Subscribe to Gizbot

ನಾಳೆಯಿಂದ ಫ್ಲಿಪ್‌ಕಾರ್ಟ್ 'ಮೊಬೈಲ್ಸ್ ಬೊನಾನ್ಜ ಸೇಲ್'!..ಎಲ್ಲರೂ ಆನ್‌ಲೈನ್‌ನಲ್ಲಿ ಕ್ಯೂ ನಿಲ್ಲೋದು ಖಂಡಿತ!!

Written By:

ಪ್ರಖ್ಯಾತ ಆನ್‌ಲೈನ್ ಶಾಪಿಂಗ್ ಜಾಲತಾಣ ಸಂಸ್ಥೆ ಫ್ಲಿಪ್‌ಕಾರ್ಟ್ 2018ನೇ ಹೊಸ ವರ್ಷದ ಸಂಭ್ರಮಕ್ಕೆ ಮತ್ತೊಂದು ಮೆಗಾ ಸೇಲ್ ಅನ್ನು ಘೋಷಿಸಿದೆ.! ಹೊಸ ವರ್ಷವನ್ನು ನೂತನ ಸ್ಮಾರ್ಟ್‌ಫೋನ್‌ ಖರೀದಿಸುವ ಮೂಲಕ ಸ್ವಾಗತಿಸಲು ಫ್ಲಿಪ್‌ಕಾರ್ಟ್ "ಮೊಬೈಲ್ಸ್ ಬೊನಾನ್ಜ ಸೇಲ್' ಅನ್ನು ಆರಂಭಿಸಿದೆ.!!

ಜನವರಿ ಮೂರರಿಂದ ಅಂದರೆ ನಾಳೆಯಿಂದ ಫ್ಲಿಪ್‌ಕಾರ್ಟ್ ''ಮೊಬೈಲ್ಸ್ ಬೊನಾನ್ಜ ಸೇಲ್'' ಆರಂಭವಾಗಲಿದ್ದು, ಜನವರಿ 5 ರಂದು ಕೊನೆಗೊಳ್ಳುವ ಈ ಆಫರ್‌ನಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ.! ಹಾಗಾದರೆ, ಯಾವ ಯಾವ ಸ್ಮಾರ್ಟ್‌ಪೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಲಭ್ಯವಿದೆ? ಇತರೆ ಆಫರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ ಜಿ 5 ಪ್ಲಸ್!!

ಮೋಟೋ ಜಿ 5 ಪ್ಲಸ್!!

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೋಟೋ ಜಿ 5 ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ 4GB RAM ವೆರಿಯಂಟ್ ಸ್ಮಾರ್ಟ್‌ಫೋನ್ ಅನ್ನು ಕೇವಲ 9,999 ರೂಪಾಯಿಗಳಿಂದ ಮಾರಾಟಕ್ಕಿಡಲಾಗುತ್ತಿದೆ.!! ಪ್ರಸ್ತುತ 13,999 ರೂ ಬೆಲೆ ಹೊಂದಿರುವ ಮೋಟೋ ಜಿ 5 ಪ್ಲಸ್ ಫೋನ್ ಮೇಲೆ 4000ರೂ. ಡಿಸ್ಕೌಂಟ್ಸ್ ನೀಡುತ್ತಿರುವುದು ಆಶ್ಚರ್ಯವೇ ಸರಿ.!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7!!

ಪ್ರಸ್ತುತ 33 ಸಾವಿರಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7 ಫೋನ್ ಮೇಲೆ ಬೊನಾನ್ಜ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್ಸ್ ನೀಡಲಾಗಿದೆ.!! ಈ ಸೇಲ್‌ನಲ್ಲಿ ಕೇವಲ 26,990 ರೂಪಾಯಿಗಳಿಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7 4GB ವೆರಿಯಂಟ್ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ.!!

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಗೂಗಲ್ ಪಿಕ್ಸೆಲ್ 2, ಪಿಕ್ಸೆಲ್ 2 ಎಕ್ಸ್ಎಲ್!!

ಗೂಗಲ್ ಪಿಕ್ಸೆಲ್ 2, ಪಿಕ್ಸೆಲ್ 2 ಎಕ್ಸ್ಎಲ್!!

ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬೊನಾನ್ಜ ಸೇಲ್‌ನಲ್ಲಿ ಭಾರೀ ಈ ಡಿಸ್ಕೌಂಟ್ಸ್ ನೀಡಲಾಗುತ್ತಿದೆ. ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಫೋನ್ ಬೆಲೆಗಳು 39,999 ರೂಪಾಯಿಗಳಿಂದ ಆರಂಭವಾಗಲಿದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 8,000. ರೂ. ಹೆಚ್ಚು ಡಿಸ್ಕೌಂಟ್ಸ್ ನೀಡಲಾಗಿದೆ.!!

ಶಿಯೋಮಿ ಮೈ ಎ1 ಮೇಲೆ ಡಿಸ್ಕೌಂಟ್ಸ್!!

ಶಿಯೋಮಿ ಮೈ ಎ1 ಮೇಲೆ ಡಿಸ್ಕೌಂಟ್ಸ್!!

ಭಾರತದಲ್ಲಿ ಪ್ರಸ್ತುತ ಟ್ರೆಂಡ್‌ನಲ್ಲಿರುವ ಸ್ಮಾರ್ಟ್‌ಫೋನ್ ಶಿಯೋಮಿ ಮೈ ಎ1 ಮೇಲೆ ಡಿಸ್ಕೌಂಟ್ಸ್ ನೀಡಲಾಗಿದೆ. ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾನ್ಜ ಸೇಲ್‌ನಲ್ಲಿ ಮೈ ಎ1 ಫೋನ್ ಕೇವಲ 12,999 ರೂ.ಗಳಿಗೆ ಲಭ್ಯವಿದ್ದು, 1000 ರೂ. ಇನ್‌ಸ್ಟಂಟ್ ಡಿಸ್ಕೌಂಟ್ಸ್ ನೀಡಲಾಗಿದೆ.!!

ರೆಡ್ಮಿ ನೋಟ್ 4 (4 ಜಿಬಿ)

ರೆಡ್ಮಿ ನೋಟ್ 4 (4 ಜಿಬಿ)

ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಮತ್ತೊಂದು ಅದ್ಬುತ ಫೋನ್ 4 ಜಿಬಿ ವೆರಿಯಂಟ್ ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್ ಕೇವಲ 10,999 ರೂಪಾಯಿಗಳಿಗೆ ಮಾರಟಕ್ಕಿದೆ.!! ಮೋಟೋ ಜಿ 5 ಪ್ಲಸ್ ಮತ್ತು ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇದು ಅತ್ಯುತ್ತಮ ಸಮಯ ಆಗಿದೆ.!!

ಓದಿರಿ:ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart 2018 Mobiles Bonanza Sale: Discounts on Moto G5 Plus, Mi A1, Pixel 2, Redmi Note 4 and more. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot