ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ 2020: ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿ!
ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಸೀಸನ್ ಶುರುವಾಗ್ತಿದ್ದ ಹಾಗೇ ಇ-ಕಾಮರ್ಸ್ ತಾಣಗಳ ಭರ್ಜರಿ ರಿಯಾಯಿತಿ ಸೇಲ್ ಮೇಳಗಳೂ ಆರಂಭವಾಗುವುದಕ್ಕೆ ದಿನಗಣನೆ ಶುರುವಾಗಿದೆ. ಅದರಲ್ಲೂ ಆನ್‌ಲೈನ್ ಗ್ರಾಹಕರಿಗೆ ಭಾರಿ ರಿಯಾಯಿತಿ ಮತ್ತು ಹಬ್ಬದ ಆಫರ್ ನೀಡುವ ಭರ್ಜರಿ ಸೇಲ್ ಇನ್ನೇನು ಫ್ಲಿಪ್ ಕಾರ್ಟ್ ನಲ್ಲಿ ಆರಂಭವಾಗುತ್ತಿದೆ. ಎಂದಿನಂತೆ ಈ ಭಾರಿಯೂ ಫ್ಲಿಪ್ ಕಾರ್ಟ್ ತನ್ನ ದಿ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡುವ ಸುಳಿವನ್ನು ನೀಡಿದೆ. ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್ ಆಲಕ್ಸಿಸರೀಸ್‌ಗಳ ಮೇಲೂ ಭಾರಿ ರಿಯಾಯಿತಿಯನ್ನು ನೀಡುವುದಾಗಿ ಹೇಳಿದೆ.

ಹೌದು, ಫ್ಲಿಪ್‌ಕಾರ್ಟ್‌ನ ದಿ ಬಿಗ್ ಬಿಲಿಯನ್ ಡೇ ಸೇಲ್ಗೆ ಕ್ಷಣಗಣನೆ ಶುರುವಾಗಿದ್ದು ಬೆಲೆ ಇಳಿಕೆ ಸೇರಿದಂತೆ ಭರ್ಜರಿ ರಿಯಾಯಿತಿಯ ಸುರಿಮಳೆಯೇ ಆಗಲಿದೆ. ಇನ್ನು ಈ ಭಾರಿ ದಿ ಬಿಗ್ ಬಿಲಿಯನ್ ಡೇ ಸೇಲ್ ಪ್ರತಿಸ್ಪರ್ಧಿ ಅಮೇಜಾನ್ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್ 2020 ರೊಂದಿಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಸ್ಪರ್ಧೆಗಿಳಿದಿದೆ. ಈ ಮೂಲಕ ಆನ್‌ಲೈನ್ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪೈಪೋಟಿಗೆ ಬಿದ್ದು ಭಾರಿ ರಿಯಾಯಿತಿಯನ್ನು ನೀಡುತ್ತಿವೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿ ದೊರೆಯಲಿದ್ದು, ಯಾವ ಸ್ಮಾರ್ಟ್‌ಫೊನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಈ ಸೇಲ್ ಸಮಯದಲ್ಲಿ ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳೊಂದಿಗೆ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ. ಇದಲ್ಲದೆ ಕಂಪನಿಯು ಗ್ರಾಹಕರಿಗೆ ಯಾವುದೇ ನೋ ಕಾಸ್ಟ್ EMI ಕೊಡುಗೆಗಳು, ವಿನಿಮಯ ವ್ಯವಹಾರಗಳು ಮತ್ತು ಪೇಟಿಎಂ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡಲಿದೆ. ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿರುವ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನ ಇಲ್ಲಿ ತಿಳಿಯೋಣ ಬನ್ನಿರಿ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಕೇವಲ 12,999 ರೂ ಆಗಿದ್ದು, ಇದರ 4GB RAM+ 64GB ಸ್ಟೋರೇಜ್ ವೇರಿಯಂಟ್ ಬೆಲೆ 13,999 ರೂ ಮೂಲ ಬೆಲೆಯನ್ನು ಹೊಂದಿದೆ. ಇನ್ನು ಇನ್ಫಿನಿಕ್ಸ್ ಹಾಟ್ 9 ಪ್ರೊ ಸ್ಮಾರ್ಟ್‌ಫೋನ್ ಬಿಗ್‌ಬಿಲಿಯನ್ ಡೇಸ್ ಸೇಲ್‌ನಲ್ಲಿ 3GB RAM / 32GB ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದು 9,499 ರೂಗಳಲ್ಲಿ ಲಭ್ಯವಾಗಲಿದೆ. ರಿಯಲ್‌ಮಿ C12 ಸ್ಮಾರ್ಟ್‌ಫೋನ್ 3GB RAM / 32GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಇದು 7,999 ರೂಗಳಲ್ಲಿ ಲಭ್ಯವಾಗಲಿದೆ.

ರಿಯಲ್‌ಮಿ ನಾರ್ಜೊ 20 ಸರಣಿ
ರಿಯಲ್‌ಮಿ ನಾರ್ಜೊ 20 ಪ್ರೊ ಸ್ಮಾರ್ಟ್‌ಫೋನ್ ಕೂಡ ದಿ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 14,999 ರೂ.ಗಳಿಂದ ಪ್ರಾರಂಭವಾಗಲಿದೆ. ರಿಯಲ್ಮೆ ನಾರ್ಜೊ 20 ಸ್ಮಾರ್ಟ್‌ಫೋನ್ ಬೆಲೆ 10,499 ರೂ ರಿಂದ ಪ್ರಾರಂಭವಾಗಲಿದೆ ಮತ್ತು ರಿಯಲ್ಮೆ ನಾರ್ಜೊ 20A ಆರಂಭಿಕ ಬೆಲೆಯೊಂದಿಗೆ 8,499 ರೂ.ಹೊಂದಿದ್ದು, ರಿಯಲ್‌ಮಿ C11 ರೂ 6,499 ಕ್ಕೆ ಲಭ್ಯವಾಗಲಿದೆ.

ಪೊಕೊ X2 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 16,499 ರೂಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + 49,999 ರೂಗಳಿಗೆ ಮತ್ತು ಗ್ಯಾಲಕ್ಸಿ ನೋಟ್ 10+ ಅನ್ನು 54,999 ರೂಗಳಲ್ಲಿ ಲಭ್ಯವಾಗಲಿದೆ. ಒಪ್ಪೋ ರೆನೋ 2 ಸರಣಿಯು 16,990 ರೂಗಳಿಂದ ಲಭ್ಯವಾಗಲಿದೆ. ಅಲ್ಲದೆ ಮೊಟೊರೊಲಾ ಎಡ್ಜ್ + ಎಡ್ಜ್-ಲೆಸ್ ಡಿಸ್ಪ್ಲೇ ಹೊಂದಿರುವ ಗಮನಾರ್ಹ ರಿಯಾಯಿತಿಯೊಂದಿಗೆ 64,999 ರೂಗಳಲ್ಲಿ ಲಭ್ಯವಾಗಲಿದೆ, ಇದು ಅದರ ಸಾಮಾನ್ಯ ಮಾರಾಟದ ಬೆಲೆ 89,999 ರೂ. ಮೊಟೊರೊಲಾ ಒನ್ ಫ್ಯೂಷನ್ + 15,999 ರೂಗಳಲ್ಲಿ ಲಭ್ಯವಾಗಲಿದೆ.

ಇದಲ್ಲದೆ, ಸಧ್ಯ ಫ್ಲಿಪ್ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನಾಲ್ಕು ದಿನಗಳಲ್ಲಿ ತನ್ನ ಪ್ಲಸ್ ಸದಸ್ಯರಿಗೆ ಮತ್ತು ಐದು ದಿನಗಳಲ್ಲಿ ಅದರ ಸಾಮಾನ್ಯ ಸದಸ್ಯರಿಗೆ ಪ್ರಾರಂಭಿಸಲಿದೆ. ಇನ್ನು ಈ ಸೇಲ್‌ನ ಸಮಯದಲ್ಲಿ, ಕಂಪನಿಯು ಗ್ರಾಹಕರಿಗೆ ವಿವಿಧ ಉತ್ಪನ್ನಗಳಲ್ಲಿ ವಿವಿಧ ರಿಯಾಯಿತಿಗಳು ಮತ್ತು ವ್ಯವಹಾರಗಳನ್ನು ವಿಭಾಗಗಳಲ್ಲಿ ನೀಡಲಿದೆ. ಅಲ್ಲದೆ ಈ ಸೇಲ್‌ನಲ್ಲಿ ಕಂಪನಿಯು ಅಕ್ಟೋಬರ್ 14 ರವರೆಗೆ ಫ್ರಿ ಬುಕ್ ಸೇಲ್ ಅನ್ನು ಸಹ ನಡೆಸುತ್ತಿದೆ. ಇದರಲ್ಲಿ ಗ್ರಾಹಕರು ಆಯ್ದ ಉತ್ಪನ್ನಗಳ ಬಿಗ್ ಬಿಲಿಯನ್ ಡೇಸ್‌ನಲ್ಲಿ 1 ರೂ. ಮೂಲಕ ಮೊದಲೇ ಕಾಯ್ದಿರಿಸಬಹುದಾಗಿದ್ದು, ಅಕ್ಟೋಬರ್ 16ರ ನಂತರ ಬಾಕಿ ಪಾವತಿಸಬಹುದಾಗಿದೆ.


Click it and Unblock the Notifications








