ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?

By Shwetha
|

ಕೆಲವು ದಶಕಗಳಿಂದೀಚೆಗೆ, ಮೊಬೈಲ್ ಫೋನ್‌ಗಳು ಅಸದಳ ವೇಗದಲ್ಲಿ ಅಭಿವೃದ್ಧಿಯನ್ನು ಕಂಡುಕೊಂಡಿವೆ. ನಮಗೆ ಮಾಡಲು ಅಸಾಧ್ಯ ಎಂಬ ಕೆಲಸಗಳನ್ನು ಈ ಅಂಗೈಯಗಲದ ಜಂಗಮವಾಣಿ ತ್ವರಿತ ವೇಗದಲ್ಲಿ ಮಾಡಿ ಮುಗಿಸುತ್ತದೆ. ಅಷ್ಟರ ಮಟ್ಟಿಗೆ ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಬೆಳೆಯುತ್ತಿವೆ.

ಅದಾಗ್ಯೂ ಸ್ಮಾರ್ಟ್‌ಫೋನ್‌ಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರಲ್ಲಿ ಪ್ರಮುಖವಾಗಿರುವಂತಹದ್ದು ಬ್ಯಾಟರಿ ಸಮಸ್ಯೆಯಾಗಿದೆ. ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಬ್ಯಾಟರಿ ಡ್ರೈ ಆಗುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ಸರಳ ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮ್ಮ ಫೋನ್‌ನ ಬ್ಯಾಟರಿ ಸಮಸ್ಯೆಗೆ ಕಡಿವಾಣ ಹಾಕಲಿದೆ.

ಉಚಿತ ಅಪ್ಲಿಕೇಶನ್‌ಗಳ ಮೇಲೆ ನಿಗಾ ಇರಿಸಿ
ನೀವು ಉಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಅದರಲ್ಲೂ ಗೇಮ್ಸ್‌ಗಳನ್ನು ನಿಮ್ಮ ಫೋನ್‌ಗೆ ಹೆಚ್ಚಾಗಿ ಹಾಕಿಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಇದರ ಬಗ್ಗೆ ಎಚ್ಚರವಹಿಸಿ. ಇಂತಹ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ನುಂಗಿ ಹಾಕುವ ಸಾಧ್ಯತೆ ಹೆಚ್ಚಿರುತ್ತದೆ.

ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?

ಅಪ್ಲಿಕೇಶನ್ ಆಫ್ ಮಾಡಿ
ನೀವು ಅಪ್ಲಿಕೇಶನ್‌ಗಳನ್ನು ಬಳಸುತ್ತಿಲ್ಲ ಎಂದರೆ ಅವುಗಳು ನಿಮ್ಮ ಬ್ಯಾಟರಿ ಶಕ್ತಿಯನ್ನು ಬಳಸುತ್ತಿಲ್ಲ ಎಂಬರ್ಥವಲ್ಲ. ಬ್ಯಾಟರಿ ಪೋಲಾಗುವುದನ್ನು ತಟೆಗಟ್ಟಲು ನೀವು ಈ ಅಪ್ಲಿಕೇಶನ್‌ಗಳನ್ನು ಆಫ್ ಮಾಡುವುದು ಅತೀ ಅವಶ್ಯಕವಾಗಿದೆ.

ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?

ಸಿಗ್ನಲ್
ನಿಮ್ಮ ಪ್ರದೇಶದಲ್ಲಿರುವ ಸಿಗ್ನಲ್ ಸಾಮರ್ಥ್ಯ ಕಡಿಮೆಯಾದಲ್ಲಿ ಫೋನ್ ಹೆಚ್ಚುವರಿ ಬ್ಯಾಟರಿಯನ್ನು ಖರ್ಚು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?

ಜಿಪಿಎಸ್ ಆಫ್ ಮಾಡಿ
ಜಿಪಿಎಸ್ ಆನ್ ಮಾಡಿಟ್ಟುಕೊಳ್ಳುವುದೂ ಕೂಡ ಫೋನ್‌ನ ಬ್ಯಾಟರಿಯನ್ನು ಶೀಘ್ರವೇ ನುಂಗಿ ಹಾಕುತ್ತದೆ. ಆದ್ದರಿಂದ ಜಿಪಿಎಸ್ ವ್ಯವಸ್ಥೆಯನ್ನು ಟರ್ನ್ ಆಫ್ ಮಾಡಿ.

ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?

ನೀವೇನನ್ನು ಮಾಡುತ್ತಿದ್ದೀರಿ ಎಂಬುದನ್ನು ಆಲೋಚಿಸಿ
ನಿಮ್ಮ ಕೈಯಲ್ಲಿರುವ ಫೋನ್ ಬಗ್ಗೆ ಆಲೋಚಿಸಿ. ನೀವು ಹೆಚ್ಚು ಗುಣಮಟ್ಟದ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಇದು ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ ಎಂಬುದನ್ನು ಮನಸ್ಸಿನಲ್ಲಿರಿಸಿಕೊಳ್ಳಿ.

ಫೋನ್‌ನ ಬ್ಯಾಟರಿ ಸಮಸ್ಯೆ ನೀಗಿಸುವುದು ಹೇಗೆ?
Best Mobiles in India

English summary
This article tells about five Reasons Your Smartphone Battery Runs Out Quickly.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X