ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇಲ್ 2020:ಅತ್ಯುತ್ತಮ ಡೀಲ್ಸ್!
ಹಬ್ಬದ ಸೀಸನ್ ಶುರುವಾಗ್ತಿದ್ದ ಹಾಗೇ ಗ್ರಾಹಕರನ್ನ ಸೆಳೆಯುವುದಕ್ಕೆ ಇ-ಕಾಮರ್ಸ್ ತಾಣಗಳು ಸಾಕಷ್ಟು ಆಫರ್‌ಗಳನ್ನು ನೀಡೋದಕ್ಕೆ ಮುಂದಾಗಿವೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಾರತದಲ್ಲಿ ಹಬ್ಬದ ಆನ್‌ಲೈನ್ ಮಾರಾಟ ಮೇಳಗಳನ್ನ ಆಯೋಜನೆ ಮಾಡಲು ಮುಂದಾಗಿವೆ. ಸದ್ಯ ದೇಶದ ಪ್ರಮುಖ ಇ ಕಾಮರ್ಸ್ ಕಂಪೆನಿಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ಭಾರೀ ರಿಯಾಯಿತಿಯಲ್ಲಿ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸಿವೆ. ಫ್ಲಿಪ್‌ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 16ರಿಂದ 21 ರವರೆಗೆ ಆಯೋಜನೆಯಾಗಿದ್ದರೆ, ಮತ್ತೊಂದೆಡೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇದೇ ಅಕ್ಟೋಬರ್ 17 ರಂದು ಪ್ರಾರಂಭವಾಗಲಿದೆ.

ಹೌದು, ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗ್ತಿದ್ದ ಹಾಗೇ ಆನ್‌ಲೈನ್ ಸೇಲ್ ಮೇಳಗಳು ಶುರುವಾಗುತ್ತಿವೆ. ಆನ್‌ಲೈನ್ ಗ್ರಾಹಕರಿಗೆ ಸಾಕಷ್ಟು ರಿಯಾಯಿತಿಯನ್ನು ನೀಡುವ ಮೂಲಕ ತಮ್ಮತ್ತ ಸೆಳೆಯುತ್ತಿವೆ. ಇನ್ನು ಈ ಭಾರಿ ಹಿಂದೆಂದೂ ಕಾಣದ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳು, ಹೋಮ್ ಥಿಯೇಟರ್, ಸ್ಪೀಕರ್‌ಗಳು, ಸೇರಿದಂತೆ ಹಲವು ಅತ್ಯುತ್ತಮ ಟೆಕ್ ಗ್ಯಾಜೆಟ್ಸ್‌ಗಳನ್ನು ಪರಿಚಯಲಿವೆ. ಇನ್ನು ನೀವು ನೀವು ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕೆ, ಹಾಗೂ ಆಂಡ್ರಾಯ್ಡ್‌ನಿಂದ ಆಪಲ್‌ಗೆ ಅಪ್‌ಗ್ರೇಡ್ ಆಗಲು ಎದುರು ನೋಡುತ್ತಿದ್ದರೆ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅತ್ಯುತ್ತಮ ಅವಕಾಶವಿದೆ. ಹಾಗಾದ್ರೆ ಈ ಭಾರಿಯ ಸೇಲ್‌ನಲ್ಲಿ ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಟೆಕ್ ಡೀಲ್ಸ್ ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 + ಸ್ಮಾರ್ಟ್‌ಫೋನ್
ನೀವು ನಿಮ್ಮ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ, ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಅತ್ಯುತ್ತಮ ಅವಕಾಶವಾಗಿದೆ. ಅದರಲ್ಲೂ ಸ್ಮಾರ್ಟ್ ಅಪ್‌ಗ್ರೇಡ್ ಪ್ಲ್ಯಾನ್‌ಅನ್ನು ಬಳಸಿಕೊಂಡು ಸ್ಯಾಮ್‌ಸಂಗ್ ಗ್ಯಾಲಕ್ಸಿ S20 + ಸ್ಮಾರ್ಟ್‌ಫೋನ್‌ಅನ್ನು ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೂಲ ಬೆಲೆ 83,000 ರೂ ಆಗಿದ್ದು, ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ ಇದರ ಇದರ ಬೆಲೆ 49,999 ರೂ ಆಗಿದೆ. ಆದರೆ ಫ್ಲಿಪ್‌ಕಾರ್ಟ್ ಸ್ಮಾರ್ಟ್ ಆಪ್‌ಗ್ರೇಡ್ ಪ್ಲ್ಯಾನ್ ಅನ್ವಯ ಇದನ್ನು ಕೇವಲ 35,198 ರೂ.ಗಿಂತ ಕಡಿಮೆ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.

ಐಫೋನ್ 11
ಇನ್ನು ನೀವು ನಿಮ್ಮ ಹಳೆಯ ಐಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸುವುದಾದರೆ, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಿಂತ ಉತ್ತಮವಾದ ಸ್ಥಳವಿಲ್ಲ. ಐಫೋನ್ 11ಕ್ಕೆ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಭಾರಿ ಭಾರಿ ಬೆಲೆ ಕಡಿತವನ್ನು ನೀಡಲಾಗಿದೆ. ಅಲ್ಲದೆ ಈ ಭಾರಿಯ ಸೇಲ್ ಸಮಯದಲ್ಲಿ ಈ ಐಫೋನ್ 50K ವಿಭಾಗದಲ್ಲಿ ಲಭ್ಯವಿರುತ್ತದೆ. ಐಫೋನ್ 11 ಟೆಲಿಫೋಟೋ ಲೆನ್ಸ್ ಇಲ್ಲದೆ ಐಫೋನ್ 11 ಪ್ರೊನ ಅದೇ ಚಿಪ್‌ಸೆಟ್ ಅನ್ನು ಹೊಂದಿದೆ.

ಪ್ರೀಮಿಯಂ 55 ಇಂಚಿನ ಟಿವಿ
ಇದಲ್ಲದೆ ಪ್ರೀಮಿಯಂ 55-ಇಂಚಿನ ಟಿವಿಯಲ್ಲೂ, ಸಹ ಸಾಕಷ್ಟು ರಿಯಾಯಿತಿಯನ್ನು ನೀಡಲಾಗಿದೆ. ಅದರಲ್ಲೂ 55 ಇಂಚಿನ ಸ್ಯಾಮ್‌ಸಂಗ್ ಕ್ರಿಸ್ಟಲ್ 4k UHD ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ 50 ಸಾವಿರ ರೂಗಳ ಅಡಿಯಲ್ಲಿ ಲಭ್ಯವಿದೆ. ಇನ್ನು 55 ಇಂಚಿನ ಸೋನಿ ಬ್ರಾವಿಯಾ 4K UHD ಸ್ಮಾರ್ಟ್ ಟಿವಿ ಅಮೆಜಾನ್ ಸೇಲ್ ಟೈಂನಲ್ಲಿ 60,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಅಲ್ಲದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಟೈಂನಲ್ಲಿ ಸೆರಿಫ್ ಟಿವಿಯ ಮೂಲ 43 ಇಂಚಿನ ಮಾದರಿ 70,000 ರೂ.ಗಳಿಗೆ ಲಭ್ಯವಾಗಲಿದೆ.


Click it and Unblock the Notifications








