ಬದಲಾಗುತ್ತಿರುವ ಫ್ಲಾಪಿ ಬರ್ಡ್ ಹೊಸ ನವೀಕರಣದತ್ತ

Posted By:

ಫ್ಲಾಪಿ ಬರ್ಡ್ ಆಂಡ್ರಾಯ್ಡ್‌ನ ಈ ಸುಂದರ ಗೇಮ್ ಅನ್ನು ಆಡದವರು ಯಾರಿದ್ದಾರೆ ಹೇಳಿ? ಮಜವಾಗಿರುವ ಈ ಗೇಮ್ ನಿಜಕ್ಕೂ ಆಟದ ತಾಜಾತನವನ್ನು ಹೆಚ್ಚಿಸಿ ಮನಕ್ಕೆ ಮುದವನ್ನು ನೀಡಿತ್ತು. ಆದರೆ ಕಾಲಕ್ರಮೇಣ ಬೇರೆ ಹೆಚ್ಚಿನ ಆಧುನಿಕ ಆಟಗಳು ಫ್ಲಾಪಿ ಬರ್ಡ್ ಮೂಲೆಗುಂಪಾಗಲು ಕಾರಣವಾಗಿತ್ತು.

ಹಲವಾರು ಹೊಸ ಹಾಗೂ ನವೀನ ಮಾದರಿಯ ಆಟಗಳ ಕಾರಣ ಫ್ಲಾಪಿ ಬರ್ಡ್ ಆಟ ಹಳೆಯದಾಯಿತು. ಆದರೆ ಇದೇ ಆಟವನ್ನು ಹೊಸದಾಗಿ ಪ್ರಾರಂಭಿಸುವ ಒಂದು ಸಂತಸಕರ ಸುದ್ದಿಯನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಫೆಬ್ರವರಿಯಲ್ಲೇ ಆಪ್ ಸ್ಟೋರ್‌ನಿಂದ ಹಿಂದಕ್ಕೆ ಪಡೆಯಲಾದ ಈ ಆಟವನ್ನು ಆಗಸ್ಟ್‌ನಲ್ಲಿ ಪುನಃ ಹೊಸದಾಗಿ ಪ್ರಾರಂಭಿಸಲಾಗುತ್ತದೆ.

ಬದಲಾಗುತ್ತಿರುವ ಫ್ಲಾಪಿ ಬರ್ಡ್ ಹೊಸ ನವೀಕರಣದತ್ತ

ಇದು ಮುಂದಕ್ಕೆ ಹೆಚ್ಚಿನ - ಪ್ಲೇಯರ್ ಸಾಮರ್ಥ್ಯಗಳನ್ನು ಹೊಂದಲಿದ್ದು ನಿಮಗೆ ಆಟದ ಮಜವನ್ನು ಇನ್ನಷ್ಟು ಹೆಚ್ಚು ನೀಡಲಿದೆ. ಮಲ್ಟಿ ಪ್ಲೇಯರ್ ಗೇಮ್ ಆಗಿ ನಿಮ್ಮ ಮನರಂಜಿಸಲಿರುವ ಈ ಆಟ ಆಡುವವರಲ್ಲಿ ಹೆಚ್ಚಿನ ಥ್ರಿಲ್ ಅನ್ನು ಉಂಟು ಮಾಡಲಿದೆ. ಆಪಲ್ ಹಾಗೂ ಆಂಡ್ರಾಯ್ಡ್ ಸ್ಟೋರ್‌ಗಳಿಂದ ಈ ಆಟವನ್ನು ಡೌನ್‌ಲೋಡ್ ಮಾಡಿ ಅದನ್ನು ನೂತನ ನವೀಕರಣಕ್ಕೆ ಒಳಪಡಸಲಾಗುತ್ತಿದೆ.

ಅಂತೂ ಇಂತು ಬಳಕೆದಾರರ ಕೈ ಸೇರಲಿರುವ ಫ್ಲಾಪಿ ಬರ್ಡ್ ಇನ್ನಷ್ಟು ಮನರಂಜನೆಯನ್ನು ಆಟದ ಥ್ರಿಲ್ ಅನ್ನು ಅವರಿಗೆ ನೀಡಲಿದೆ. ಹಾಗಿದ್ದರೆ ಇನ್ನು ಫ್ಲಾಪಿ ಬರ್ಡ್ ಗೇಮ್ ಅನ್ನು ನಿಮಗೆ ನೇರವಾಗಿ ಟಿವಿಯಲ್ಲಿ ಆಡಿ ಮನರಂಜನೆಯನ್ನು ಪಡೆದುಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot