Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳಿಗೆ ಬಿಗ್‌ ಡಿಸ್ಕೌಂಟ್‌ ಸಿಗಲಿದೆ!

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಪಾಲಿಗೆ ಫ್ಲಿಪ್‌ಕಾರ್ಟ್‌ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರಿಗೆ ಬಿಗ್‌ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಸೇಲ್‌ ಹೊತ್ತು ತಂದಿದೆ. ಈ ಸೇಲ್‌ ಇದೇ ಫೆಬ್ರವರಿ 3 ರಿಂದ 5 ರವರೆಗೆ ಲೈವ್ ಆಗಿರುತ್ತದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಕ್ಸ್‌ ಡಿವೈಸ್‌ಗಳು ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಆಫರ್‌ ದೊರೆಯಲಿದೆ. ಜೊತೆಗೆ ಈ ಸೇಲ್‌ ಪ್ರತಿದಿನ 12 ಗಂಟೆಗೆ, 8 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಧಮಾಲ್ ಡೀಲ್‌ಗಳನ್ನು ಹೊಂದಿರುತ್ತದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಲಿಪ್‌ಕಾರ್ಟ್‌ ಬಿಗ್ ಬಚತ್ ಧಮಾಲ್ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ ಫೆಬ್ರವರಿ 3 ರಿಂದ 5 ರವರೆಗೆ ನಡೆಯಲಿದೆ. ಸೇಲ್‌ ಸಮಯದಲ್ಲಿ ಬೆಳಿಗ್ಗೆ 8 ರಿಂದ ಮಧ್ಯರಾತ್ರಿಯವರೆಗೆ ಅತ್ಯಂತ ಕಡಿಮೆ ದರದಲ್ಲಿ ಹಲವು ವಸ್ತುಗಳು ದೊರೆಯಲಿವೆ. ಜೊತೆಗೆ, ಕಾಂಬೊ ಡೀಲ್‌ಗಳು ಕೂಡ ಲಭ್ಯವಿರುತ್ತವೆ. ಸದ್ಯ ಸೇಲ್‌ನ ಎಲ್ಲಾ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇನ್ನು ಈ ಸೇಲ್‌ನಲ್ಲಿ ವಿಶೇಷವಾಗಿ ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಚತ್ ಧಮಾಲ್ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಿ 4A ಪ್ರೊ 80

ಮಿ 4A ಪ್ರೊ 80

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 32 ಇಂಚಿನ ಮಿ 4A ಪ್ರೊ 80 ಸ್ಮಾರ್ಟ್‌ಟಿವಿ 16,999ರೂ. ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯ ಮೂಲ 19,999ರೂ. ಮೂಲ ಬೆಲೆ ಆಗಿದೆ. ಇನ್ನು ಈ ಸ್ಮಾರ್ಟ್ ಟಿವಿ ಮೇಲೆ 15% ರಷ್ಟು ರಿಯಾಯಿತಿ ಪಡೆಯಬಹುದು. ಇದಲ್ಲದೆ ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಸೋನಿ ಬ್ರಾವಿಯಾ 43 ಇಂಚಿನ ಟಿವಿ

ಸೋನಿ ಬ್ರಾವಿಯಾ 43 ಇಂಚಿನ ಟಿವಿ

ಸೋನಿ ಬ್ರಾವಿಯಾ 43 ಇಂಚಿನ ಟಿವಿ ಫ್ಲಿಪ್‌ಕಾರ್ಟ್‌ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ 39,999ರೂ.ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 44,990ರೂ. ಆಗಿದ್ದು 10% ರಿಯಾಯಿತಿಯನ್ನು ದೊರೆಯಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಸಿಟಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ನೀವು 5000ರೂ. ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ 1500ರೂ. ವರೆಗಿನ ರಿಯಾಯಿತಿ ದೊರೆಯಲಿದೆ. ಹಾಗೆಯೇ ಆಕ್ಸಿಸ್‌ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ EMI ವಹಿವಾಟುಗಳ ಮೇಲೆ ಫ್ಲಾಟ್ 500ರೂ. ಆಫರ್‌ ದೊರೆಯಲಿದೆ.

ಒನ್‌ಪ್ಲಸ್‌ Y ಸರಣಿ

ಒನ್‌ಪ್ಲಸ್‌ Y ಸರಣಿ

ಒನ್‌ಪ್ಲಸ್‌ Y ಸರಣಿಯ 40 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ ಸೇಲ್‌ ಸಮಯದಲ್ಲಿ 22,499 ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ ಆಯ್ದ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ನೀವು ಹೆಚ್ಚುವರಿ 2000ರೂ.ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 5000ರೂ. ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ 1250ರೂ.ಕ್ಯಾಶ್‌ ಬ್ಯಾಕ್‌ ಆಫರ್‌ ದೊರೆಯಲಿದೆ.

Vu ಪ್ರೀಮಿಯಂ

Vu ಪ್ರೀಮಿಯಂ

Vu ಪ್ರೀಮಿಯಂ 55 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 36,999ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 75,000ರೂ.ಆಗಿದ್ದು, 50% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ನೀವು ಸಿಟಿ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಹೆಚ್ಚುವರಿ ಫ್ಲಾಟ್ 500ರೂ. ಆಫರ್‌ ದೊರೆಯಲಿದೆ. ಹಾಗೆಯೇ ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದವರಿಗೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಆಫರ್‌ ಕೂಡ ದೊರೆಯಲಿದೆ.

LG 43 ಇಂಚಿನ ಸ್ಮಾರ್ಟ್‌ಟಿವಿ

LG 43 ಇಂಚಿನ ಸ್ಮಾರ್ಟ್‌ಟಿವಿ

LG 43 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 36,999ರೂ.ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ ಮೂಲ ಬೆಲೆ 59,990ರೂ. ಆಗಿದೆ. ಅಂದರೆ ನೀವು ಫ್ಲಿಪ್‌ಕಾರ್ಟ್ ಬಚಾತ್ ಧಮಾಲ್ ಸೇಲ್‌ ಸಮಯದಲ್ಲಿ 38% ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಲೆನೊವೊ ಸ್ಮಾರ್ಟ್ ಕ್ಲಾಕ್ ಎಸೆನ್ಷಿಯಲ್ ಮೇಲೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದಾಗಿದೆ.

Best Mobiles in India

English summary
Flipkart Big Bachat Dhamaal sale: Top deals on smart TV and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+