Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ಘೋಷಣೆ! ಆಫರ್‌ ಏನಿದೆ?

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣಗಳಲ್ಲಿ ಫ್ಲಿಪ್‌ಕಾರ್ಟ್‌ ಕೂಡ ಒಂದಾಗಿದೆ. ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಒಂದಿಲ್ಲೊಂದು ಸೇಲ್‌ಗಳನ್ನು ನಡೆಸುತ್ತಲೇ ಬಂದಿದೆ. ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ವಿಕೆಂಡ್‌, ಮಂತ್‌ಎಂಡ್‌ ಸೇಲ್‌ಗಳನ್ನು ಕೂಡ ನಡೆಸುತ್ತಾ ಬಂದಿದೆ. ಇನ್ನು ಫ್ಲಿಪ್‌ಕಾರ್ಟ್‌ ತನ್ನ ವಿಶೇಷ ಸೇಲ್‌ಗಳಲ್ಲಿ ಗ್ರಾಹಕರಿಗೆ ಬಿಗ್‌ ಆಫರ್‌ ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ಘೋಷಣೆ ಮಾಡಿದೆ. ಈ ಸೇಲ್‌ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ ಘೋಷಣೆ ಮಾಡಿದೆ. ಈ ಸೇಲ್‌ ಮಾರ್ಚ್ 4 ರಿಂದ ಪ್ರಾರಂಭವಾಗಲಿದ್ದು ಮಾರ್ಚ್ 6 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ವೆರಿಯೆಬಲ್ಸ್‌ ಡಿವೈಸ್‌ಗಳು ಮತ್ತು ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಣೆ ಮಾಡಿದೆ. ಇದಲ್ಲದೆ ಮೊಟೊರೊಲಾ ಎಡ್ಜ್‌ 30 ಪ್ರೊ ಮತ್ತು ರಿಯಲ್‌ಮಿ 9 ಪ್ರೊ ಸೇರಿದಂತೆ ವಿವಿಧ ಸ್ಮಾರ್ಟ್‌ಫೋನ್‌ಗಳ ಸೇಲ್‌ ಕೂಡ ನಡೆಯಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್

ಈ ಭಾರಿಯ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ ಐಫೋನ್‌12 ಸರಣಿಯಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 80% ಮತ್ತು ಟಿವಿಗಳ ಮೇಲೆ 75% ವರೆಗೆ ರಿಯಾಯಿತಿ ಪಡೆಯಬಹುದು. ಇನ್ನು ಈ ಸೇಲ್‌ ಸಮಯದಲ್ಲಿ ಗ್ರಾಹಕರು ಬ್ಯಾಂಕ್ ರಿಯಾಯಿತಿಗಳು ಮತ್ತು ನೋ ಕಾಸ್ಟ್‌ EMI ಆಯ್ಕೆಗಳನ್ನು ಸಹ ಪಡೆಯುತ್ತಾರೆ. ಸದ್ಯ ಫ್ಲಿಪ್‌ಕಾರ್ಟ್‌ ವೆಬ್‌ ಪೇಜ್‌ ಪ್ರಕಾರ ಬಿಗ್ ಬಚತ್ ಧಮಾಲ್ ಸೇಲ್‌ ಸಮಯದಲ್ಲಿ ಫ್ಲಿಪ್‌ಕಾರ್ಟ್ ಪ್ರತಿದಿನ ಬೆಳಗ್ಗೆ 12 ಗಂಟೆಗೆ, ಬೆಳಗ್ಗೆ 8 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಕಾಂಬೊ ಆಫರ್‌ಗಳನ್ನು ಒಳಗೊಂಡಂತೆ ಹೊಸ ಡೀಲ್‌ಗಳನ್ನು ಅನಾವರಣಗೊಳಿಸುತ್ತದೆ. ಲೂಟ್ ಬಜಾರ್ ಕೂಡ ಇದೆ, ಇದರಲ್ಲಿ ಉತ್ಪನ್ನಗಳು ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

ಫ್ಲಿಪ್‌ಕಾರ್ಟ್

ಇನ್ನು ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ UPI ವಹಿವಾಟುಗಳ ಮೂಲಕ ಮೊಬೈಲ್‌ ಖರೀದಿಸಿದರೆ 1,000ರೂ.ಗಳ ರಿಯಾಯಿತಿ ಪಡೆಯಬಹುದು. ಜೊತೆಗೆ IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಮೇಲೆ 10% ಪ್ರತಿಶತ ತ್ವರಿತ ರಿಯಾಯಿತಿ ಕೂಡ ದೊರೆಯಲಿದೆ. ಇದರೊಂದಿಗೆ ನೋ ಕಾಸ್ಟ್‌ EMI ಪ್ಲಾನ್‌, ಎಕ್ಸ್‌ಚೇಂಜ್‌ ಆಫರ್‌, ಫ್ಲಿಪ್‌ಕಾರ್ಟ್ ಸ್ಮಾರ್ಟ್ ಅಪ್‌ಗ್ರೇಡ್ ಆಯ್ಕೆ ಮತ್ತು ಮೊಬೈಲ್ ಪ್ರೊಟೆಕ್ಷನ್ ಆಫರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಲ್ಲದೆ ವೆರೆಯೆಬಲ್ಸ್‌ ಡಿವೈಸ್‌ಗಳು, ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ (TWS) ಇಯರ್‌ಫೋನ್‌ಗಳು ಮತ್ತು ಗೇಮ್‌ಗಳ ಮೇಲಿನ ಆಫರ್‌ಗಳು ಸೇಲ್‌ ಆರಂಭವಾಗುವ ಸಮೀಪದ ದಿನಾಂಕದಂದು ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳು

ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳು

ಈ ಸೇಲ್‌ನಲ್ಲಿ ರಿಯಲ್‌ಮಿ C11 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ 7,499ರೂ.ಗಳಿಗೆ ದೊರೆಯಲಿದೆ. ಇನ್ನು ಪೊಕೊ C31 ಸ್ಮಾರ್ಟ್‌ಫೋನ್‌ 7,999ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಇದಲ್ಲದೆ ರಿಯಲ್‌ಮಿ C21Y ಸ್ಮಾರ್ಟ್‌ಫೋನ್‌ 7,749ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಐಫೋನ್ 12 ಮಿನಿ ನಿಮಗೆ ಕೇವಲ 40,999ರೂ.ಬೆಲೆಗೆ ಲಭ್ಯವಾಗಲಿದೆ. ಇದೇ ಸೇಲ್‌ನಲ್ಲಿ ಐಫೋನ್‌ SE 28,999ರೂ.ಬೆಲೆಯಲ್ಲಿ ಸಿಗಲಿದೆ. ಇನ್ನು ಐಫೋನ್‌ 12 ಅನ್ನು ನೀವು 53,999ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

Best Mobiles in India

English summary
Flipkart Big Bachat Dhamaal sale Announced: Massive Offers On Motorola, Realme, And Moto smartphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+