ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2020 – ಯಾವಾಗ ಗೊತ್ತಾ?
ಮೆಗಾ ರಿಯಾಯಿತಿ ಮತ್ತು ಹಬ್ಬದ ಆಫರ್ ನೀಡುವ ಭರ್ಜರಿ ಸೇಲ್ ಇನ್ನೇನು ಫ್ಲಿಪ್ ಕಾರ್ಟ್ ನಲ್ಲಿ ಆರಂಭವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಗೆ ಕ್ಷಣಗಣನೆ ಶುರುವಾಗಿದ್ದು ಬೆಲೆ ಇಳಿಕೆ ಸೇರಿದಂತೆ ಭರ್ಜರಿ ರಿಯಾಯಿತಿಯ ಸುರಿಮಳೆಯೇ ಆಗಲಿದೆ. ಅಮೇಜಾನ್ ಸೇಲಿನ ದಿನಾಂಕದೊಂದಿಗೆ ಫ್ಲಿಪ್ ಕಾರ್ಟ್ ಮಾರಾಟದ ದಿನಾಂಕವೂ ಹತ್ತಿರ ಹತ್ತಿರವೇ ಇದೆ. ಅಮೇಜಾನ್ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್ 2020 ರೊಂದಿಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಸ್ಪರ್ಧೆಗಿಳಿದಿದೆ.

ಇಬ್ಬರ ಸ್ಪರ್ಧೆಯಿಂದಾಗಿ ಲಾಭವಾಗುವುದು ಖಂಡಿತ ಗ್ರಾಹಕನಿಗೆ. ಹೌದು, ಎರಡು ಆನ್ ಲೈನ್ ಮಾರುಕಟ್ಟೆಯ ನಡುವಿನ ಸ್ಪರ್ಧೆಯಿಂದಾಗಿ ಆಕರ್ಷಖ ಡೀಲ್ ಗಳು ಗ್ರಾಹಕರ ಕೈ ಸೇರಲಿವೆ. ವಿಭಿನ್ನ ವಸ್ತುಗಳಿಗೆ ಆಫರ್ ಇರಲಿದ್ದು ಅದರಲ್ಲಿ ಗೆಜೆಟ್ಸ್ ಗಳೂ ಕೂಡ ಸೇರಿವೆ. ಅನೇಕ ಗೆಜೆಟ್ ಗಳು ಈ ಸೇಲ್ ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಮುಂಬರುವ ಸೇಲ್ ನಲ್ಲಿ ಏನೆಲ್ಲಾ ಲಾಭಗಳಿರುತ್ತದೆ ತಿಳಿಯೋಣ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ 2020 ಸೇಲ್ ದಿನಾಂಕ
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 16 ರಿಂದ ಆರಂಭವಾಗಲಿದ್ದು ಅಕ್ಟೋಬರ್ 21 ರ ವರೆಗೆ ನಡೆಯಲಿದೆ.ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರು ಮೊದಲೇ ಆಕ್ಸಿಸ್ ಪಡೆಯಲಿದ್ದಾರೆ.ಅಂದರೆ ಅಕ್ಟೋಬರ್ 15 ರಂದೇ ಅವರಿಗೆ ಆಕ್ಸಿಸ್ ಸಿಗುತ್ತದೆ. ಈ ಸೇಲ್ ಅಮೇಜಾನ್ ಸೇಲ್ ನೊಂದಿಗೆ ಅಕ್ಟೋಬರ್ 17 ರಿಂದ ಸ್ಪರ್ಧೆಗಿಳಿಯುತ್ತದೆ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ವಿವರ
ಅನೇಕ ಎಲೆಕ್ಟ್ರಾನಿಕ್ ಗೆಜೆಟ್ ಗಳು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಇರುತ್ತದೆ. ಇದರಲ್ಲಿ ಸ್ಮಾರ್ಟ್ ಫೋನ್ ಗಳೂ ಕೂಡ ಸೇರಿದ್ದು ಪೋಕೋ ಎಂ2, ಇನ್ಫಿನಿಕ್ಸ್ ಹಾಟ್9, ರಿಯಲ್ ಮಿ ಸಿ12, ಎಲ್ ಜಿ ಜಿ8ಎಕ್ಸ್ ಮತ್ತು ಅನೇಕ ಆಫರ್ ಇರುತ್ತದೆ. ಐಫೋನ್ ಎಸ್ಇ 2020 ಗೆ ದೊಡ್ಡ ಬೆಲೆ ಇಳಿಕೆ ಇರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬಹುದು. ಫ್ಲಿಪ್ ಕಾರ್ಟ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ, ಮೊಬೈಲ್ ಪ್ರೊಟೆಕ್ಷನ್ ಕೇವಲ ಒಂದು ರುಪಾಯಿಯಿಂದ ಆರಂಭ,ಎಕ್ಸ್ ಚೇಂಜ್ ಆಫರ್ ಸೇರಿದಂತೆ ಅನೇಕ ಆಫರ್ ಗಳು ಇರಲಿದೆ.
ಸ್ಮಾರ್ಟ್ ಫೋನ್ ಗಳನ್ನು ಹೊರತು ಪಡಿಸಿ ಅನೇಕ ಎಲೆಕ್ಟ್ರಾನಿಕ್ ಗೆಜೆಟ್ ಗಳಿಗೆ ಆಫರ್ ಇರುತ್ತದೆ. 80ಶೇಕಡಾದವರೆಗೆ ರಿಯಾಯಿತಿ ಪಡೆಯುವ ಅವಕಾಶವಿದೆ. ಲ್ಯಾಪ್ ಟಾಪ್ ಗಳು, ಬ್ಲೂಟೂತ್ ಸ್ಪೀಕರ್ ಗಳು, ಸ್ಮಾರ್ಟ್ ವಾಚ್ ಗಳು, ಕ್ಯಾಮರಾಗಳು, ಟ್ಯಾಬ್ಲೆಟ್ ಗಳು ಸೇರಿದಂತೆ ಅನೇಕ ವಸ್ತುಗಳಿಗೆ ಈ ರಿಯಾಯಿತಿ ಇರುತ್ತದೆ. ಹೆಚ್ಚುವರಿ ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಮತ್ತು ಇತ್ಯಾದಿ ಹಲವು ಆಫರ್ ಗಳು ಈ ಸೇಲ್ ನಲ್ಲಿ ಇರುತ್ತದೆ.
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ 2020 – ಬಿಗ್ ಸೇವಿಂಗ್ ಡೇ
ಭಾರತೀಯ ಆನ್ ಲೈನ್ ರೀಟೈಲರ್ ಇನ್ನಷ್ಟು ಆಫರ್ ಗಳನ್ನು ನೀಡುತ್ತಿದ್ದು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಹಣ ಉಳಿತಾಯದ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಹಲವು ನೋ ಕಾಸ್ಟ್ ಇಎಂಐ ಆಯ್ಕೆಗಳು ಅನೇಕ ಪ್ರಮುಖ ಬ್ಯಾಂಕ್ ಗಳಿಂದ ನೀಡಲಾಗುತ್ತಿದೆ, ಡೆಬಿಟ್ ಕಾರ್ಡ್ ಇಎಂಐ ಆಯ್ಕೆ ಇದೆ. ಎಸ್ ಬಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಫ್ಲಿಪ್ ಕಾರ್ಟ್ 10 ಶೇಕಡಾ ರಿಯಾಯಿತಿ ನೀಡುತ್ತಿದೆ. ಈ ಟ್ರಾನ್ಸ್ಯಾಕ್ಷನ್ ನ್ನು ಪೇಟಿಎಂ ಮೂಲಕ ಮಾಡಬೇಕಾಗುತ್ತದೆ. ಕೆಲವು ಹೊಸ ಗೆಜೆಟ್ ಗಳ ಖರೀದಿಗೆ ಫ್ಲಿಪ್ ಕಾರ್ಟ್ ಅತ್ಯುತ್ತಮ ವೇದಿಕೆಯಾಗಿದೆ. ನೀವೂ ಕೂಡ ಏನನ್ನಾದರೂ ಖರೀದಿಸುವ ಇರಾದೆ ಹೊಂದಿದ್ದರೆ ಇನ್ನೊಂದೆರಡು ದಿನ ಕಾದರೆ ಬಂಪರ್ ಆಫರ್ ಸಿಗುತ್ತದೆ.


Click it and Unblock the Notifications








