Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ 'ಬಿಗ್ ಬಿಲಿಯನ್ ಡೇಸ್ ಸೇಲ್ 2025' ಘೋಷಣೆ: ಸಂಪೂರ್ಣ ಮಾಹಿತಿ!

ಇ-ಕಾಮರ್ಸ್ ದೈತ್ಯ ಕಂಪೆನಿ ಫ್ಲಿಪ್‌ಕಾರ್ಟ್ ತನ್ನ ವರ್ಷದ ಅತಿದೊಡ್ಡ ಹಬ್ಬದ ಮಾರಾಟವಾದ "ಬಿಗ್ ಬಿಲಿಯನ್ ಡೇಸ್ ಸೇಲ್ 2025" ಅನ್ನು ಘೋಷಿಸಿದೆ. ಈ ಮಾರಾಟದಲ್ಲಿ ಗ್ರಾಹಕರಿಗೆ ವಿವಿಧ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ನೀಡಲು ಫ್ಲಿಪ್‌ಕಾರ್ಟ್ ಸಿದ್ಧವಾಗಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಟೀಸರ್ ಪ್ರಕಟಿಸಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ 2025 ಮಾರಾಟದ ದಿನಾಂಕವನ್ನು "ಶೀಘ್ರದಲ್ಲೇ ಬರಲಿದೆ" ಎಂದು ನಮೂದಿಸಿದೆ. ಕಳೆದ ವರ್ಷದ ಮಾರಾಟವು ಸೆಪ್ಟೆಂಬರ್ 27 ರಂದು ಆರಂಭವಾಗಿದ್ದು, ಈ ಬಾರಿಯೂ ಅದೇ ಅವಧಿಯಲ್ಲಿ ಮಾರಾಟ ಆರಂಭವಾಗುವ ಸಾಧ್ಯತೆ ಇದೆ. ಇದು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಲಭ್ಯವಾಗಲಿದೆ.

ಈ ಬಿಗ್ ಬಿಲಿಯನ್ ಡೇಸ್ ಸೇಲ್ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳು ಸೇರಿದಂತೆ ಹಲವು ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ದೊರೆಯಲಿವೆ. ಈ ಬಾರಿ "ಡಬಲ್ ರಿಯಾಯಿತಿಗಳು", ಸೀಮಿತ-ಸಮಯದ ಕೊಡುಗೆಗಳು ಮತ್ತು ವಿಶೇಷವಾದ ಡೀಲ್‌ಗಳನ್ನು ನೀಡುವ ಮೂಲಕ ಗ್ರಾಹಕರ ಗಮನ ಸೆಳೆಯಲು ಫ್ಲಿಪ್‌ಕಾರ್ಟ್ ಮುಂದಾಗಿದೆ.

ಈ ಹಬ್ಬದ ಸೇಲ್‌ನಲ್ಲಿ, ಆಪಲ್ ಐಫೋನ್ 16, ಸ್ಯಾಮ್‌ಸಂಗ್ ಗ್ಯಾಲಕ್ಸಿ S24, ಒನ್‌ಪ್ಲಸ್ ಬಡ್ಸ್ 3 ಮತ್ತು ಮೊಟೊರೊಲಾ ಎಡ್ಜ್ 60 ಪ್ರೊ ನಂತಹ ಹೊಸ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನಿರೀಕ್ಷಿಸಲಾಗಿದೆ. ಜೊತೆಗೆ, ಇಂಟೆಲ್ ಪಿಸಿಗಳು, 55-ಇಂಚಿನ ಸ್ಮಾರ್ಟ್ ಟಿವಿಗಳು ಮತ್ತು ಫ್ರಂಟ್-ಲೋಡಿಂಗ್ ವಾಷಿಂಗ್ ಮೆಷಿನ್‌ಗಳಂತಹ ದೊಡ್ಡ ವಸ್ತುಗಳ ಮೇಲೂ ಲಾಭದಾಯಕ ಡೀಲ್‌ಗಳು ಸಿಗಲಿವೆ ಎಂದು ಕಂಪೆನಿಯು ತಿಳಿಸಿದೆ.

ಫ್ಲಿಪ್‌ಕಾರ್ಟ್ 'ಬಿಗ್ ಬಿಲಿಯನ್ ಡೇಸ್ ಸೇಲ್ 2025' ಘೋಷಣೆ: ಸಂಪೂರ್ಣ ಮಾಹಿತಿ!

ಖರೀದಿದಾರರು ತಮ್ಮ ಉಳಿತಾಯವನ್ನು ಹೆಚ್ಚಿಸಲು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 10 ಪ್ರತಿಶತ ತತ್‌ಕ್ಷಣ ರಿಯಾಯಿತಿ ದೊರೆಯುವ ನಿರೀಕ್ಷೆ ಇದೆ. ಈ ಬ್ಯಾಂಕ್ ರಿಯಾಯಿತಿಗಳ ಜೊತೆಗೆ ವಿನಿಮಯ ಡೀಲ್‌ಗಳಂತಹ ಹಲವು ಆಯ್ಕೆಗಳು ಲಭ್ಯವಿವೆ.

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಗೆ ಸ್ಪರ್ಧೆ!
ಈ ಬೃಹತ್ ಹಬ್ಬದ ಮಾರಾಟದ ಘೋಷಣೆಯು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಗೆ ಸ್ಪರ್ಧೆಯೊಡ್ಡಲಿದೆ. ಅಮೆಜಾನ್ ಕೂಡಾ ತನ್ನ ಮಾರಾಟ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಪ್ರತಿ ವರ್ಷ ಈ ಎರಡೂ ಇ-ಕಾಮರ್ಸ್ ದೈತ್ಯರು ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಭಾರಿ ರಿಯಾಯಿತಿಗಳು ಮತ್ತು ವಿಶೇಷ ಕೊಡುಗೆಗಳನ್ನು ಪ್ರಕಟಿಸುತ್ತವೆ.

ಫ್ಲಿಪ್‌ಕಾರ್ಟ್ ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್‌, ಫ್ಯಾಷನ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಗಮನಹರಿಸಿದರೆ, ಅಮೆಜಾನ್ ಮತ್ತಷ್ಟು ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಈ ಪೈಪೋಟಿಯು ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿದ್ದು, ಉತ್ತಮ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿಕೊಡುತ್ತದೆ.

ಈ ವರ್ಷದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡುವಿನ ಪೈಪೋಟಿಯು ಅತ್ಯಂತ ತೀವ್ರವಾಗಿರಲಿದೆ. ನೀವು ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಯಾವ ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿದ್ದೀರಿ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Flipkart has announced its Big Billion Days Sale 2025, promising massive discounts on iPhone 16, Samsung Galaxy S24, laptops, TVs, and more, with special bank and EMI offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+