೆ. ಈ ಹೊಸ ಐಪ್ಯಾಡ್‌ನ ಪ್ರಮುಖ ಆಕರ್ಷಣೆ ಎಂದರೆ ಇದು ಆಪಲ್ ಇಂಟೆಲಿಜೆನ್ಸ್ (ಆಪಲ್ ಎಐ) ಹೊಂದಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ಅನೇಕ ಪ್ರಯೋಜನವಾಗಲಿದೆ. ಇದು ಹೊಸ ಲುಕ್ ಹೊಂದಿರುವುದರಿಂದ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದರೆ ವೇಗವಾಗಿರುತ್ತದೆ. ಐಪ್ಯಾಡ್ 11, iPhone 15 Pro ನಲ್ಲಿ ಬಳಸಲಾದ A17 Pro ಪ್ರೊಸೆಸರ್ ಹೊಂದಿರುತ್ತದೆ. ಗೇಮಿಂಗ್ ಜೊತೆಗೆ ಮಲ್ಟಿ ಟಾಸ್ಕಿಂಗ್ ಅನ್ನು ಸುಲಭವಾಗಿ ಮಾಡಬಹುದು.
ಮ್ಯಾಕ್‌ಬುಕ್ ಏರ್ M4
ಹೊಸ ಮ್ಯಾಕ್‌ಬುಕ್ ಏರ್ (MacBook Air M4) ಕೂಡ ಬಿಡುಗಡೆಯಾಗುತ್ತಿದೆ. ಇದು M4 ಪ್ರೊಸೆಸರ್ ಹೊಂದಿರುತ್ತದೆ. ಮ್ಯಾಕ್‌ಬುಕ್ ಏರ್ ಇತ್ತೀಚೆಗೆ M2 ಮತ್ತು M3 ಮಾದರಿಗಳಲ್ಲಿ 16GB RAM ಅಪ್‌ಗ್ರೇಡ್ ಪಡೆದುಕೊಂಡಿದೆ. ಈ ಬಾರಿ ಡಿಸ್ಪ್ಲೇ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ವರದಿಯ ಪ್ರಕಾರ, ಈ ಲ್ಯಾಪ್‌ಟಾಪ್ ಮಾರ್ಚ್ ಅಥವಾ ಮೇ ಮೊದಲು ಬಿಡುಗಡೆಯಾಗಲಿದೆ. ಇದರ ಕ್ಯಾಮೆರಾ ಕೂಡ ಚೆನ್ನಾಗಿದೆ. ಆಪಲ್‌ನಿಂದ ಉತ್ತಮ ಮತ್ತು ಶಕ್ತಿಶಾಲಿ ಲ್ಯಾಪ್‌ಟಾಪ್ ಬಯಸುವವರು ಸ್ವಲ್ಪ ದಿನ ಕಾಯಲೇಬೇಕು.
M3 ಐಪ್ಯಾಡ್ ಏರ್
M3 ಐಪ್ಯಾಡ್ ಏರ್ (M3 iPad Air) ಸಹ ಬರುತ್ತಿದೆ. ಇದು M3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಜೊತೆಗೆ ಈ ಐಪ್ಯಾಡ್ ಏರ್‌ಗಾಗಿ ಆಪಲ್ ಹೊಸ ಮ್ಯಾಜಿಕ್ ಕೀಬೋರ್ಡ್ ಸಹ ಬಿಡುಗಡೆ ಮಾಡಬಹುದು. ಅತ್ಯಂತ ಶಕ್ತಿಶಾಲಿ ಕಾರ್ಯಕ್ಷಮತೆ ಹೊಂದಿರುವ ಟ್ಯಾಬ್ಲೆಟ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಆಪಲ್ ಸ್ಮಾರ್ಟ್ ಹೋಮ್ ಡಿಸ್ಪ್ಲೇ
ಆಪಲ್ ಮೊದಲ ಬಾರಿಗೆ ಸ್ಮಾರ್ಟ್ ಡಿಸ್ಪ್ಲೇ (Smart home display) ಬಿಡುಗಡೆ ಮಾಡುತ್ತಿದೆ. ಇದು ಹೋಮ್‌ಪಾಡ್‌ನಂತೆ ಕೆಲಸ ನಿರ್ವಹಿಸುತ್ತದೆ. ಆದರೆ, ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರ ಡಿಸ್ಪ್ಲೇಯು ಸುಮಾರು 7 ಇಂಚು ಇರುತ್ತದೆ.ಇದನ್ನು ಗೋಡೆಯ ಮೇಲೆ ಜೋಡಿಸಬಹುದು ಮತ್ತು ಸ್ಪೀಕರ್‌ಗಳಿಗೆ ಸಹ ಸಂಪರ್ಕಿಸಬಹುದು. ಆಪಲ್‌ನ ಸ್ಮಾರ್ಟ್ ಹೋಮ್ ಉತ್ಪನ್ನಗಳಲ್ಲಿ ಡಿಸ್ಪ್ಲೇಯೊಂದಿಗೆ ಬರುವ ಮೊದಲ ಉತ್ಪನ್ನ ಇದಾಗಿದೆ.
ಆಪಲ್ ಏರ್‌ಟ್ಯಾಗ್, iOS 18.4
ಇದಲ್ಲದೆ, ಹೊಸ ಏರ್‌ಟ್ಯಾಗ್ (Apple AirTag) ಕೂಡ ಬಿಡುಗಡೆಯಾಗಲಿದೆ. ಇದು ಉತ್ತಮ ಅಲ್ಟ್ರಾ ವೈಡ್‌ಬ್ಯಾಂಡ್ ಪ್ರೊಸೆಸರ್ ಹೊಂದಿದೆ ಎಂದು ಹೇಳಲಾಗುತ್ತದೆ. Mac Studio ಮತ್ತು Mac Pro ಈ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವುದಿಲ್ಲ. 2025ರ ಮಧ್ಯದಲ್ಲಿ ಇವು ಬಿಡುಗಡೆಯಾಗುತ್ತವೆ. ಆಪಲ್ ಬಳಕೆದಾರರೂ ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ, ಐಒಎಸ್ 18.4 (iOS 18.4) ಅಪ್ಡೇಟ್ ಮಾರ್ಚ್ ತಿಂಗಳಲ್ಲಿ ಬರಬಹುದು. WWDC24 ನಲ್ಲಿ ಘೋಷಿಸಲಾದ ಆಪಲ್ (Apple) ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಅಂತಿಮವಾಗಿ ಈ ಅಪ್ಡೇಟ್‌ನಲ್ಲಿ ಸೇರಿಸಲಾಗುತ್ತದೆ.


Click it and Unblock the Notifications








