Home
ಸುದ್ದಿಜಾಲ

ಹಬ್ಬದ ಮೂಡ್‌ ಹೆಚ್ಚಿಸಲು ಅಮೆಜಾನ್, ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಸೇಲ್..!

ಹಬ್ಬಗಳ ಸಮಯ ಆರಂಭವಾಗುತ್ತಿದೆ. ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ಆಫರ್ ಗಳ ಸುರಿಮಳೆ ಆರಂಭವಾಗುವ ಮತ್ತೊಂದು ಸಮಯ ಹತ್ತಿರವಾಗುತ್ತಿದೆ. ಹಲವು ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಗಳು, ಹೊಸ ಹೊಸ ವಸ್ತುಗಳ ಬಿಡುಗಡೆ ಸೇರಿದಂತೆ ಗ್ರಾಹಕರ ಮನಗೆಲ್ಲುವ ಮತ್ತು ಹಬ್ಬಕ್ಕೆ ಮೆರುಗು ನೀಡುವ ಶಾಪಿಂಗ್ ಮಾಡಲು ಸದವಕಾಶ ಲಭ್ಯವಾಗುತ್ತಿದೆ.

ಹೌದು ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಎರಡರಲ್ಲೂ ಕೂಡ ದೊಡ್ಡ ದೊಡ್ಡ ರಿಯಾಯಿತಿ ಸೇಲ್, ನೋ ಕಾಸ್ಟ್ ಇಎಂಐ ಆಯ್ಕೆ ಮತ್ತು ಇತರೆ ಹಲವು ಆಫರ್ ಗಳು ಹಬ್ಬದ ಸೀಸನ್ ಗಾಗಿ ತೆರೆದುಕೊಳ್ಳುತ್ತಿದೆ. ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಆಯ್ಕೆಗಳು ಈ ಎರಡೂ ವೆಬ್ ಸೈಟ್ ಗಳಲ್ಲೂ ಲಭ್ಯವಿದೆ.

ಹಬ್ಬದ ಮೂಡ್‌ ಹೆಚ್ಚಿಸಲು ಅಮೆಜಾನ್, ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಸೇಲ್..!

ಫ್ಲಿಪ್ ಕಾರ್ಟ್ ಈಗಾಗಲೇ ತನ್ನ ಬಿಗ್ ಬಿಲಿಯನ್ ಡೇ ಸೇಲ್ ನ ದಿನಾಂಕವನ್ನು ಪ್ರಕಟಿಸಿದೆ. ಅದುವೇ ಅಕ್ಟೋಬರ್ 10 ರಿಂದ 14. ಆದರೆ ಅಮೇಜಾನ್ ಇನ್ನೂ ದಿನಾಂಕವನ್ನು ಪ್ರಕಟಿಸಿಲ್ಲ ಆದರೆ ಅಮೇಜಾನ್ ಕೂಡ ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಗ್ರೇಟ್ ಇಂಡಿಯನ್ ಸೇಲ್ ನಡೆಸುವುದು ಖಚಿತವಾಗಿದೆ.

ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್

ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್

5 ದಿನದ ಈ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಹೆಚ್ಚು ಕಡಿಮೆ ಎಲ್ಲಾ ಮಾಸ್ಟರ್ ಕಾರ್ಡ್ ಗಳ ಜೊತೆ ಕೈಜೋಡಿಸಿದೆ ಮತ್ತು ಬೇರೆಬೇರೆ ಪೇಮೆಂಟ್ ಆಯ್ಕೆಗಳನ್ನು ನೀಡುತ್ತಿದೆ. ಸೇಲ್ ನಲ್ಲಿ ಪ್ರತಿದಿನವೂ ವಿಭಿನ್ನ ಶಾಪಿಂಗ್ ಆಯ್ಕೆಗಳಿರುತ್ತದೆ.

ಅಕ್ಟೋಬರ್ 10 ರಿಂದ 14

ಅಕ್ಟೋಬರ್ 10 ರಿಂದ 14

ಫ್ಯಾಷನ್ ಪ್ರೊಡಕ್ಟ್ ಗಳಾದ ಬಟ್ಟೆಗಳು, ಚಪ್ಪಲಿಗಳು, ವಾಚ್ ಗಳು, ಬ್ಯಾಗ್ ಗಳು, ಆಭರಣಗಳು, ಮಕ್ಕಳ ಫ್ಯಾಷನ್ ವಸ್ತುಗಳು, ಟಿವಿ ಮತ್ತು ಅಪ್ಲಯನ್ಸ್ ಗಳು ಅಂದರೆ ರೆಫ್ರಿಜರೇಟರ್ ಗಳು, ವಾಷಿಂಗ್ ಮಷಿನ್,ಏರ್ ಕಂಡೀಷನರ್, ಮೈಕ್ರೋ ವೇವ್ ಗಳು ಮತ್ತು ಅಡುಗೆ ಮನೆ ವಸ್ತುಗಳು ಜೊತೆಗೆ ಮನೆಯ ಅಲಂಕಾರಕ್ಕೆ ಸಂಬಂಧಿಸಿದ ವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಬ್ಯೂಟಿವಸ್ತುಗಳು, ಆಟದ ಸಾಮಾನುಗಳು, ಸ್ಮಾರ್ಟ್ ಡಿವೈಸ್ ಗಳು ಮತ್ತು ಆಟಕ್ಕೆ, ಫಿಟ್ ನೆಸ್ ಗೆ ಸಂಬಂಧಿಸಿದ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಈ ದಿನ ನೀಡಲಾಗುತ್ತದೆ.

ಅಕ್ಟೋಬರ್ 11 ರಿಂದ 14 :

ಅಕ್ಟೋಬರ್ 11 ರಿಂದ 14 :

ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್ ಗಳು, ಫೀಚರ್ ಫೋನ್ ಗಳು, ಲ್ಯಾಪ್ ಟಾಪ್ ಗಳು, ಆಡಿಯೋ ಪ್ರೊಡಕ್ಟ್ ಗಳು, ಕ್ಯಾಮರಾ, ಮೊಬೈಲ್ ಆಕ್ಸಸರೀಸ್ ಗಳು, ಪವರ್ ಬ್ಯಾಂಕ್ ಗಳು ಮತ್ತು ಗೇಮಿಂಗ್ ವಸ್ತುಗಳ ಮೇಲೆ ರಿಯಾಯಿತಿಯನ್ನು ಈ ದಿನಗಳಂದು ನೀಡಲಾಗುತ್ತದೆ.

ಪ್ಲಸ್ ಸದಸ್ಯರಿಗೆ ವೇಗದ ಆಕ್ಸಿಸ್ :

ಪ್ಲಸ್ ಸದಸ್ಯರಿಗೆ ವೇಗದ ಆಕ್ಸಿಸ್ :

ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರು 3 ಗಂಟೆಗಳ ಮುಂಚೆಯೇ ಆಕ್ಸಿಸ್ ನ್ನು ನೀಡಲಾಗುತ್ತದೆ. ಒಟ್ಟಾರೆ ಸೇಲ್ ನ್ನು ಹೊರತು ಪಡಿಸಿ ಫ್ಲಿಪ್ ಕಾರ್ಟ್ ಫ್ಲ್ಯಾಶ್ ಸೇಲ್ ನ್ನು ಕೂಡ ಪ್ರತಿ ಘಂಟೆಗಳಿಗೆ ಒಮ್ಮೆ ಆಯೋಜಿಸಲಿದೆ ಮತ್ತು ಹೊಸ ಹೊಸ ಡೀಲ್ ಗಳನ್ನು ಇದರಲ್ಲಿ ನೀಡಲಾಗುತ್ತದೆ ಜೊತೆಗೆ ಪ್ರತಿ ಎಂಟು ಗಂಟೆಗಳಿಗೊಮ್ಮೆ ಡೀಲ್ ಗಳಲ್ಲಿ ಬದಲಾವಣೆ ನಡೆಯಲಿದೆ.

ಬೆಸ್ಟ್ ಬ್ಯಾಂಕ್ ಆಫರ್ ಗಳು:

ಬೆಸ್ಟ್ ಬ್ಯಾಂಕ್ ಆಫರ್ ಗಳು:

ಫ್ಲಿಪ್ ಕಾರ್ಡ್ ಪ್ರಮುಖ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡುತ್ತದೆ ಜೊತೆಗೆ ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಗಳಲ್ಲೂ ಈ ಸೌಲಭ್ಯವಿರುತ್ತದೆ. ಫೋನ್ ಪೇ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್ ನ್ನು ಈ ಸೇಲ್ ನಲ್ಲಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಅಮೇಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್

ಅಮೇಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್

ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡ್ಸ್ ಗಳಲ್ಲಿ ಅಮೇಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ರಿಯಾಯಿತಿ ಸಿಗುತ್ತದೆ. ಜೊತೆಗೆ ಡೆಬಿಟ್ ಕಾರ್ಡ್ ನಲ್ಲಿ ಇಎಂಐ ಆಯ್ಕೆ ಇರುತ್ತದೆ. ಬಜಾಜ್ ಫಿನ್ ಸರ್ವ್ ನಲ್ಲಿ ನೋ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಇರುತ್ತದೆ ಜೊತೆಗೆ 5 ಶೇಕಡಾದ ವರೆಗೆ ರಿಯಾಯಿತಿಯನ್ನು ಅಮೇಜಾನ್ ಪೇ ಬ್ಯಾಲೆನ್ಸ್ ಬಳಸುವವರಿಗೆ ನೀಡಲಾಗುತ್ತದೆ.

ಎಕ್ಸ್‌ಚೆಂಜ್‌ ಆಫರ್‌

ಎಕ್ಸ್‌ಚೆಂಜ್‌ ಆಫರ್‌

ಅಮೇಜಾನ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಬೆಸ್ಟ್ ಎಕ್ಸ್ ಚೇಂಜ್ ಆಫರ್ ನ್ನು ನೀಡಲಿದೆ ಜೊತೆಗೆ ಹೊಸ ಫೋನ್ ಗಳಿಗೆ ಡ್ಯಾಮೇಜ್ ಪ್ರೊಟೆಕ್ಷನ್ ಸ್ಕೀಮ್ ನ್ನು ಕೂಡ ಆಫರ್ ಮಾಡಲಿದೆ. ಇತರೆ ವಸ್ತುಗಳು ಈಗಾಗಲೇ ಪಟ್ಟಿ ಮಾಡಿರುವುದು ಎಂದರೆ ಎಲೆಕ್ಟ್ರಾನಿಕ್ಸ್, ಟಿವಿ ಮತ್ತು ಅಪ್ಲಯನ್ಸಸ್, ಮನೆ ಮತ್ತು ಅಡುಗೆ ಮನೆ ಸಂಬಂಧಿಸಿದ ವಸ್ತುಗಳಿಗೂ ರಿಯಾಯಿತಿ ಲಭ್ಯವಾಗುತ್ತದೆ. ಅಮೇಜಾನ್ ಕೂಪನ್ ನ್ನು ಬಳಸಿ ಗ್ರಾಹಕರು ಹೆಚ್ಚಿನ ರಿಯಾಯಿತಿಯನ್ನು ಪಡೆಯಲು ಗ್ರಾಹಕರಿಗೆ ಈ ಸೇಲ್ ನಲ್ಲಿ ಅವಕಾಶವಿರುತ್ತದೆ.

Best Mobiles in India

English summary
Flipkart and Amazon Diwali sales: What we know so far. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+