Just In
Don't Miss
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್ಕಾರ್ಟ್ “ದಿ ಬಿಗ್ ಬಿಲಿಯನ್ ಡೇಸ್” ಆರಂಭದ ಡೇಟ್ ಫಿಕ್ಸ್!
ಆನ್‌ಲೈನ್ ಗ್ರಾಹಕರು ಪ್ರತಿವರ್ಷವೂ ಕುತೂಹಲದಿಂದ ಕಾಯುವಂತಹ ಫ್ಲಿಪ್‌ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಮೇಳ ನಡೆಯುವ ಸಮಯ ಫಿಕ್ಸ್ ಆಗಿದೆ. ಹಲವು ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಆಫರ್ ಇದೇ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4ರವರೆಗೂ ನಡೆಸುವುದಾಗಿ ತಿಳಿಸಿದೆ. ಈ ಮೂಲಕ ಈ ವರ್ಷವೂ ಸಹ ಆನ್‌ಲೈನ್ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿದ್ದಕೊಂಡು ಹೊಸ ಭಾಷ್ಯ ಬರೆಯಲು ಸಂಸ್ಥೆ ಮುಂದಾಗಿದೆ.

ಹೌದು, ಟಿವಿಗಳು, ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಫ್ಯಾಷನ್ ಸಾಮಾಗ್ರಿಗಳು, ಕ್ರೀಡಾ ವಸ್ತುಗಳು, ಸ್ಮಾರ್ಟ್ ಡಿವೈಸ್ ಗಳು ಇನ್ನಿತರ ವಸ್ತುಗಳ ಮಾರಾಟ ಸೆಪ್ಟೆಂಬರ್ 29 ರಂದು ನಡೆಯಲಿದೆ. 30ರ ನಂತರ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ ಅದರ ಜೊತೆಗೆ ಆಕ್ಸಸ್ಸೆರಿಗಳನ್ನು ಭಾರೀ ಡಿಸ್ಕೌಂಟ್ಸ್ ದರದಲ್ಲಿ ಮಾರಾಟ ಮಾಡಲಾಗುವುದು. ಈ ರೀತಿ ಅಕ್ಟೋಬರ್ 4ರವರೆಗೂ ಹಲವು ಆಫರ್ ಗಳ ಮೂಲಕ ವಿವಿಧ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4ರವರೆಗೂ ನಡೆಯಲಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಈ ಬಾರಿ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡುದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಆಕ್ಸಿಸ್ ಮತ್ತು ಐಸಿಐಸಿಐ ಕಾರ್ಡ್ ಬಳಕೆದಾರರಿಗೆ 10% ಕ್ಕಿಂತ ಹೆಚ್ಚು ಡಿಸ್ಕೌಂಟ್, 5 % ಕ್ಕಿಂತ ಹೆಚ್ಚು ಕ್ಯಾಶ್ ಬ್ಯಾಕ್ ಸಿಗಲಿದೆ. ಜೊತೆಗೆ ಮೊದಲ ಬಾರಿಗೆ ಗ್ರಾಹಕರು ವಿಮೆಗಳ ಮೂಲಕವೂ ವಸ್ತುಗಳನ್ನು ಖರೀದಿ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ.

ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರಿಗೆ ನಾಲ್ಕು ಗಂಟೆ ಮೊದಲೇ 'ದಿ ಬಿಗ್ ಬಿಲಿಯನ್ ಡೇಸ್' ಅವಕಾಶಗಳ ಬಾಗಿಲು ತೆರೆಯಲಿದ್ದು, ಹೆಚ್ಚು ಹೆಚ್ಚು ಆಫರ್‌ಗಳು ದೊರೆಕಲಿದೆ. ಪ್ರತಿನಿತ್ಯ ಯಾವೆಲ್ಲಾ ವಸ್ತುಗಳ ಮಾರಾಟವಾಗುತ್ತದೆ ಎಂಬ ವಿಷಯವನ್ನು ದಿನದಾರಂಭದಲ್ಲಿ ಮಾಹಿತಿ ನೀಡಲಿದೆ. ಈ ಬಾರಿ ಗ್ಯಾಜೆಟ್ಸ್, ಗೃಹೋಪಯೋಗಿ ಸಲಕರಣೆಗಳು ಮತ್ತು ಫ್ಯಾಷನ್ ಉತ್ಪನ್ನಗಳ ಮೇಲೆ ಹೆಚ್ಚು ರಿಯಾಯಿತಿ ಸಿಗುವ ಮುನ್ಸೂಚನೆಯನ್ನು ಫ್ಲಿಪ್‌ಕಾರ್ಟ್ ನೀಡಿರುವುದನ್ನು ಸಹ ನಾವಿಲ್ಲಿ ನೋಡಬಹುದು.

ಈ ವರ್ಷದಲ್ಲಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಸರಣಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ 30,000 ಕಿರಾಣಿ ಅಂಗಡಿಗಳನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. ಮೇಳದಲ್ಲಿ ವಿವಿಧ ವರ್ಗಗಳಲ್ಲಿ ಮಾರಾಟ ನಡೆಯಲಿದ್ದು, ದಿ ಬಿಗ್ ಬಿಲಿಯನ್ ಡೇಸ್ ಗಾಗಿ ದೇಶದ ಪ್ರಮುಖ ತಾರೆಗಳಾದ ಅಮಿತಾಬ್ ಬಚ್ಚನ್, ಪುನೀತ್ ರಾಜ್‌ಕುಮಾರ್, ಮಹೇಶ್ ಬಾಬು ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ ಮತ್ತು ಎಂ,ಎಸ್ ಧೋನಿ ಅವರು ಫ್ಲಿಪ್‌ಕಾರ್ಟ್ ಪಾಲುದಾರಿಕೆ ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470