ಐಫೋನ್ 12 ಖರೀದಿಸುವವರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
ನಿಮಗೆ ಆಪಲ್ ಐಫೋನ್ ಖರೀದಿಸುವ ಪ್ಲಾನ್ ಇದೆಯಾ, ಹಾಗಿದ್ರೆ ಯಾಕ್ ತಡ ಮಾಡ್ತೀರಾ ಕೂಡಲೇ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ ಖರೀದಿಸಿಬಿಡಿ. ಯಾಕಂದ್ರೆ ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ ಖರೀದಿಸುವವರಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನ ಭಾಗವಾಗಿ ಐಫೋನ್ 12 ಮೇಲೆ ಬಿಗ್ ಆಫರ್ ನೀಡಿದೆ. ಐಫೋನ್ 12 ಮೇಲೆ 19% ತನಕ ಡಿಸ್ಕೌಂಟ್ ನೀಡುತ್ತಿದ್ದು, ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.

ಹೌದು, ಐಫೋನ್ 12 ಖರೀದಿಸಲು ಬಯಸುವ ಗ್ರಾಹಕರಿಗೆ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಫೋನ್ ಅನ್ನು ನೀವು ಅಗ್ಗದ ಬೆಲೆಯಲ್ಲಿ ಖರೀದಿಸುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಇದರಲ್ಲಿ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಆಫರ್ ಸೇರಿದಂತೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆಫರ್ ಪಡೆದುಕೊಳ್ಳಬಹುದಾಗಿದೆ. ಇದರಿಂದ ಐಫೋನ್ 12ಫೋನ್ ನಿಮಗೆ ಊಹಿಸಲಾರದ ಬೆಲೆಯಲ್ಲಿ ಲಭ್ಯವಾಗಲಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಐಫೋನ್ 12 ಅನ್ನು ಖರೀದಿಸುವುದಕ್ಕೆ ಇದುವೇ ಸುವರ್ಣಾವಕಾಶವಾಗಿದೆ.

ಇನ್ನು ಆಪಲ್ ಕಂಪೆನಿಯ ಡಿವೈಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದ್ದೆ ಇರುತ್ತದೆ. ಅದರಲ್ಲೂ ಐಫೋನ್‌ಗಳ ಬೆಲೆ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳ ಬೆಲೆಗಿಂತ ಹೆಚ್ಚು ಇರುತ್ತದೆ. ಆದರೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು ನೀಡುವ ವಿಶೇಷ ಆಫರ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಈಗಾಗಲೇ ಹಲವು ಸೇಲ್‌ಗಳಲ್ಲಿ ವಿಶೇಷ ಆಫರ್‌ಗಳಲ್ಲಿ ಮಾರಾಟವಾಗಿರುವ ಐಫೋನ್ 12 ಇದೀಗ ಮತ್ತೊಮ್ಮೆ ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿದೆ. ಹಾಗಾದ್ರೆ ಆಪಲ್ ಐಫೋನ್ 12 ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್ ಆಫರ್ ಏನಿದೆ?
ಆಪಲ್ ಐಫೋನ್ 12 ಫ್ಲಿಪ್‌ಕಾರ್ಟ್‌ನಲ್ಲಿ 31,901ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯು ಎಂಆರ್‌ಪಿ ಬೆಲೆ, ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ಅನ್ನು ಒಳಗೊಂಡಿದೆ. ಅಂದರೆ ಐಫೋನ್ 12 ಫೋನಿನ 64GB ಮಾದರಿಯ ಮೇಲೆ ಫ್ಲಿಪ್‌ಕಾರ್ಟ್ 5,901ರೂ. ರಿಯಾಯಿತಿ ಪ್ರಕಟಿಸಿದ್ದು, ಕೇವಲ 59,999ರೂ. ಗಳಿಗೆ ಮಾರಾಟ ಮಾಡಲಾಗ್ತಿದೆ. ಇದಲ್ಲದೆ, ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಐಫೋನ್ ಖರೀದಿಸುವ ಗ್ರಾಹಕರು 5% ರಷ್ಟು ರಿಯಾಯಿತಿಯನ್ನು ನೀಡಲಾಗ್ತಿದ್ದು, 17,000ರೂ. ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡುತ್ತಿದೆ. ಇನ್ನು ಐಫೋನ್ 12 ಬ್ಲ್ಯಾಕ್, ಗ್ರೀನ್ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಇದಲ್ಲದೆ ಆಪಲ್ ಐಫೋನ್ 12 128GB ಮಾದರಿಯ ಮೇಲೆ 7% ಡಿಸ್ಕೌಂಟ್ ಅನ್ನು ಘೋಷಿಸಲಾಗಿದೆ. ಇದರಿಂದ ಆಪಲ್ ಐಫೋನ್ 12 ಫೋನಿನ 128GB ಮಾದರಿಯ ಬೆಲೆ 65,499ರೂ.ಆಗಿದೆ. ಇದರ ಮೇಲೆ ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಡಿಸ್ಕೌಂಟ್ ಆಫರ್ ಮೂಲಕ 17,000ರೂ. ಗಳ ತನಕ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು. ಆದರೆ ಎಕ್ಸ್‌ಚೇಂಜ್ ಆಫರ್ ನಿಮ್ಮ ಡಿವೈಸ್ ಹೇಗಿದೆ ಎನ್ನುವ ಸ್ಟೇಟಸ್ ಆಧಾರದ ಮೇಲೆ ನಿರ್ಧಾರವಾಗಲಿದೆ.

ಆಪಲ್ ಐಫೋನ್ 12 ಫೀಚರ್ಸ್ ಹೇಗಿದೆ?
ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ. ಇದಲ್ಲದೆ ಆಪಲ್ ಐಫೋನ್ 12ನಲ್ಲಿ ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಐಫೋನ್ 13 ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, 1200 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ.

ಇದು ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ ಮತ್ತು ಮಿಂಚಿನ ಕೇಬಲ್ ಮೂಲಕ ಚಾರ್ಜ್ ಮಾಡುವ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಐಫೋನ್ 13 ಮಿಡ್‌ನೈಟ್, ಬ್ಲೂ, ಪಿಂಕ್, ಸ್ಟಾರ್‌ಲೈಟ್ ಮತ್ತು ಪ್ರಾಡಕ್ಟ್ ರೆಡ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಐಫೋನ್ 13 ಮಿನಿ ಫೀಚರ್ಸ್
ಐಫೋನ್ 13 ಮಿನಿ ಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇನ್ನು ಆಪಲ್ ಐಫೋನ್ 13 ಮಿನಿ ಡಿಸ್‌ಪ್ಲೇ 800nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.


Click it and Unblock the Notifications








