ಭಾರತದಲ್ಲಿ ಇಂದಿನಿಂದ ಫ್ಲಾಗ್‌ಶಿಪ್ iQOO 15 ಸೇಲ್: ಇಲ್ಲಿದೆ ಸಂಪೂರ್ಣ ಮಾಹಿತಿ!
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಫ್ಲಾಗ್‌ಶಿಪ್ iQOO 15 ಇಂದು (ಡಿಸೆಂಬರ್ 1) ದೇಶದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಬಂದಿದೆ. ದೇಶದಲ್ಲಿ ಕಳೆದ ನವೆಂಬರ್ 26 ರಂದು ಫ್ಲಾಗ್‌ಶಿಪ್ iQOO 15 ಸ್ಮಾರ್ಟ್‌ಫೋನನ್ನು ಭರ್ಜರಿಯಾಗಿ ಪರಿಚಯಿಸಲಾಗಿತ್ತು. iQOO ಅಭಿಮಾನಿಗಳ ನಿರೀಕ್ಷೆಯಂತೆಯೇ, ದೇಶದಲ್ಲಿ Qualcommನ ಅತ್ಯಂತ ಶಕ್ತಿಶಾಲಿ 3nm Snapdragon 8 Elite Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವ(ಬ್ಯಾಂಕ್ ಕೊಡುಗೆಗಳು ಸೇರಿದಂತೆ) ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ iQOO 15 ಫೋನ್ ಕಾಲಿಟ್ಟಿತ್ತು. ಇದೀಗ ಈ ಫೋನ್ ಖರೀದಿಗೆ ಲಭ್ಯವಾಗಿದೆ. ಹಾಗಾದರೆ, iQOO 15 ಸ್ಮಾರ್ಟ್‌ಫೋನಿನ ಬೆಲೆಗಳು ಎಷ್ಟು?, ಖರೀದಿಗೆ ಒದಗಿಸಲಾದ ಸಂಪೂರ್ಷ ಕೊಡುಗೆಗಳು ಯಾವುವು?, ಮತ್ತು ಈ ಫೋನ್ ಫೀಚರ್ಸ್ ಹೇಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
iQOO 15: ಬೆಲೆ, ಆಫರ್ಸ್ ಮತ್ತು ಲಭ್ಯತೆ
ದೇಶದಲ್ಲಿ iQOO 15 ಸ್ಮಾರ್ಟ್‌ಫೋನಿನ 12GB RAM + 256GB ಸ್ಟೋರೇಜ್ ಮೂಲ ಮಾದರಿಯ ಬೆಲೆ ₹72,999 ಗಳಾಗಿವೆ. ಹಾಗೆಯೇ, ಇದರ ಹೈ ಎಂಡ್ 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ ₹79,999 ಗಳಾಗಿವೆ. ಆದರೆ, Axis, HDFC ಮತ್ತು ICICI ಬ್ಯಾಂಕ್ ಗ್ರಾಹಕರು ತ್ಮ ಕಾರ್ಡ್‌ಗಳ ಮೂಲಕ ₹7,000 ರ ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದು. ಇದರಿಂದ ಪರಿಣಾಮಕಾರಿಯಾಗಿ ಈ ಎರಡೂ ಮಾದರಿ ಫೋನ್‌ಗಳನ್ನು ಕ್ರಮವಾಗಿ ₹64,999 ಮತ್ತು ₹71,999 ರೂ.ಗಳಿಗೆ ಖರೀದಿಸಬಹುದು.
ಇದರ ಜೊತೆಗೆ, ₹7,000 ವಿನಿಮಯ ಬೋನಸ್ (ಹಳೆಯ ಫೋನ್‌ನ ಸ್ಥಿತಿ ಮತ್ತು ಮಾದರಿಯ ಆಧಾರದ ಮೇಲೆ ಬದಲಾಗುತ್ತದೆ), ₹1,000 ಹೆಚ್ಚುವರಿ ಡಿಸ್ಕೌಂಟ್ ಕೂಪನ್ ಮತ್ತು 24 ತಿಂಗಳುಗಳವರೆಗೆ no-cost EMI ಸೌಲಭ್ಯದಂತಹ ಕೊಡುಗೆಗಳನ್ನು ನೀಡಲಾಗಿದೆ. ಗ್ರಾಹಕರು ಈ ಎಲ್ಲಾ ಕೊಡುಗೆಗಳೊಂದಿಗೆ iQOO 15 ಅನ್ನು Amazon, iQOO e-Store, Vivo Exclusive Stores ಹಾಗೂ ದೇಶಾದ್ಯಂತದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ Alpha (ಕಪ್ಪು) ಮತ್ತು Legend (ಬಿಳಿ) ಎಂಬ ಎರಡು ಬಣ್ಣಗಳಲ್ಲಿ ಖರೀದಿಸಬಹುದು.
iQOO 15: ವಿನ್ಯಾಸ, ಫೀಚರ್ಸ್ ಮತ್ತು ವೈಶಿಷ್ಟ್ಯಗಳು
iQOO 15 ಫೋನ್ ಬಲಿಷ್ಟ ಅಲ್ಯೂಮಿನಿಯಂ ಫ್ರೇಮ್ ಮತ್ತು RGB LED ಸ್ಟ್ರಿಪ್‌ನಿಂದ ಎದ್ದು ಕಾಣುವ ವಿಶಿಷ್ಟವಾದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಪ್ರೀಮಿಯಂ, ಫ್ಲಾಟ್ ವಿನ್ಯಾಸವನ್ನು ಹೊಂದಿದೆ. ಆಲ್ಫಾ ಬ್ಲಾಕ್ ಆವೃತ್ತಿಯು ಫೈಬರ್‌ಗ್ಲಾಸ್ ಹಿಂಭಾಗದ ಫಲಕವನ್ನು ಹೊಂದಿದೆ ಮತ್ತು ಲೆಜೆಂಡ್ ಬಿಳಿ ಆವೃತ್ತಿಯು ಗಾಜಿನ ಹಿಂಭಾಗವನ್ನು ಹೊಂದಿದೆ. ಇದರ ಹಿಂದಿನ iQOO 13 ಗಿಂತ ಹೋಲಿಸಿದರೆ ಫ್ಲಾಟ್ ಮತ್ತು ಸ್ವಲ್ಪ ಹೆಚ್ಚು ದುಂಡಾದ ಮೂಲೆಗಳನ್ನು ಹೊಂದಿದೆ. ಟ್ರಿಪಲ್-ರಿಯರ್-ಕ್ಯಾಮೆರಾ ಸೆಟಪ್ ಅನ್ನು ಹಿಂಭಾಗದಲ್ಲಿ ಚದರ-ಆಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ, ಅದು ಅತಿಯಾಗಿ ದೊಡ್ಡದಾಗಿಯೂ ಇಲ್ಲ. ಇದರಲ್ಲಿನ ಕ್ಯಾಮೆರಾ ಡೆಕೊವನ್ನು ಸುತ್ತುವರೆದಿರುವ ಮತ್ತು ಗೇಮಿಂಗ್‌ನಂತಹ ನಿರ್ದಿಷ್ಟ ಸನ್ನಿವೇಶಗಳಲ್ಲಿ ಬೆಳಗುವ ಗಮನಾರ್ಹ RGB LED ಲೈಟ್ ಒಂದು ಗಮನಾರ್ಹ ವಿನ್ಯಾಸ ಅಂಶವಾಗಿದೆ.

ಡಿಸ್ಪ್ಲೇ ವಿಭಾಗದಲ್ಲಿ, iQOO 15 ಫೋನ್ 144Hz ವರೆಗೆ ರಿಫ್ರೆಶ್ ರೇಟಗ, 2K ರೆಸಲ್ಯೂಶನ್, 508 ppi ಪಿಕ್ಸೆಲ್ ಸಾಂದ್ರತೆ ಮತ್ತು 6,000 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ 6.85-ಇಂಚಿನ ಸ್ಯಾಮ್‌ಸಂಗ್ M14 8T LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 1Hz ಆಲ್‌ವೇಸ್ ಆನ್ ಡಿಸ್ಪ್ಲೇ ವೈಶಿಷ್ಟ್ಯವನ್ನು ಸಹ ಪಡೆದಿದೆ. ಈ ಫೋನಿನ ಪರದೆಯು ಆಂಟಿ-ರಿಫ್ಲೆಕ್ಟಿವ್ ಫಿಲ್ಮ್ ಮತ್ತು ವೆಟ್ ಫಿಂಗರ್ ಕಂಟ್ರೋಲ್‌ನೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಕರೆ ಮಾಡಲು, ಫೋಟೋಗಳನ್ನು ಕ್ಲಿಕ್ ಮಾಡಲು, ವೀಡಿಯೊಗಳನ್ನು ಶೂಟ್ ಮಾಡಲು ಮತ್ತು ಒದ್ದೆಯಾದ ಅಥವಾ ಬೆವರುವ ಕೈಗಳಿಂದ ಗೇಮ್‌ಗಳನ್ನು ಆಡಲು ಅನುವು ಮಾಡಿಕೊಡುತ್ತದೆ.
ಕಾರ್ಯಕ್ಷಮತೆಗಾಗಿ,QOO 15 ಅನ್ನು ಕ್ವಾಲ್ಕಾಮ್‌ನ ಆಕ್ಟಾ ಕೋರ್ 3nm ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್, ಅಡ್ರಿನೊ GPU ನೊಂದಿಗೆ ಜೋಡಿಸಲಾಗಿದೆ, ಮತ್ತು ಇವು16GB ವರೆಗೆ LPDDR5x RAM ಮತ್ತು 512GB ವರೆಗೆ UFS4.1 ಆಂತರಿಕ ಸಂಗ್ರಹಣೆಯಿಂದ ಸಂಯೋಜಿಸಲ್ಪಟ್ಟಿದೆ. ಕಂಪೆನಿ ಹೇಳಿಕೊಂಡಿರುವಂತೆ, ಈ ಫೋನ್ AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಫೋನ್ 4.18 ಮಿಲಿಯನ್ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕಂಪೆನಿಯ ಪ್ರಕಾರ, ಈ ಫೋನ್ 23 ಪ್ರತಿಶತ ಸುಧಾರಿತ GPU ಕಾರ್ಯಕ್ಷಮತೆ, 25 ಪ್ರತಿಶತ ಸುಧಾರಿತ ರೇ-ಟ್ರೇಸಿಂಗ್, ವರ್ಧಿತ 20 ಪ್ರತಿಶತ ಸಿಂಗಲ್ ಕೋರ್ ಕಾರ್ಯಕ್ಷಮತೆ ಮತ್ತು 17 ಪ್ರತಿಶತ ಸುಧಾರಿತ ಮಲ್ಟಿ ಕೋರ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಇಷ್ಟೇ ಅಲ್ಲದೆ, ಫೋನ್ 37 ಪ್ರತಿಶತದಷ್ಟು ಉತ್ತಮ NPU ಕಾರ್ಯಕ್ಷಮತೆಯನ್ನು ಸಹ ನೀಡುತ್ತದೆ. ಇದರ ಉಷ್ಣ ಶಕ್ತಿಯನ್ನು ಕಾಪಾಡಿಕೊಳ್ಳಲು, iQOO 15 ಫೋನ್ 8K VC ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, 8,000 ಚದರ ಮಿಮೀ ಶಾಖ ಪ್ರಸರಣ ಪ್ರದೇಶವನ್ನು ಹೊಂದಿದೆ. ಇದು ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅಡಿಯಲ್ಲಿ ಇರಿಸಲಾದ ಹೊಸ ಮಾನ್ಸ್ಟರ್ ಹ್ಯಾಲೊ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಒಳಗೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, iQOO 15 ಫೋನ್ Android 16 ಆಧಾರಿತ OriginOS 6 ಮೇಲೆ ರನ್ ಆಗುತ್ತದೆ. ಕಂಪನಿ 5 ವರ್ಷಗಳ Android ಅಪ್‌ಗ್ರೇಡ್ ಮತ್ತು 7 ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ಭರವಸೆ ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, iQOO 15 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಸೋನಿ IMX921 ಪ್ರಾಥಮಿಕ ಶೂಟರ್‌ನಿಂದ 1/1.56-ಇಂಚಿನ ಸಂವೇದಕ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ಬಂದಿದೆ. ಜೊತೆಗೆ ಈ ಫೋನ್ 50-ಮೆಗಾಪಿಕ್ಸೆಲ್ ಸೋನಿ IMX882 1/1.95-ಇಂಚಿನ ಟೆಲಿಫೋಟೋ ಪೆರಿಸ್ಕೋಪ್ ಕ್ಯಾಮೆರಾವನ್ನು 3x ಆಪ್ಟಿಕಲ್ ಜೂಮ್, 3.7x "ಲಾಸ್‌ಲೆಸ್ ಜೂಮ್" ಮತ್ತು 10x ಜೂಮ್ ಸಾಮರ್ಥ್ಯಗಳನ್ನು ಹೊಂದಿದೆ, ಹಾಗೂ 1/2.76-ಇಂಚಿನ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಜೋಡಿಯಾಗಿದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ದೊರೆಯುತ್ತದೆ, ಇದು ಕೂಡ 4K@60fps ವೀಡಿಯೋ ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ.
ಈ ಫೋನ್ AI ವಿಷುಯಲ್ ಮತ್ತು ರಿಫ್ಲೆಕ್ಷನ್ ಎರೇಸ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ಸ್ಟ್ಯಾಂಡರ್ಡ್, ಪೋರ್ಟ್ರೇಟ್ ಮತ್ತು ಲ್ಯಾಂಡ್‌ಸ್ಕೇಪ್ ಕ್ಯಾಮೆರಾ ಮೋಡ್‌ಗಳಲ್ಲಿ ಲಭ್ಯವಿದೆ. ಬ್ಯಾಟರಿ ವಿಭಾಗದಲ್ಲಿ, iQOO 15 ಫೋನ್‌ನಲ್ಲಿ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ, ಇದು 100W ವೈರ್ಡ್ ಹಾಗೂ 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ನ್ನು ಬೆಂಬಲಿಸುತ್ತದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 + IP69 ರೇಟಿಂಗ್ ಸುರಕ್ಷತೆ ಇದೆ. ಇನ್ನು ಆಲ್ಫಾ ಬ್ಲ್ಯಾಕ್ ಮಾದರಿ 216.2 ಗ್ರಾಂ ತೂಕವಿದ್ದು, ಲೆಜೆಂಡ್ ವೇರಿಯಂಟ್ 220 ಗ್ರಾಂ ತೂಕವನ್ನು ಹೊಂದಿದೆ.


Click it and Unblock the Notifications








